ಮೈಸೂರು: ‘ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇವೆಂದು ಎಲ್ಲರೂ ಶಪಥ ಮಾಡಬೇಕು. ಜಾತಿ ವ್ಯವಸ್ಥೆಯಿಂದ ಜಡ್ಡುಗಟ್ಟಿರುವ ಸಮಾಜದಲ್ಲಿ ಚಲನಶೀಲತೆ ತರಲು ವೈಜ್ಞಾನಿಕ, ವೈಚಾರಿಕ ಶಿಕ್ಷಣ ಪಡೆಯಲೇಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಪ್ರತಿಪಾದಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಬಸವ ಬಳಗಗಳ ಒಕ್ಕೂಟವು ಇಲ್ಲಿನ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ,ಬೀದರ್ನ ಕೌಠಾ(ಬಿ) ಬಸವ ಯೋಗಾಶ್ರಮದ ಸಿದ್ಧರಾಮ ಶರಣ ಬೆಲ್ದಾಳ ಅವರಿಗೆ ‘ಬಸವ ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಮಾಡಿ ಅವರು ಮಾತನಾಡಿದರು.

‘ಶರಣರ ಕನಸಿನ ಸಮಾಜವನ್ನು ಸಾಕಾರಗೊಳಿಸಲು ಸರ್ಕಾರ ಬದ್ಧವಾಗಿದೆ. ಗ್ಯಾರಂಟಿ ಯೋಜನೆಗಳೂ ಬಸವ ತತ್ವದಂತೆ ಎಲ್ಲರನ್ನೂ ಒಳಗೊಂಡಿವೆ’ ಎಂದು ಹೇಳಿದರು.

‘ವೈಚಾರಿಕ ಶಿಕ್ಷಣ ಎಲ್ಲರಿಗೂ ಸಿಗದಿರುವುದರಿಂದಲೇ ವ್ಯವಸ್ಥೆ ಜೊತೆಗೆ ರಾಜಿ ಆಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಪಟ್ಟಭದ್ರ ಮನುವಾದಿಗಳು ಮೂಢನಂಬಿಕೆಗಳನ್ನು ಬಿತ್ತಿ, ಜಾತಿ ವ್ಯವಸ್ಥೆ ಗಟ್ಟಿಗೊಳಿಸುತ್ತಿರುತ್ತಾರೆ. ಅಸಮಾನತೆಯ ಸಮಾಜದಲ್ಲಿ ಇನ್ನೂ ಎಷ್ಟು ದಿನ ಇರಬೇಕು? ನಾವು ಏಕೆ ಅನಕ್ಷರಸ್ಥರು, ಬಡವರು, ಸೂರಿಲ್ಲದವರು ಎಂದು ಎಲ್ಲರೂ ಕಾರಣ ತಿಳಿಯಬೇಕು. ಬಸವಣ್ಣ, ಬುದ್ಧ, ಗಾಂಧೀಜಿ, ಅಂಬೇಡ್ಕರ್ ಅವರ ಹೋರಾಟಗಳನ್ನು ನೆನೆಯಬೇಕು’ ಎಂದು ಹೇಳಿದರು.

‘ಸಾಮಾಜಿಕ ಮತ್ತು ಆರ್ಥಿಕ ತಳಹದಿಯ ಮೇಲೆ ರಾಜಕೀಯ ಸ್ವಾತಂತ್ರ್ಯ ನಿಂತಿದೆ. ಸರ್ವರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರದಿದ್ದರೆ ಪಟ್ಟಭದ್ರ ಹಿತಾಸಕ್ತಿಗಳು ವಿಜೃಂಭಿಸುತ್ತಾರೆ. ಹೀಗಾಗಿ, ಅವರ ವರ್ಣಾಶ್ರಮ ಹಾಗೂ ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿ’ ಎಂದು ಸಲಹೆ ಮಾಡಿದರು.

‘ಗ್ಯಾರಂಟಿಗಳು ಬಸವಣ್ಣನವರ ಕನಸಿನ ಕೂಸುಗಳು’

ಪ್ರಶಸ್ತಿ ಪುರಸ್ಕೃತ ಸಿದ್ಧರಾಮ ಶರಣ ಬೆಲ್ದಾಳ ಅವರು, ‘ಸಾಂಸ್ಕೃತಿಕ ನಾಯಕ ಘೋಷಣೆ, ಕಚೇರಿಗಳಲ್ಲಿ ಭಾವಚಿತ್ರ ಅನಾವರಣ, ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಸೇರಿ ರಾಜ್ಯ ಸರ್ಕಾರದಿಂದ ಬಸವ ಪರ ