ಸರಗೂರು: ಪತ್ನಿ ಮನೆಗೆ ಹೋಗಿ ವಾಪಸ್ಸಾಗಿದ್ದ ತಾಲ್ಲೂಕಿನ ಕುರ್ಣೇ ಗಾಲ ಗ್ರಾಮದ ಜವರಪ್ಪ(38) ಕೊಲೆಯಾಗಿದ್ದಾರೆ.

‘ಪತ್ನಿ ಮನೆ ಇರುವ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಸಮೀಪದ ಹಾಡ್ಯ ಗ್ರಾಮಕ್ಕೆ ಹೋಗಿ, ಶುಕ್ರವಾರ ಬೆಳಿಗ್ಗೆ ಕೆಲಸಕ್ಕೆ ಹೋಗಲೆಂದು ಮನೆಗೆ ಮರಳಿದ್ದರು. ದುಷ್ಕರ್ಮಿಗಳು ಕೊಲೆ ಮಾಡಿ ಕುರ್ಣೇಗಾಲ ಸಮೀಪದ ರಸ್ತೆ ಬದಿ ಶವ ಎಸೆದು ಹೋಗಿದ್ದಾರೆ’ ಎಂದು ಮೃತರ ತಮ್ಮ ರವಿ ಸರಗೂರು ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.

ಡಿವೈಎಸ್ಪಿ ರಾಜು, ಸಿಪಿಐ ಪ್ರಸನ್ನಕುಮಾರ್, ಪಿಎಸ್ಐ ಆರ್.ಕಿರಣ್, ಚಂದ್ರಹಾಸ್, ಗೋಪಾಲ್, ಎಎಸ್ಐ ಕೃಷ್ಣಕುಮಾರ್, ಶ್ರೀಕಂಠ, ಇಮ್ರಾನ್ ಅಹಮದ್, ಆನಂದ್, ಕೃಷ್ಣಯ್ಯ, ಸುನೀಲ್, ರಮೇಶ್, ರಾಜು, ವಿನಯ್, ಶಿವರಾಜು ಸ್ಥಳಕ್ಕೆ ಭೇಟಿ ನೀಡಿದ್ದು, ವಿಶೇಷ ತನಿಖಾ ತಂಡ ರಚಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-37-1825160885

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.