ಮೈಸೂರು: ‘ಹೊಸ ವಿಷಯಗಳ ಅಧ್ಯಯನ ನಿರಂತರ ಕುತೂಹಲಕಾರಿಯಾಗಿರಬೇಕು. ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಇ.ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಎನ್.ರಂಗನಾಥ್ ಹೇಳಿದರು.

ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದಿಂದ ಈಚೆಗೆ ನಡೆದ ‘ರಾಗಿ- 2026’ (ರೀಸೆಂಟ್ ಅಡ್ವಾನ್ಸಸ್ ಇನ್ ಜಿಯೋಟೆಕ್ನಿಕ್ಸ್ ಫಾರ್ ಇನ್ಫ್ರಾಸ್ಟ್ರಕ್ಚರ್) ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆಧುನಿಕ ತಂತ್ರಜ್ಞಾನದ ಜಗತ್ತು ಅನೇಕ ಹೊಸತನದ ಸಂಶೋಧನೆಗಳಿಗೆ, ಅನ್ವೇಷಣೆಗಳಿಗೆ ಸಾಕ್ಷಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸದಾ ಅಧ್ಯಯನಶೀಲರಾಗಿರಬೇಕು’ ಎಂದರು.

ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಶಿವಶಂಕರ್ ಕಾರ್ಯಾಗಾರದ ನಡಾವಳಿಗಳ ಅನುಕ್ರಮಣಿಕೆ ಪುಸ್ತಕ ಬಿಡುಗಡೆ ಮಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಲ್.ಅರುಣ್ಕುಮಾರ್, ಎಸಿಸಿಇ ಸಂಸ್ಥೆಯ ಅಧ್ಯಕ್ಷ ಎಸ್.ಬಿ.ಬಸವರಾಜ್, ಪ್ರಾಂಶುಪಾಲ ಎಲ್.ಬಸವರಾಜ್ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಎಂಜಿನಿಯರ್ ಜಯಕುಮಾರ್ ಶುಕ್ಲಾ, ಸಹ ಪ್ರಾಧ್ಯಾಪಕರಾದ ಅಮರ್ನಾಥ್ ಹೆಗ್ಡೆ, ಪ್ರಸನ್ನ ಆರ್ ಭಾಗವಹಿಸಿ ದ್ದರು. ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಖಜಾಂಚಿ ಆರ್.ವೀರೇಶ್, ಟ್ರಸ್ಟಿ ಎಚ್.ವೆಂಕಟೇಶ್, ಎಂಐಟಿ ಎಂಜಿನಿಯರಿಂಗ್ ಕಾಲೇಜು ಆಧ್ಯಕ್ಷ ನರೇಶ್ ಕುಮಾರ್, ಪ್ರಾಂಶುಪಾಲರಾದ ಸಿ.ನಟರಾಜು, ಬಿ.ಎಸ್.ನಾಗೇಂದ್ರ ಪರಾಶರ್, ಶೋಭಾ ಹಾಗೂ ಎಸ್.ಬಿ.ಬಸವರಾಜ್, ಸಿ.ಎಸ್.ಶ್ರೀಕಾಂತ್, ಎಸ್.ಕೆ.ಪ್ರಸಾದ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-39-1916360407

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.