ಸರಗೂರು: ಪತ್ನಿ ಕೊಲೆ ಮಾಡಿದ್ದ ಆರೋಪಿ ಪತಿಯನ್ನು ಆರು ಗಂಟೆಯೊಳಗೆ ಬಂಧಿಸುವಲ್ಲಿ ಸರಗೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖಾ ತಂಡದ ಸಾಧನೆಗೆ ವಿಶೇಷ ಬಹುಮಾನ ಘೋಷಿಸಿದ್ದಾರೆ.

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೇರಳಾಪುರ ಗ್ರಾಮದ ನಿವಾಸಿ ಜಗದೀಶ್ (45) ಬಂಧಿತ ಆರೋಪಿ. ಈತ ಬಿದರಹಳ್ಳಿ ಸರ್ಕಲ್ನಲ್ಲಿ ಚಿನಿವಾರ ಅಂಗಡಿ ವ್ಯಾಪಾರ ಮಾಡುತ್ತಿದ್ದ. 12 ವರ್ಷಗಳ ಹಿಂದೆ ಹುಣಸೂರು ತಾಲ್ಲೂಕು ಚಾಬಗೆರೆ ಗ್ರಾಮದ ಲೇಟ್ ಸೋಮಶೇಖರಾಚಾರಿ ಅವರ ಪುತ್ರಿ ಶ್ರುತಿ ಎಂಬುವವರನ್ನು ಮದುವೆಯಾಗಿದ್ದ. ಇಬ್ಬರಿಗೂ ಮೋನಿಕ, ನವೀನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ಕುಟುಂಬ ಸರಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸ ಬಿದರಹಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಪತ್ನಿ ಮೇಲಿನ ಅನುಮಾನದಿಂದ ಆಕೆಗೆ ಕೈಯಿಂದ ಹೊಡೆದು ಕೊಂದು ಮನೆಯ ತೊಲೆಗೆ ಸೀರೆಯಿಂದ ನೇಣು ಹಾಕಿ ತಲೆಮರೆಸಿಕೊಂಡಿದ್ದ. ಸರಗೂರು ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹುಣಸೂರು ಡಿವೈಎಸ್ಪಿ ರವಿ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಆರೋಪಿ ಜಗದೀಶನ ಬಂಧನಕ್ಕೆ ಸರಗೂರು ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿದ್ದರು.

ಸರಗೂರು ಪೊಲೀಸ್ ಠಾಣೆಯ ಪಿಎಸ್ಐ ಕಿರಣ್ ಆರ್. ಗೋಪಾಲ ಹಾಗೂ ಅಂತರಸಂತೆ ಠಾಣೆ ಪಿಎಸ್ಐ ಕುಮಾರ, ಎಎಸ್ಐಗಳಾದ ಕೃಷ್ಣಕುಮಾರ, ಶ್ರೀಕಂಠಸ್ವಾಮಿ ಹಾಗೂ ಸಿಬ್ಬಂದಿ ಇಮ್ರಾನ್ ಅಹಮದ್, ಗೋಪಾಲಕೃಷ್ಣ, ಜಗದೀಶ, ಸುನೀಲ್ ಕುಮಾರ್, ನವೀನ್, ಸುನೀಲ್, ರಮೇಶ, ವಿನಯ್, ದೇವರಾಜು, ನಂದೀಶ್, ಗಣೇಶ್, ಬಾಲಕೃಷ್ಣ, ಆನಂದ, ಶಿವಪ್ಪ, ಮಹಿಳಾ ಹೆಡ್ ಕಾನ್ಸ್ಟೆಬಲ್ ಶೋಭಾ ಅವರು ತನಿಖಾ ತಂಡದಲ್ಲಿದ್ದರು.

ಘಟನೆ ನಡೆದ ಆರು ಗಂಟೆಗಳೊಳಗೆ ಆರೋಪಿಯನ್ನು ಈ ತಂಡ ಬಂಧಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-38-1503769593

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.