ಮೈಸೂರು: ‘ಸಚಿವ ಸಂಪುಟವು ಒಳ ಮೀಸಲಾತಿಯಲ್ಲಿ ಹೊಸ ಸೂತ್ರ ಪ್ರಕಟಿಸಿರುವುದು ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ಸಂದ ಜಯವಾಗಿದೆ. ಈ ಸೂತ್ರ ಪರಿಶೀಲಿಸಿ ಹೋರಾಟ ನಿರ್ಧರಿಸಲಾಗುವುದು’ ಎಂದು ವಕೀಲ ಅರುಣ್ ಕುಮಾರ್ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಸಮುದಾಯಕ್ಕೆ ಯಾವ ರೀತಿ ನ್ಯಾಯ ದೊರೆಯುತ್ತದೆ. ಸೂತ್ರದಲ್ಲಿ ರೋಸ್ಟರ್ ಏನು ಎಂಬುದನ್ನು ಗಮನಿಸಿದ ಬಳಿಕ, ಸೂತ್ರವನ್ನು ಸ್ವಾಗತಿಸಬೇಕೇ, ಹೋರಾಟ ಮಾಡಬೇಕೇ ಎಂಬುದನ್ನು ನಿರ್ಧರಿಸಲಾಗುವುದು’ ಎಂದರು.

‘ಸಮುದಾಯದ ಹಿಂದುಳಿದಿರುವಿಕೆ, ಪ್ರಾತಿನಿಧ್ಯ ಹಾಗೂ ದತ್ತಾಂಶದ ಆಧಾರದ ಮೇಲೆ ಒಳ ಮೀಸಲಾತಿ ಜಾರಿಗೊಳಿಸಬೇಕು. ಇತರ ರಾಜ್ಯದಲ್ಲಿ ಒಳಮೀಸಲಾತಿ ಸಮಸ್ಯೆ ಆಗಿಲ್ಲ. ಸುಪ್ರೀಂಕೋರ್ಟ್ ಸೂತ್ರ ಪಾಲಿಸದೇ ವೋಟ್ ಬ್ಯಾಂಕ್ ರಾಜಕೀಯ ಮಾಡಲಾಗಿದೆ’ ಎಂದು ಆರೋಪಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿಗೆ ಅಪಾಯ ಬರುವ ಅಂಜಿಕೆಯಲ್ಲಿ ಹೊಸ ಸೂತ್ರ ಮುಂದಿರಿಸಿದ್ದಾರೆ. ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾದಿಗ ಸಮುದಾಯಕ್ಕೆ ನಿರಂತರವಾಗಿ ಅನ್ಯಾಯ ಮಾಡಿದ್ದಾರೆ. 15ಕ್ಕಿಂತ ಕಡಿಮೆ ಹುದ್ದೆ ನೇಮಕದ ವೇಳೆ ಒಳಮೀಸಲಾತಿ ಅನ್ವಯ ಆಗದೆಂದಿದ್ದಾರೆ. ವಿಶವಿದ್ಯಾಲಯದ ಅಧ್ಯಾಪಕ ಹುದ್ದೆಗಳು 15ಕ್ಕಿಂತ ಕಡಿಮೆ ಇರುತ್ತವೆ. ಇಂಥ ಕಡೆ ಸಮುದಾಯವು ಮತ್ತೆ ಅನ್ಯಾಯಕ್ಕೆ ಒಳಗಾಗಬೇಕಾಗುತ್ತದೆ’ ಎಂದರು.

ಗೋಷ್ಠಿಯಲ್ಲಿ ಎಂ.ಆರ್.ಸುರೇಂದ್ರ ಕುಮಾರ್, ಮಲ್ಲು, ಕಾರ್ತಿಕ್, ಶ್ರೀನಿವಾಸ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-39-2038507665

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.