ಮೈಸೂರು: ‘ರಾಜ್ಯದ ಎಸ್ಸಿ ಪಟ್ಟಿಯಲ್ಲಿ ಅಸಾಂವಿಧಾನಿಕವಾಗಿ ಸೇರ್ಪಡೆಗೊಂಡಿರುವ ಸ್ಪೃಶ್ಯ ಜಾತಿಗಳಾದ ಬಂಜಾರ, ಲಂಬಾಣಿ, ಭೋವಿ, ಕೊರಮ, ಕೊರಚ, ಬೇಡ- ಬುಡ್ಗ ಜಂಗಮರನ್ನು ಸರ್ಕಾರ ಬೇರ್ಪಡಿಸಬೇಕು’ ಎಂದು ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನ- ಜಾಗೃತಿ ಅಭಿಯಾನ ಸಮಿತಿ ಅಧ್ಯಕ್ಷ ಕೃಷ್ಣ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನೈಜ ಅಸ್ಪೃಶ್ಯರಾದ ಹೊಲೆಯ, ಮಾದಿಗ ಸಮುದಾಯಗಳ ಒಳ ಮೀಸಲಾತಿಗೆ ಈ ಜಾತಿಗಳೇ ಅಡ್ಡಿಯಾಗಿವೆ. ಇವುಗಳನ್ನು ಪಟ್ಟಿಯಿಂದ ಹೊರ ತೆಗೆಯದ ಹೊರತು ಶಾಶ್ವತ ಪರಿಹಾರ ಅಸಾಧ್ಯ. ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಈ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ನೈಜ ಪರಿಶಿಷ್ಟ ಜಾತಿ ಸಮುದಾಯಗಳ ನಡುವಿನ ಸಂಘರ್ಷ ಬಗೆಹರಿಸದ, ಅವುಗಳ ಸಾಂವಿಧಾನಿಕ ಹಕ್ಕು, ಸವಲತ್ತುಗಳನ್ನು ಸಂರಕ್ಷಿಸಲು ವಿಫಲರಾಗಿರುವ ಎಸ್ಸಿ ಮೀಸಲು ಕ್ಷೇತ್ರದ ಶಾಸಕರು, ಸಂಸದರು, ಸಚಿವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದರು.

ಸಮಿತಿ ಪದಾಧಿಕಾರಿಗಳಾದ ನಂಜುಂಡ ಮೌರ್ಯ, ಸ್ವಾಮಿ, ರಾಚಪ್ಪ, ಸತೀಶ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-39-1723293646

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.