ಮೈಸೂರು: ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕುವ ಶಾಲೆಗಳಲ್ಲಿ 2026–27ನೇ ಸಾಲಿಗೆ ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ತಳಿರು–ತೋರಣಗಳನ್ನು ಕಟ್ಟಿ ಚಿಣ್ಣರನ್ನು ಬರಮಾಡಿಕೊಳ್ಳಲು ‘ವಿದ್ಯಾದೇಗುಲ’ಗಳು ಸಜ್ಜಾಗುತ್ತಿವೆ. ಬೇಸಿಗೆ ರಜೆ ಮುಗಿದಿದ್ದು, ಜೂನ್ 1ರಿಂದ ‘ಶೈಕ್ಷಣಿಕ ಕಲರವ’ ಆರಂಭಗೊಳ್ಳಲಿದೆ.

ಜಿಲ್ಲೆಯಲ್ಲಿ 1,891 ಪ್ರಾಥಮಿಕ ಹಾಗೂ 233 ಪ್ರೌಢಶಾಲೆಗಳಿವೆ. 275 ಅನುದಾನಿತ ಶಾಲೆಗಳಿವೆ. ಇವೆಲ್ಲವೂ ಏಕಕಾಲದಲ್ಲಿ ಶೈಕ್ಷಣಿಕ ವರ್ಷಾರಂಭ ಮಾಡಲಿವೆ. ಇದಕ್ಕಾಗಿ ಶಿಕ್ಷಕರು ಶಾಲಾ ಹಂತದಲ್ಲಿ ದಾಖಲಾತಿ ಆಂದೋಲನ ನಡೆಸಿದ್ದು, 1ನೇ, 6ನೇ ಹಾಗೂ 8ನೇ ತರಗತಿಗೆ ಶೇ 5ರಿಂದ ಶೇ 8ರಷ್ಟು ದಾಖಲಾಗಿ ಜಾಸ್ತಿಯಾಗಿದೆ. ಈ ಮಕ್ಕಳಿಗೆ ಸರ್ಕಾರದಿಂದ ಸವಲತ್ತುಗಳನ್ನು ಕಲ್ಪಿಸುವುದಕ್ಕೂ ತಯಾರಿ ಮಾಡಿಕೊಳ್ಳಲಾಗಿದೆ.

‘ಶಾಲೆಗಳ ಪ್ರಾರಂಭೋತ್ಸವ ಜೂನ್ 1ರಿಂದ ನಡೆಯಲಿದ್ದು, ಅಂದು ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲಾಗುವುದು. ಇಲಾಖೆಯಿಂದ ಶೇ 75ರಷ್ಟು ಪಠ್ಯಪುಸ್ತಕಗಳು ಈಗಾಗಲೇ ಬಂದಿದ್ದು, ಶಾಲೆಗಳಿಗೆ ತಲುಪಿಸುವ ಕಾರ್ಯ ನಡೆದಿದೆ. ಒಟ್ಟು 195 ಶೀರ್ಷಿಕೆಯ ಪುಸ್ತಕಗಳು ಬೇಕಿದ್ದು, ಕೆಲವು ಶೀರ್ಷಿಕೆಗಳು ಬರುವುದು ಬಾಕಿ ಇದೆ. ಐದು ತಾಲ್ಲೂಕುಗಳಿಗೆ ಸಮವಸ್ತ್ರವೂ ಬಂದಿದೆ. ಉಳಿದ ತಾಲ್ಲೂಕುಗಳಿಗೆ ಶೀಘ್ರದಲ್ಲೇ ತಲುಪಲಿದೆ’ ಎಂದು ಡಿಡಿಪಿಐ ಡಿ. ಉದಯ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಕಚೇರಿಯಿಂದ ಶೂ, ಸಾಕ್ಸ್ ಖರೀದಿ:

