ಮೈಸೂರು: ಒಳಮೀಸಲಾತಿಯಿಂದ ಎಡಗೈ ಹಾಗೂ ಬಲಗೈ ಸಮುದಾಯದ ನಡುವೆ ಉದ್ಭವಿಸಿರುವ ಅಭಿಪ್ರಾಯ ಬೇಧ ಹೋಗಲಾಡಿಸಿ ಸೌಹಾರ್ದ ಮೂಡಿಸಲು ಏ.7ರಂದು ರಮಾಗೋವಿಂದ ರಂಗಮಂದಿರದಲ್ಲಿ ವಿಚಾರಸಂಕಿರಣ ನಡೆಸಲು ‘ಒಂದಾಗೋಣ ಕೈ ಜೋಡಿಸಿ’ ಸಂಘಟನೆಯು ತೀರ್ಮಾನಿಸಿತು.

ನೃಪತುಂಗ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸಂಘಟನೆಯ ಮುಖಂಡ ಡಾ.ಮ.ಪು. ಪೂರ್ಣಾನಂದ, ‘ಚಿಂತಕರಾದ ರವಿವರ್ಮ ಕುಮಾರ್, ಕೋಟಗನಹಳ್ಳಿ ರಾಮಯ್ಯ, ಲಕ್ಷ್ಮಿಪತಿ ಕೋಲಾರ ಮೊದಲಾದವರ ಉಪನ್ಯಾಸ ಹಮ್ಮಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.

‘ರೋಸ್ಟರ್ ಪದ್ಧತಿ ಹಾಗೂ ತಳ ಸಮುದಾಯದ ಸಾಂಸ್ಕೃತಿಕ ಹೆಚ್ಚುಗಾರಿಕೆಯ ಅರಿವು ಮೂಡಿಸಬೇಕಿದೆ. ಸಮುದಾಯ ಅಥವಾ ವ್ಯಕ್ತಿಗತ ಟೀಕೆ ಮಾಡದೆ, ಸಮುದಾಯದ ನಡುವೆ ಸೌಹಾರ್ದ ಮೂಡಿಸುವ ಪ್ರಯತ್ನ ಮಾಡಲಾಗುವುದು. ಈಗಾಗಲೇ ಕೋಲಾರ ಹಾಗೂ ತುಮಕೂರಿನಲ್ಲಿ ಈ ರೀತಿಯ ಪ್ರಯತ್ನ ನಡೆಯುತ್ತಿದ್ದು, ಅದರೊಂದಿಗೆ ಜೋಡಿಸಿಕೊಳ್ಳುವುದರ ಜೊತೆಗೆ ರಾಜ್ಯದಾದ್ಯಂತ ಕಾರ್ಯಕ್ರಮ ವಿಸ್ತರಿಸಲಾಗುವುದು’ ಎಂದು ತಿಳಿಸಿದರು.

‘ಇಬ್ಬರ ಜಗಳದಲ್ಲಿ ಮೂರನೇಯವ ಲಾಭ ಪಡೆದ ಎನ್ನುವಂತೆ ಆಗಬಾರದು. ಈ ಬಗ್ಗೆ ಸಮುದಾಯಗಳಿಗೆ ಮನ ಮುಟ್ಟುವಂತೆ ತಿಳಿಸುವ ಅನಿವಾರ್ಯತೆ ಇದ್ದು, ಅದನ್ನು ಸಾಕಾರಗೊಳಿಸಲಾಗುವುದು’ ಎಂದು ಹೇಳಿದರು.

ಚಿಂತಕ ಕಾಳೇಗೌಡ ನಾಗವಾರ ಮಾತನಾಡಿ, ‘ಸಾಮಾಜಿಕ ನ್ಯಾಯದ ಕುರಿತು ಅನೇಕ ಕಾಲದಿಂದ ಚರ್ಚೆ ನಡೆಯುತ್ತಲೇ ಇದೆ. ಪ್ರಗತಿಪರರು ಅದಕ್ಕಾಗಿ ತಮ್ಮದೇ ವಿಚಾರ ಮಂಡನೆಯನ್ನೂ ಮಾಡಿದ್ದಾರೆ. ಒಳ ಮೀಸಲಾತಿಗೆ ಗಣತಿ ನಡೆದಾಗ ಕೀಳರಿಮೆ ಹಾಗೂ ಗೊಂದಲದಿಂದ ಮಾಹಿತಿ ಸರಿಯಾಗಿ ನೀಡಿಲ್ಲ ಎಂಬ ದೂರುಗಳೂ ಕೇಳಿಬರುತ್ತಿವೆ. ಆದರೆ ಸರ್ಕಾರಕ್ಕೆ ಸಹಾಯ ಮಾಡುವ ಅವಕಾಶ ಇರುವಾಗ ಗೊಂದಲ ಮಾಡಿಕೊಂಡು ಕಚ್ಚಾಟ ಮಾಡುತ್ತಿರುವುದು ವಿಷಾದನೀಯ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೀಸಲಾತಿ ಕುರಿತು ಪ್ರತಿ ರಾಜ್ಯದಲ್ಲಿ ಭಿನ್ನ ಸಮಸ್ಯೆ ಇದೆ. ಇವನ್ನು ಸರಿದೂಗಿಸಿಕೊಂಡು ಸರ್ವಜನಾಂಗದ ಶಾಂತಿಯ ತೋಟ ಆಗುವತ್ತ ಹೆಜ್ಜೆ ಹಾಕಬೇಕು. ತಪ್ಪು ಮಾಹಿತಿ ನೀಡದೆ, ತಾಳ್ಮೆಯಿಂದ ಧ್ವನಿ ಇಲ್ಲದವರಿಗೆ ನ್ಯಾಯ ಒದಗಿಸಬೇಕು. ಅಸ್ಪೃಶ್ಯತೆ ಜಾತೀಯತೆಯಿಂದ ಲಾಭ ಪಡೆಯುವವರೇ ಹೆಚ್ಚಾಗಿದ್ದು, ಅವರಿಂದ ದೂರ ಇರಬೇಕು’ ಎಂದು ಹೇಳಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಉಗ್ರ ನರಸಿಂಹೇಗೌಡ, ನಾರಾಯಣಪ್ಪ, ಈ.ಧನಂಜಯ ಎಲಿಯೂರು, ಜಿ.ಪಿ.ಬಸವರಾಜು, ಸಂಜಯ್ ಕುಮಾರ್, ಆರ್.ಎಸ್.ದೊಡ್ಡಣ್ಣ, ಮಹೇಶ್ ದಳಪತಿ, ಜೆ.ಸೋಮಣ್ಣ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-39-1786358979

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.