ಮೈಸೂರು: ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಭಾರತದ ಗಡಿ ನಿಯಂತ್ರಣ ರೇಖೆಯ ನಡುವಿರುವ ಶಾರದಾ ಸರ್ವಜ್ಞ ಪೀಠದ ದೇವಸ್ಥಾನದ ಬಾಗಿಲು ತೆರೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ’ ಎಂದು ‘ಪಾಕ್ ಆಕ್ರಮಿತ ಕಾಶ್ಮೀರ ಶಾರದಾ ಸರ್ವಜ್ಞ ಪೀಠ’ದ ಹೋರಾಟಗಾರ ರವೀಂದರ್ ಪಂಡಿತ್ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಅವಧೂತ ದತ್ತ ಪೀಠದಲ್ಲಿ ಬುಧವಾರ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 84ನೇ ಜನ್ಮ ದಿನೋತ್ಸವ ಹಾಗೂ ನಾದಮಂಟಪದ 28ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ‘ಧರ್ಮ ಬಂಧು’ ಬಿರುದು ಸ್ವೀಕರಿಸಿ ಅವರು ಮಾತನಾಡಿದರು. ‘1948ರಿಂದಲೂ ಮುಚ್ಚಿರುವ ಆ ಧಾರ್ಮಿಕ ಕೇಂದ್ರ ನಶಿಸುತ್ತಿದೆ. ಅದನ್ನು ನಿರ್ವಹಿಸುತ್ತಿದ್ದ ಶ್ರೀನಗರದ ಸ್ವಾಮಿ ನಂದಲಾಲ್ ಅವರು ಕೊನೆಯದಾಗಿ ಅದರ ಬಾಗಿಲನ್ನು ಮುಚ್ಚಿದ್ದರು. ಈಗ ಅದರ ಸ್ಥಿತಿ ನೋಡಿದರೆ ನೋವಾಗುತ್ತದೆ’ ಎಂದರು.

ಅಶಕ್ತರಾಗಿರುವುದು: ‘ಅದು ಸನಾತನಕ್ಕೆ ಸ್ವಾತಂತ್ರ್ಯ ನೀಡಿದ ಆದಿಶಂಕರಾಚಾರ್ಯರ ಜಾಗ. ಅವರ ಕಾರಣದಿಂದಾಗಿಯೇ ನಾನು ಇಂದಿಗೂ ರವೀಂದರ್ ಪಂಡಿತ್ ಆಗಿಯೇ ಉಳಿದಿದ್ದೇನೆ. ಇಲ್ಲದಿದ್ದರೆ ನಾನು ಬೌದ್ಧಧರ್ಮೀಯ ಆಗಿಬಿಡುತ್ತಿದ್ದೆನೇನೋ. ಈ ಜಾಗದ ವಿಷಯದಲ್ಲಿ ಈಗಿನ ಸಂದರ್ಭದಲ್ಲೂ ನಾವು ಬಹಳ ಅಶಕ್ತರಾಗಿರುವುದು ದುರದೃಷ್ಟಕರ’ ಎಂದು ಹೇಳಿದರು.

‘ನಾನು ಅಲ್ಲಿನ ಶಾರದಾ ಪೀಠಕ್ಕೆ ಹೋಗಲು ನಮ್ಮ ಸರ್ಕಾರವೇ ಅನುಮತಿ ಕೊಡಲಿಲ್ಲ. ಇದು ಸರ್ಕಾರದ ನಾಚಿಕೆಗೇಡಿನ ವರ್ತನೆ. ನಮ್ಮ ಧಾರ್ಮಿಕ ಹಕ್ಕುಗಳಿಗೆ ಚ್ಯುತಿ ಬಂದಿದೆ. ಕೆಲವರು ಹೇಳುವಂತೆ, ಆ ಸ್ಥಳವು ಸಂಘರ್ಷದ ಜಾಗವಲ್ಲ. ಇತರ ಯಾವುದಾದರೂ ಸಂಘರ್ಷದ ಸ್ಥಳದಲ್ಲಿ ಪೂಜೆ ನಿಲ್ಲಿಸಲಾಗಿದೆಯೇ? ಆದರೆ, ಶಾರದಾಪೀಠವನ್ನು ಮಾತ್ರವೇ ಏಕೆ ಮುಚ್ಚಲಾಗಿದೆ? ಎಂದು ಕೇಳಿದರು.

ಪ್ರಯೋಜನವಾಗಿಲ್ಲ: ‘ಈ ಬಗ್ಗೆ ಪಾಕಿಸ್ತಾನ ಸರ್ಕಾರ ಹಾಗೂ ನಮ್ಮ ಸರ್ಕಾರದ ಗಮನಕ್ಕೆ ತರಲು ಹಲವು ಬಾರಿ ಪತ್ರ ಬರೆದಿದ್ದೇನೆ. ಪ್ರಧಾನಿ ನರೇಂದ್ರ ಮೋದಿವರೆಗೂ ಹೋಗಿದ್ದೇನೆ. ಆದರೆ, ಪ್ರಯೋಜನವಾಗಿಲ್ಲ. ಈ ಕುರಿತು ಸನಾತನರಾದ ನಾವೆಲ್ಲರೂ ಧ್ವನಿ ಎತ್ತಬೇಕಾಗಿದೆ’ ಎಂದು ಕರೆ ನೀಡಿದರು.

‘ನಮ್ಮ ಅಸ್ವಿತ್ವವನ್ನು ತೋರಿಸಬೇಕಾದ ಸಂದರ್ಭ ಬಂದಿದೆ. ನಮಗೆ ಒಳಗೆ–ಹೊರಗೆ ಎರಡು ಕಡೆಗಳಲ್ಲೂ ಸಾಕಷ್ಟು ಶತ್ರುಗಳಿದ್ದಾರೆ. ಶಾರದಾ ಸಂಸ್ಕೃತಿ ಹಾಗೂ ಶಾರದಾಲಿಪಿ ಉಳಿಸಿಕೊಳ್ಳಲು ನಾವೆಲ್ಲರೂ ಹೋರಾಡಬೇಕಾಗಿದೆ. ಶಾರದಾ ವಿಶ್ವವಿದ್ಯಾಲಯದ ಸ್ಥಾಪನೆಯೂ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಜುಲೈ 29ರಿಂದ ಸೆ.26ರವೆಗೆ ಹಮ್ಮಿಕೊಂಡಿರುವ ಚಾತುರ್ಮಾಸ್ಯ ವ್ರತ ದೀಕ್ಷಾ ಮಹೋತ್ಸವದ ಆಹ್ವಾನಪತ್ರಿಕೆಯನ್ನು ಶಾಸಕ ಟಿ.ಎಸ್.ಶ್ರೀವತ್ಸ ಬಿಡುಗಡೆ ಮಾಡಿದರು. ಕೆಪಿಸಿಸಿ ಸದಸ್ಯ ಎಚ್.ವಿ.ರಾಜೀವ್, ಬ್ರಾಹ್ಮಣ ಸಮಾಜದ ಮುಖಂಡ ಡಿ.ಟಿ. ಪ್ರಕಾಶ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-39-29029464

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.