ಮೈಸೂರು: ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕೆಆರ್ಐಇಎಸ್)ದಿಂದ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಪಿಯುಸಿ ವಸತಿ ಕಾಲೇಜುಗಳು 2025–26ನೇ ಸಾಲಿನ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿವೆ.

ಜಿಲ್ಲೆಯಲ್ಲಿ ಕೆಆರ್ಐಇಎಸ್ ಅಡಿ 3 ಪಿಯುಸಿ ವಸತಿ ಕಾಲೇಜುಗಳನ್ನು ನಡೆಸಲಾಗುತ್ತಿದೆ. ಇಲ್ಲಿ ವಿಜ್ಞಾನ ವಿಷಯ ಮಾತ್ರವೇ ಬೋಧಿಸಲಾಗುತ್ತಿರುವುದು ವಿಶೇಷ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ತವರಿನಲ್ಲಿ ಉತ್ತಮ ಸಾಧನೆ ಕಂಡುಬಂದಿದೆ.

ಮೈಸೂರು ತಾಲ್ಲೂಕಿನ ವರಕೋಡು ಮೊರಾರ್ಜಿ ದೇಸಾಯಿ ಪಿಯುಸಿ ವಸತಿ ಕಾಲೇಜು, ಎಸ್.ಹೊಸಕೋಟೆಯ ಮೊರಾರ್ಜಿ ದೇಸಾಯಿ ಪಿಯುಸಿ ವಸತಿ ಕಾಲೇಜು ಹಾಗೂ ತಗಡೂರಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಪಿಯುಸಿ ವಸತಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ವಿಶೇಷವೆಂದರೆ, ಈ ಮೂರು ಕಾಲೇಜುಗಳೂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುತ್ತವೆ.

ಈ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಫಲಿತಾಂಶದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ.

ಹಳ್ಳಿಯವರೇ: ಗ್ರಾಮೀಣ ಪ್ರದೇಶಗಳ, ಬಡತನ ಹಾಗೂ ಮಧ್ಯಮ ವರ್ಗದ ಹಿನ್ನೆಲೆಯ ಮಕ್ಕಳೇ ಹೆಚ್ಚಾಗಿ ದಾಖಲಾಗುವ ಕಾಲೇಜುಗಳಿವು. ಪ್ರವೇಶ ಪರೀಕ್ಷೆಯ ಮೂಲಕ ಅವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕಲಿಕೆಗೆ ಪೂರಕವಾದ ವಾತಾವರಣದೊಂದಿಗೆ, ಹಲವು ಸೌಲಭ್ಯಗಳನ್ನೂ ಸರ್ಕಾರದಿಂದ ಒದಗಿಸಲಾಗುತ್ತಿದೆ. ಇದನ್ನು ಬಳಸಿಕೊಂಡ ವಿದ್ಯಾರ್ಥಿಗಳು ಒಳ್ಳೆಯ ಫಲಿತಾಂಶವನ್ನು ತಂದುಕೊಡುವ ಮೂಲಕ, ತಮ್ಮ ಶೈಕ್ಷಣಿಕ ಭವಿಷ್ಯದ ಹಾದಿಯನ್ನೂ ಉತ್ತಮಪಡಿಸಿಕೊಂಡಿದ್ದಾರೆ.

ಟಾಪರ್ಗಳಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಿದ್ದಾರೆ. ವಸತಿ ಕಾಲೇಜುಗಳ ಪೈಕಿ ರಾಜ್ಯಕ್ಕೆ 3ನೇ ಸ್ಥಾನವೂ ದೊರೆತಿದೆ.

ಸಾಗರ್ ಟಾಪರ್: ಎಸ್. ಹೊಸಕೋಟೆಯ ಮೊರಾರ್ಜಿ ದೇಸಾಯಿ ಪಿಯುಸಿ ವಸತಿ ಕಾಲೇಜಿನಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಎಲ್ಲ 64 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು ಶೇ 100ರಷ್ಟು ಫಲಿತಾಂಶ ದಾಖಲಾಗಿದೆ. 31 ಮಂದಿ ಡಿಸ್ಟಿಂಕ್ಷನ್, 33 ಮಂದಿ ಪ್ರಥಮಶ್ರೇಣಿ ಪಡೆದಿದ್ದಾರೆ. ಎನ್. ಸಾಗರ್ 580 ಅಂಕ (ಶೇ 96.66) ಗಳಿಸಿ ಕಾಲೇಜಿನ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ರಂಜಿತಾ 575 (ಶೇ 95.83), ಚೈತ್ರಾ 574 (ಶೇ 95.66), ಚಂದನ 573 (ಶೇ 95.50), ಲಲಿತಾ 566 (ಶೇ 94.33) ಅಂಕಗಳೊಂದಿಗೆ ಕ್ರಮವಾಗಿ 2ರಿಂದ 5ನೇ ಸ್ಥಾನಗಳನ್ನು ಗಳಿಸಿ ಮಿಂಚಿದ್ದಾರೆ. ಎಲ್ಲ ವಿಷಯದಲ್ಲೂ ಶೇ 100 ಫಲಿತಾಂಶ ಬಂದಿರುವುದು ಈ ಬಾರಿಯ ಹೆಗ್ಗಳಿಕೆಯಾಗಿದೆ.