‘ಈ ಬಾರಿ ಮಕ್ಕಳಿಗೆ ಶೂ, ಸಾಕ್ಸ್ಗಳನ್ನು ಕೇಂದ್ರ ಕಚೇರಿಯ ಹಂತದಿಂದಲೇ ಖರೀದಿಸಿ ಕೊಡಲಾಗುತ್ತಿದೆ. ಅವು ಜೂನ್ನಲ್ಲಿ ತಲುಪಲಿವೆ. ಹಿಂದಿನಂತೆ ಶಾಲಾ ಹಂತದಲ್ಲಿ ಖರೀದಿಗೆ ಅವಕಾಶವನ್ನು ಸರ್ಕಾರ ನೀಡಿಲ್ಲ. ಹಿಂದೆ, ಎಸ್ಡಿಎಂಸಿಗೇ ಖರೀದಿಸಲು ಅನುವು ಮಾಡಿಕೊಡಲಾಗಿತ್ತು. ಕಳಪೆ ಗುಣಮಟ್ಟ ಮೊದಲಾದ ದೂರುಗಳು ಬಂದಿದ್ದವು. ಹೀಗಾಗಿ, ಕೇಂದ್ರ ಕಚೇರಿಯ ಹಂತದಿಂದಲೇ ಪ್ರಕ್ರಿಯೆ ನಡೆದಿದೆ’ ಎನ್ನುತ್ತಾರೆ ಅವರು. ಖಾಸಗಿ ಶಾಲೆಗಳಲ್ಲಿ ಈಗಾಗಲೇ ತರಗತಿಗಳು ಆರಂಭಗೊಂಡಿವೆ. ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕಗಳು, ಶೂ–ಸಾಕ್ಸ್, ಸಮವಸ್ತ್ರವನ್ನು ಸರ್ಕಾರದಿಂದಲೇ ಉಚಿತವಾಗಿ ನೀಡಲಾಗುತ್ತದೆ. ಆದರೆ, ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಕೊಡಿಸಿರುವವರು ತಾವಾಗಿಯೇ ಖರೀದಿಸಬೇಕು. ಪಠ್ಯಪುಸ್ತಕಗಳು, ಲೇಖನ ಸಾಮಗ್ರಿಗಳು, ಬ್ಯಾಗ್ಗಳು, ಶೂ, ಸಮವಸ್ತ್ರ ಮೊದಲಾದವುಗಳ ಬೆಲೆ ಸರಾಸರಿ ಶೇ 10ರಿಂದ ಶೇ 15ರಷ್ಟು ಏರಿಕೆ ಆಗಿರುವುದು ಪೋಷಕರಿಗೆ ‘ಹೊರೆ’ಯಾಗಿ ಪರಿಣಮಿಸಿದೆ.

'ಶಾಲಾ ಕಟ್ಟಡ, ಅಡುಗೆ ಮನೆ, ಬಿಸಿಯೂಟ ಕೊಠಡಿ ಒಳಾಂಗಣ ಹೊರಾಂಗಣ ಸ್ವಚ್ಛಗೊಳಿಸಲಾಗಿದೆ. ಜೂನ್ 1ರಿಂದ ಅಧಿಕೃತ ಶಾಲಾ ಪ್ರಾರಂಭಕ್ಕೆ ಎಸ್ಡಿಎಂಸಿಯವರು, ಗ್ರಾಮಸ್ಥರು, ಪೋಷಕರನ್ನು ಆಹ್ವಾನಿಸಲಾಗುವುದು. ತಳಿರು ತೋರಣ ಕಟ್ಟಲಾಗುವುದು. ಗುಲಾಬಿ ಕೊಟ್ಟು. ಸಿಹಿ ನೀಡಿ ಮಕ್ಕಳನ್ನು ಬರಮಾಡಿಕೊಳ್ಳಲಾಗುವುದು. ಸರ್ಕಾರಿ ಸೌಲಭ್ಯಗಳನ್ನು ಅಂದೇ ವಿತರಿಸಲಾಗುವುದು' ಎಂದು ಎಚ್.ಡಿ.ಕೋಟೆ ತಾಲ್ಲೂಕು ಚಾಮಲಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸಾಲುಂಡಿ ದೊರೆಸ್ವಾಮಿ 'ಪ್ರಜಾವಾಣಿ'ಗೆ ತಿಳಿಸಿದರು.

