ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನಲ್ಲಿ ಕೈಗೊಳ್ಳಲಾಗುತ್ತಿರುವ ಪ್ರಮುಖ ಅಭಿವೃದ್ಧಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗೆ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರತಿಭಟನೆಯೂ ಮುಂದುವರಿಯುತ್ತಿದೆ. ಅದು ನಿಮ್ಹಾನ್ಸ್ ಮಾದರಿಯ (ನರರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಗೆ) ಆಸ್ಪತ್ರೆ ನಿರ್ಮಾಣದ ಯೋಜನೆಗೆ ಎದುರಾಗಿರುವ ‘ಕಂಟಕ’.

‘ಆಸ್ಪತ್ರೆ ನಿರ್ಮಾಣಕ್ಕೆ ಗುರುತಿಸಿರುವ ಜಾಗ, ಸರ್ಕಾರದ್ದು’ ಎನ್ನುವುದು ಅಧಿ ಕಾರಿಗಳ ಸಮರ್ಥನೆಯಾದರೆ, ‘ಫಲವತ್ತಾದ ಭೂಮಿಯನ್ನೇ ಏಕೆ ಪಡೆದುಕೊಳ್ಳುತ್ತೀರಿ’ ಎನ್ನುವುದು ರೈತ ಸಂಘಟನೆಯವರ ಪ್ರಶ್ನೆಯಾಗಿದೆ. ಇದ ರಿಂದಾಗಿ, ಮಹತ್ವದ ಯೋಜನೆ ಯೊಂದು ಆರಂಭದಲ್ಲೇ ‘ವಿಘ್ನ’ ಎದುರಿಸುತ್ತಿದ್ದು, ‘ಪಾರ್ಶ್ವವಾಯು’ಗೂ ತುತ್ತಾಗಿದೆ!

ಯೋಜನೆಗಾಗಿ ತಾಲ್ಲೂಕಿನ ಹಾಗೂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗುಡುಮಾದನಹಳ್ಳಿಯಲ್ಲಿ ಜಾಗ ನಿಗದಿಪಡಿಸಲಾಗಿದೆ. ಬರೋಬ್ಬರಿ ₹ 100 ಕೋಟಿ ಮೊತ್ತದಲ್ಲಿ, 160 ಹಾಸಿಗೆಗಳ ಸಾಮರ್ಥ್ಯದ ಆರೋಗ್ಯ ಸಂಸ್ಥೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಇದಕ್ಕೆ ಬೇಕಾಗಿರುವ 20 ಎಕರೆ ಜಾಗವನ್ನು ಕಂದಾಯ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆಸ್ಪತ್ರೆ ನಿರ್ಮಾಣದ ಯೋಜನೆಯನ್ನು ಕಳೆದ ಬಾರಿಯ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಆಸ್ಪತ್ರೆ ನಿರ್ಮಿಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಕೃಷಿಗೆ ಯೋಗ್ಯವಲ್ಲದ ಭೂಮಿ ಆಯ್ಕೆ ಮಾಡಿಕೊಳ್ಳಲಿ ಎನ್ನುವುದು ಹೋರಾಟಗಾರರ ವಾದವಾಗಿದೆ.

ರೈತರ ವಾದವೇನು?: ‘ಈ ಜಾಗ ಫಲವತ್ತಾಗಿದ್ದು, ಸದಾ ನೀರು ನಿಲ್ಲುವಂಥದ್ದಾಗಿದೆ. ಸ.ನಂ. 60, 68 ಮತ್ತು 8ರಲ್ಲಿರುವ ಜಮೀನಿದು. ಈ ಸರ್ವೆ ನಂಬರ್ನಲ್ಲಿ ಆರೇಳು ದಶಕಗಳಿಂದಲೂ 80ಕ್ಕೂ ಹೆಚ್ಚಿನ ರೈತ ಕುಟುಂಬಗಳು ಕೃಷಿ ಮಾಡುತ್ತಿದ್ದು, ತೆಂಗು, ಅಡಿಕೆ ಮೊದಲಾದ ಬೆಳೆ ಬೆಳೆಯುತ್ತಿದ್ದಾರೆ. ವರ್ಷಕ್ಕೆ 2 ಬಾರಿ ಭತ್ತ ಬೆಳೆಯುತ್ತಿದ್ದಾರೆ. ರೈತರ ಸ್ವಾಧೀನದಲ್ಲಿರುವ ಈ ಜಮೀನನ್ನು ಸರ್ಕಾರ ಆಸ್ಪತ್ರೆ ನಿರ್ಮಾಣಕ್ಕೆ ನೀಡಿದ್ದು ಸರಿಯಲ್ಲ. ಕೃಷಿಕರ ವಿರೋಧಿಯಾದ ಧೋರಣೆ ಇದಾಗಿದೆ’ ಎನ್ನುವುದು ರೈತ ಮುಖಂಡರ ಆಕ್ಷೇಪವಾಗಿದೆ.

ಅಧಿಕಾರಿಗಳು ಹೇಳುವುದೇನು?: ‘ರೈತರು ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ’ ಎನ್ನುವುದು ಅಧಿಕಾರಿಗಳ ಹೇಳಿಕೆಯಾಗಿದೆ. ಈ ನಡುವೆ, ಯೋಜನಾ ಸ್ಥಳದಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಗುಡುಮಾದನಹಳ್ಳಿಯಲ್ಲೇ ಆಸ್ಪತ್ರೆ ನಿರ್ಮಾಣದ ಪರ ಇರುವ ಸ್ಥಳೀಯರೂ ಇದ್ದಾರೆ. ವಿರೋಧ ಮತ್ತು ಪ್ರತಿಭಟನೆಯ ಕಾರಣದಿಂದಾಗಿ ಯೋಜನೆಯು ವಿವಾದಕ್ಕೆ ಸಿಲುಕಿದೆ. ಪರಿಣಾಮ, ಕಾಮ ಗಾರಿ ಕೈಗೆತ್ತಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ.

ಬಗೆಹರಿಸುತ್ತಿಲ್ಲ: ಈ ವಿಷಯದಲ್ಲಿ ‘ಸಮನ್ವಯ’ ಮೂಡಿಸುವ ಕೆಲಸವನ್ನು ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಾಗಲಿ ಮಾಡಿಲ್ಲ. ಕ್ಷೇತ್ರವನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ, ಗೊಂದಲ ಬಗೆಹರಿಯುತ್ತಿಲ್ಲ! ಈ ನಡುವೆ, ಹೋರಾಟ ತೀವ್ರಗೊಳಿಸಲು ರೈತರು ಸೋಮವಾರ (ಮೇ 4) ಗುಡುಮಾದನಹಳ್ಳಿ ಪ್ರತಿಭಟನಾ ಸ್ಥಳದಲ್ಲಿ ಸಭೆ ಆಯೋಜಿಸಿದ್ದಾರೆ. ಜಿಲ್ಲಾಡಳಿತವು ಸಮಸ್ಯೆಯನ್ನು ಯಾವ ರೀತಿಯಲ್ಲಿ ಬಗೆಹರಿಸುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-39-1028729849

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.