ಐಶ್ವರ್ಯಾ ಮಿಂಚು: ವರಕೋಡು ಮೊರಾರ್ಜಿ ದೇಸಾಯಿ ಪಿಯುಸಿ ವಸತಿ ಕಾಲೇಜಿನಲ್ಲಿ ಗಣಿತ ವಿಷಯದಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಅನುತ್ತೀರ್ಣ
ರಾಗಿದ್ದು, ಶೇ 98.66ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ತೆಗೆದುಕೊಂಡಿದ್ದ 75 ವಿದ್ಯಾರ್ಥಿಗಳಲ್ಲಿ 74 ಮಂದಿ ತೇರ್ಗಡೆಯಾಗಿದ್ದಾರೆ. 31 ಡಿಸ್ಟಿಂಕ್ಷನ್, 42 ಪ್ರಥಮ ಶ್ರೇಣಿ, ಒಂದು ದ್ವಿತೀಯ ಶ್ರೇಣಿಯನ್ನು ಕಾಲೇಜು ಪಡೆದಿದೆ. ಇಲ್ಲಿನ ವಿದ್ಯಾರ್ಥಿನಿ ಐಶ್ವರ್ಯಾ ಅವರು 589 ಅಂಕಗಳನ್ನು ಪಡೆದು ರಾಜ್ಯದಲ್ಲಿನ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ 72 ವಸತಿ ಕಾಲೇಜುಗಳ ಪೈಕಿ 3ನೇ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಕಾಲೇಜು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಪೂರ್ಣಿಮಾಗೆ ಶ್ರೇಯ: ತಗಡೂರು ಮೊರಾರ್ಜಿ ದೇಸಾಯಿ ಪಿಯುಸಿ ವಸತಿ ಕಾಲೇಜಿನಲ್ಲಿ ರಸಾಯನವಿಜ್ಞಾನ ವಿಷಯದಲ್ಲಿ ಒಬ್ಬ ವಿದ್ಯಾರ್ಥಿಯಷ್ಟೆ ಫೇಲಾಗಿದ್ದು, ಶೇ 98.66ರಷ್ಟು ಫಲಿತಾಂಶ ದಾಖಲಾಗಿದೆ. 62ರಲ್ಲಿ 61 ಮಂದಿ ಪಾಸಾಗಿದ್ದಾರೆ. 14 ಡಿಸ್ಟಿಂಕ್ಷನ್, 45 ಪ್ರಥಮ ಶ್ರೇಣಿ ಹಾಗೂ ಮೂರು ದ್ವಿತೀಯಶ್ರೇಣಿಯನ್ನು ಕಾಲೇಜು ಪಡೆದುಕೊಂಡಿದೆ.

ಪೂರ್ಣಿಮಾ 557 (ಶೇ 92.83) ಕಾಲೇಜಿನ ಟಾಪರ್ ಎನಿಸಿದ್ದಾರೆ. ಪೂರ್ಣಿಮಾ ಎಚ್.ಎಂ. 546 (ಶೇ 91) 2ನೇ, ಸಿಂಚನಾ ಎಸ್. 544 (ಶೇ 90.67) 3ನೇ ಟಾಪರ್ ಆಗಿದ್ದಾರೆ.

ರಸಾಯನವಿಜ್ಞಾನ (ಶೇ 98.38) ಹೊರತುಪಡಿಸಿದರೆ ಉಳಿದೆಲ್ಲ ವಿಷಯಗಳಲ್ಲೂ ಪೂರ್ಣ ಫಲಿತಾಂಶವನ್ನು ಕಾಲೇಜು ಗಳಿಸಿದೆ.

ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗಾಗಿ ಇರುವ ಈ ವಸತಿ ಕಾಲೇಜುಗಳು ಅಂಬೇಡ್ಕರ್ರವರ ಆಶಯಗಳನ್ನು ಸಾಕಾರಗೊಳಿಸುತ್ತಿವೆ. ಉತ್ತಮ ಫಲಿತಾಂಶ ಖುಷಿ ತಂದಿದೆ
ಡಾ.ಎಚ್.ಸಿ. ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ

ಏನೇನು ತರಬೇತಿ ನೀಡಲಾಯಿತು?