'ಮಕ್ಕಳಿಗೆ 'ಸೇತುಬಂಧ' ಚಟುವಟಿಕೆಯ ಭಾಗವಾಗಿ ಪೂರ್ವ ಪರೀಕ್ಷೆ, ಮೌಲ್ಯಮಾಪನ, ಸಾಫಲ್ಯ ಪರೀಕ್ಷೆಯನ್ನು ಮೊದಲ 15 ದಿನಗಳ ಅವಧಿಯಲ್ಲಿ ನಡೆಸಲಾಗುವುದು. ಅವರು ಹಿಂದಿನ ತರಗತಿಯಲ್ಲಿ ಕಲಿತಿದ್ದನ್ನು 'ಸಿಂಹಾವಲೋಕನ' ಮಾಡುವ ಪ್ರಕ್ರಿಯೆ ಇದಾಗಿದೆ. ವಿಶೇಷ ದಾಖಲಾತಿ ಆಂದೋಲನವನ್ನೂ ನಡೆಸಿದ್ದೇವೆ' ಎಂದು ಅವರು ಮಾಹಿತಿ ನೀಡಿದರು.

ಕೆಲವೆಡೆ 'ಆತಂಕ'

ಬಿಸಿಯೂಟ ಮೊದಲ ದಿನದಿಂದಲೇ ಆರಂಭಿಸಲು ಉದ್ದೇಶಿಸಲಾಗಿದೆ. ಪಶ್ಚಿಮ ಏಷ್ಯಾದಲ್ಲಿ ನಡೆದಿರುವ ಸಂಘರ್ಷದ ಕಾರಣದಿಂದ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು 'ಬಿಸಿಯೂಟ' ತಯಾರಿ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.

'ಕೆಲವು ದೊಡ್ಡ ಶಾಲೆಗಳಿಗೆ ಅಡುಗೆ ಅನಿಲ ಸಿಲಿಂಡರ್ ಕೊರತೆ ಆತಂಕ ಉಂಟಾಗುವ ಸಾಧ್ಯತೆ ಇದೆ. ಇದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಜಿಲ್ಲಾಧಿಕಾರಿಯು ಸಮಸ್ಯೆ ಪರಿಹರಿಸುವಂತೆ ಏಜೆನ್ಸಿಗಳಿಗೆ ಸೂಚನೆ ನೀಡಿದ್ದಾರೆ' ಎಂದು ಮೂಲಗಳು ತಿಳಿಸಿವೆ.

ಶಾಲೆಗಳಲ್ಲಿ ನಡೆದಿರುವುದೇನು?

'ಶಾಲಾ ಕಟ್ಟಡ, ಅಡುಗೆ ಮನೆ, ಬಿಸಿಯೂಟ ಕೊಠಡಿ ಒಳಾಂಗಣ ಹೊರಾಂಗಣ ಸ್ವಚ್ಛಗೊಳಿಸಲಾಗಿದೆ. ಜೂನ್ 1ರಿಂದ ಅಧಿಕೃತ ಶಾಲಾ ಪ್ರಾರಂಭಕ್ಕೆ ಎಸ್ಡಿಎಂಸಿಯವರು, ಗ್ರಾಮಸ್ಥರು, ಪೋಷಕರನ್ನು ಆಹ್ವಾನಿಸಲಾಗುವುದು. ತಳಿರು-ತೋರಣ ಕಟ್ಟಲಾಗುವುದು. ಗುಲಾಬಿ ಕೊಟ್ಟು, ಸಿಹಿ ನೀಡಿ ಮಕ್ಕಳನ್ನು ಬರಮಾಡಿಕೊಳ್ಳಲಾಗುವುದು. ಸರ್ಕಾರಿ ಸೌಲಭ್ಯಗಳನ್ನು ಅಂದೇ ವಿತರಿಸಲಾಗುವುದು' ಎಂದು ಎಚ್.ಡಿ.ಕೋಟೆ ತಾಲ್ಲೂಕು ಚಾಮಲಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸಾಲುಂಡಿ ದೊರೆಸ್ವಾಮಿ 'ಪ್ರಜಾವಾಣಿ'ಗೆ ತಿಳಿಸಿದರು.

ಮಕ್ಕಳಿಗೆ ಮೊದಲ ದಿನ ಸಿಹಿಯೂಟ ಬಡಿಸಲಾಗುವುದು. ತಳಿರು-ತೋರಣ ಕಟ್ಟಲು, ಮೆರವಣಿಗೆ, ಜಾಥಾ ನಡೆಸಲು ತಯಾರಿಯಾಗಿದೆ
ಉದಯಕುಮಾರ್, ಡಿಡಿಪಿಐ, ಮೈಸೂರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-39-634131142

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.