ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರು ಸಿದ್ದರಾಮನಹುಂಡಿ ಹಾಗೂ ಸುತ್ತಲಿನ ಗ್ರಾಮಗಳ ಜಮೀನಿಗಳಿಗೆ ರಾಂಪುರ ಎಡದಂಡೆ ನಾಲೆ ನೀರು ಹರಿವಿನಲ್ಲಿ ವ್ಯತ್ಯಾಸವಾಗುತ್ತಿದ್ದು, ಇದರಿಂದ ಭತ್ತದ ಗದ್ದೆಗಳು ಒಣಗುತ್ತಿವೆ.

ರಾಂಪುರ ನಾಲೆಯ ಕೊನೆಯ ಭಾಗದಲ್ಲಿ ಬರುವ ಸಿದ್ದರಾಮನಹುಂಡಿ, ನಂದಿಗುಂದ, ಯಡಕೊಳ, ಅಂಚೆಹುಂಡಿ, ಕುಪ್ಪೇಗಾಲದವರೆಗೆ ನೀರು ಸರಾಗವಾಗಿ ಹರಿಯಲಾಗಿದೆ. ಕಟ್ಟುನೀರು ಪದ್ಧತಿಯಲ್ಲಿ ನೀರು ಕೊಟ್ಟ ಪರಿಣಾಮ ರೈತರು ಭತ್ತ ಬೆಳೆದಿದ್ದು, ನೀರು ಕಡೆ ಭಾಗಕ್ಕೆ ತಲುಪದ ಕಾರಣಕ್ಕೆ ಬೆಳೆ ನಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

‘ಭತ್ತ ಕಾಳು ಕಟ್ಟುವ ಹಂತದಲ್ಲಿ ನೀರಿನ ಕೊರತೆ ಎದುರಾಗಿದೆ. ಅಣೆಕಟ್ಟೆಯಿಂದ ಕಾಲುವೆಗೆ ನೀರು ಹರಿದರೂ ಕಡೆಯ ಭಾಗದಲ್ಲಿರುವ ಗ್ರಾಮಗಳ ಜಮೀನುಗಳಿಗೆ ನೀರು ಸಾಲದಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸಮಂಜಸ ಉತ್ತರ ನೀಡುತ್ತಿಲ್ಲ’ ಎಂಬುದು ಸ್ಥಳೀಯರ ಆರೋಪ.

‘ಮುಖ್ಯಮಂತ್ರಿಗಳು ತಮ್ಮೂರಿನ ಜನರ ಸಮಸ್ಯೆಗೆ ಸ್ಪಂದಿಸಿ, ಬೆಳೆ ಹಾಗೂ ಜನ–ಜಾನುವಾರುಗಳ ಅನುಕೂಲಕ್ಕಾಗಿ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು’ ಎಂಬುದು ಗ್ರಾಮಸ್ಥರ ಮನವಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-39-1461144950

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.