ಶಿವಪ್ರಸಾದ್ ರೈ

ಮೈಸೂರು: ಔಷಧಗಳ ಗುಣಮಟ್ಟವನ್ನು ತ್ವರಿತವಾಗಿ ಪರೀಕ್ಷಿಸುವ ಉದ್ದೇಶದಿಂದ ಮೈಸೂರಿನಲ್ಲಿ ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯ ಆರಂಭವಾಗಲಿದ್ದು, ಅದಕ್ಕಾಗಿ ಅಧಿಕಾರಿ, ಸಿಬ್ಬಂದಿ ಹಾಗೂ ಯಂತ್ರೋಪಕರಣಗಳನ್ನು ನಿಯೋಜಿಸುವಂತೆ ಸರ್ಕಾರ ಸೂಚಿಸಿದೆ.

ಆಸ್ಪತ್ರೆಗಳಿಗೆ ಸರಬರಾಜು ಆಗುವ ಔಷಧಗಳ ಪರೀಕ್ಷೆ ಕಡ್ಡಾಯವಾಗಿದ್ದು, ಪ್ರಸ್ತುತ ಬೆಂಗಳೂರು, ಹುಬ್ಬಳ್ಳಿ ಹಾಗೂ ಬಳ್ಳಾರಿ ಯಲ್ಲಿ ಔಷಧ ಪರೀಕ್ಷಾ ಪ್ರಯೋಗಾಲಯ ಇವೆ. ಮಂಗಳೂರು, ಉಡುಪಿ, ಮಡಿಕೇರಿ, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳು ಔಷಧ ಪರೀಕ್ಷೆಗೆ ಬೆಂಗಳೂರು ಕೇಂದ್ರವನ್ನು ಅವಲಂಬಿಸಿದ್ದವು. ಅಲ್ಲಿ ಒತ್ತಡ ಹೆಚ್ಚಿರುವುದರಿಂದ ಪರೀಕ್ಷೆಯ ವರದಿಗಾಗಿ ಮೂರು ತಿಂಗಳು ಕಾಯುವ ಸ್ಥಿತಿ ನಿರ್ಮಾಣವಾಗಿತ್ತು.

ಹೀಗಾಗಿ ಮೈಸೂರಿನಲ್ಲೂ ಪ್ರಾದೇಶಿಕ ಔಷಧ ಪರೀಕ್ಷೆಯ ಕೇಂದ್ರ ತೆರೆಯಬೇಕು ಎಂಬ ಬೇಡಿಕೆ ಇಲಾಖೆಯ ಮಟ್ಟದಲ್ಲಿ ಇತ್ತು. ಇದೀಗ ಇಲ್ಲಿನ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಪ್ರಯೋಗಾಲಯದಲ್ಲಿ ಪರೀಕ್ಷಾ ಕೇಂದ್ರ ತೆರೆಯಲು ಸರ್ಕಾರ ಆದೇಶಿಸಿದೆ. ಇದು ಬೆಂಗಳೂರು ಕೇಂದ್ರದ ಮೇಲಿದ್ದ ಹೊರೆಯನ್ನು ತಪ್ಪಿಸುವುದರೊಂದಿಗೆ, ತ್ವರಿತವಾಗಿ ಔಷಧಗಳ ಸರಬರಾಜಿಗೂ ಅವಕಾಶ ಮಾಡಿಕೊಡಲಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯದ (ಆರ್ಡಿಟಿಎಲ್) ಮೂಲಕ ಮಾರುಕಟ್ಟೆಯಲ್ಲಿನ ಔಷಧಗಳ ಗುಣಮಟ್ಟ, ಸುರಕ್ಷತೆ ಮತ್ತು ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ನಕಲಿ ಔಷಧಗಳನ್ನು ಪತ್ತೆಹಚ್ಚಲು ಮತ್ತು ಔಷಧ ನಿಯಂತ್ರಣ ಕಾಯ್ದೆಗಳ ನಿಯಮ ಪಾಲನೆ ಬಗ್ಗೆ ಪರಿಶೀಲಿಸಲಾಗುತ್ತದೆ. ಔಷಧ ಪರಿವೀಕ್ಷಕರಿಂದ ಬಂದಿರುವ ಮಾದರಿ ಪರೀಕ್ಷಿಸಿ, ವರದಿ ನೀಡಲಾಗುತ್ತದೆ. ಆದರೆ ಬೆಂಗಳೂರು ಪ್ರಾದೇಶಿಕ ಕೇಂದ್ರಕ್ಕಿದ್ದ ಒತ್ತಡದಿಂದ ಈ ಎಲ್ಲಾ ಕೆಲಸಗಳು ತ್ವರಿತವಾಗಿ ನಡೆಯುತ್ತಿರಲಿಲ್ಲ. ಇದರಿಂದಾಗಿ ತುರ್ತು ಸಮಯದಲ್ಲಿ ಔಷಧ ಸರಬರಾಜಿಗೆ ತೊಂದರೆಯಾಗುತ್ತಿತ್ತು.

ಮೈಸೂರಿನ ಪರೀಕ್ಷಾ ಕೇಂದ್ರಕ್ಕೆ ಹೆಚ್ಚಿನ ಆರ್ಥಿಕ ಅವಶ್ಯಕತೆಗಳಿಲ್ಲದೆ ಇಲಾಖೆಯೊಳಗಿನ ಸಂಪನ್ಮೂಲ ಬಳಸಲು ನಿರ್ಧರಿಸಲಾಗಿದೆ. ಬೆಂಗಳೂರಿನಿಂದ ಒಬ್ಬರು ವೈಜ್ಞಾನಿಕ ಅಧಿಕಾರಿ, ಬೆಂಗಳೂರು ಕೇಂದ್ರದಿಂದ ನಾಲ್ವರು, ಹುಬ್ಬಳ್ಳಿ, ಬಳ್ಳಾರಿಯಿಂದ ತಲಾ ಇಬ್ಬರು ಕಿರಿಯ ವೈಜ್ಞಾನಿಕ ಅಧಿಕಾರಿಗಳು, ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ತಲಾ ಒಬ್ಬ ಪ್ರಯೋಗಾಲಯ ಮೇಲ್ವಿಚಾರಕರು, ಬೆಂಗಳೂರು ಹಾಗೂ ಬಳ್ಳಾರಿಯಿಂದ ತಲಾ 1 ಪ್ರಯೋಗಶಾಲಾ ತಂತ್ರಜ್ಞರನ್ನು ಮೈಸೂರಿನ ಹೊಸ ಔಷಧ ಪರೀಕ್ಷಾ ಕೇಂದ್ರಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಸದ್ಯದಲ್ಲೇ ಪ್ರಯೋಗಾಲಯ ಆರಂಭವಾಗಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-40-1397512165

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.