ಈ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿ, ಮಾದರಿ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿತ್ತು. ಪೂರ್ವಭಾವಿ ಪರೀಕ್ಷೆಗಳ ಫಲಿತಾಂಶ ಆಧರಿಸಿ ಬಹಳಷ್ಟು ಪರಾಮರ್ಶೆ ನಡೆದಿತ್ತು. ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿತ್ತು.

‘ಕ್ರೈಸ್ ಕಾಮನ್ ಟೆಸ್ಟ್’ ನಡೆಸಲಾಗಿತ್ತು. ಆದನ್ನು ಆಧರಿಸಿ ಪರಾಮರ್ಶೆ ಮಾಡಲಾಗಿತ್ತು, ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗೆ ಹೆಚ್ಚಿನ ಗಮನ ನೀಡಲಾಗಿತ್ತು. ಸಂಸ್ಥೆವಾರು ‘ಮೈಕ್ರೋಪ್ಲಾನ್’ ಸಿದ್ಧಪಡಿಸಲಾಗಿತ್ತು. ವಿದ್ಯಾರ್ಥಿ, ಚಾಪ್ಟರ್ವಾರು ಮೈಕ್ರೋಪ್ಲಾನ್ ತಯಾರಿಸಿ ಅದರಂತೆ ಸಜ್ಜುಗೊಳಿಸಲಾಗಿತ್ತು.

‘ವಿದ್ಯಾರ್ಥಿಗಳ ಕಲಿಕಾ ಮಟ್ಟ ಆಧರಿಸಿ ‘ಎ’, ‘ಬಿ’ ಹಾಗೂ ‘ಸಿ’ ಗ್ರೂಪ್ ಮಾಡಿಕೊಂಡು ಪ್ರತ್ಯೇಕವಾಗಿ ತರಗತಿಗಳನ್ನು ನಡೆಸಿ ಅಭ್ಯಾಸ ಮಾಡಿಸಲಾಯಿತು. ಡಿಸೆಂಬರ್ ಮೊದಲ ವಾರದಲ್ಲೇ ಪಠ್ಯಕ್ರಮ ಬೋಧನೆ ಮುಗಿದಿತ್ತು. ನಂತರ ಪುನರಾವರ್ತನೆಗೆ ಆದ್ಯತೆ ನೀಡಿ ಪುನರ್ಮನನ ಮಾಡಿಸಲಾಯಿತು. ಇದೆಲ್ಲದರ ಪರಿಣಾಮ, ಅನುತ್ತೀರ್ಣ ಪ್ರಮಾಣ ಕಡಿಮೆಯಾಯಿತು. ಇದಕ್ಕಾಗಿ ವಿಷಯವಾರು ಉಪನ್ಯಾಸಕರು ಬಹಳ ಶ್ರಮಿಸಿದರು’ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

ಉತ್ತಮ ಸಾಧನೆ

‘ಹೋದ ವರ್ಷಕ್ಕಿಂತ ಈ ಬಾರಿ ಫಲಿತಾಂಶ ಜಾಸ್ತಿಯಾಗಿದೆ. ಬಡತನದ ಹಿನ್ನೆಲೆ ಹಾಗೂ ಹಳ್ಳಿಗಳ ವಿದ್ಯಾರ್ಥಿಗಳೇ ಹೆಚ್ಚಿದ್ದು, ಅವರು ಉತ್ತಮ ಸಾಧನೆ ತೋರಿರುವುದು ಅಭಿನಂದನಾರ್ಹ. ಈ ನಿಟ್ಟಿನಲ್ಲಿ ಉಪನ್ಯಾಸಕರ ಕಾಳಜಿಯೂ ದೊಡ್ಡದು’ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ‘ಪ್ರಜಾವಾಣಿ’ಯೊಂದಿಗೆ ಹರ್ಷ ವ್ಯಕ್ತಪಡಿಸಿದರು.

ಪ್ರಸಕ್ತ ಸಾಲಿನಿಂದ ಹೊಸದಾಗಿ ಮತ್ತೆರಡು ಕಾಲೇಜುಗಳಲ್ಲಿ ಅವಕಾಶವಿದೆ. ತಿ.ನರಸೀಪುರ ತಾಲ್ಲೂಕಿನ ಸೋಸಲೆಯಲ್ಲಿ ಹಾಗೂ ಎಚ್.ಡಿ. ಕೋಟೆ ತಾಲ್ಲೂಕು ಕೆ.ಬೆಳತ್ತೂರಿನಲ್ಲಿ (ಪಿಯುಸಿ ವಿಜ್ಞಾನ) ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರವೇಶ ಪಡೆಯಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.