ಮೈಸೂರು: ‘ಬಸವಾದಿ ಶರಣರ ಚಿಂತನೆ ಸಾರ್ವಕಾಲಿಕ. ಕಾಯಕ– ದಾಸೋಹ ತತ್ವ ಪಾಲಿಸಿದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ನಾಡಿಗೆ ಮಾದರಿ’ ಎಂದು ಕಾಂಗ್ರೆಸ್ ಮುಖಂಡ ಎಚ್.ವಿ.ರಾಜೀವ್ ಹೇಳಿದರು.

ಅಗ್ರಹಾರದ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಮಂಗಳವಾರ ನಡೆದ ಶಿವಶಕ್ತಿ ಸಾಮಾಜಿಕ ಮತ್ತು ಶೈಕ್ಷಣಿಕ ಟ್ರಸ್ಟ್ನ ವಾರ್ಷಿಕೋತ್ಸವ ಮತ್ತು ಬಸವ, ಅಕ್ಕಮಹಾದೇವಿ ಹಾಗೂ ಶಿವಕುಮಾರ ಸ್ವಾಮೀಜಿ ಜಯಂತಿ ಉದ್ಘಾಟಿಸಿ ಮಾತನಾಡಿದರು.

‘12ನೇ ಶತಮಾನದಲ್ಲಿ ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯನ್ನು ಬಸವಣ್ಣನವರು ಸುಧಾರಿಸಿದರು. ಮೂಢನಂಬಿಕೆ, ಮಡಿವಂತಿಕೆ ತೀವ್ರವಾಗಿದ್ದ ಸಂದರ್ಭದಲ್ಲಿ ಎಲ್ಲ ಸಮುದಾಯಗಳ ಶರಣರನ್ನು ಒಟ್ಟುಗೂಡಿಸಿ ಸಮಾಜ ಪರಿವರ್ತಿಸಿದರು. ವ್ಯವಸ್ಥೆಯ ತಪ್ಪುಗಳನ್ನು ತಿದ್ದಿ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು’ ಎಂದರು.

‘ಶಿವಕುಮಾರಸ್ವಾಮೀಜಿ ಅವರು ಅಕ್ಷರ– ಅನ್ನ ದಾಸೋಹದ ಮೂಲಕ ನಾಡಿಗೆ ಬೆಳಕಾದರು. ಅವರಿಗೆ ಮರಣೋತ್ತರ ಭಾರತರತ್ನ ನೀಡಬೇಕೆಂಬುದು ಹಲವರ ಒತ್ತಾಯ. ಭಾರತರತ್ನಕ್ಕಿಂತ ಮಿಗಿಲಾದ ಜೀವನ ಸಾಗಿಸಿ ಅವರು ಹೋಗಿದ್ದಾರೆ. ಅವರು ನಿಜವಾದ ವಿಶ್ವಗುರು’ ಎಂದರು. ಕುದೇರು ಮಠದ ಗುರುಶಾಂತ ಸ್ವಾಮೀಜಿ, ನಂಜನಗೂಡಿನ ಅನುರಾಗ ಮಕ್ಕಳ ಮನೆ ಅಧ್ಯಕ್ಷ ಸೋಮಶೇಖರಮೂರ್ತಿ, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರೇಣುಕಾ ರಾಜು, ಶಾರದಾ ಸತ್ಯನಾರಾಯಣ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-39-1791249522

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.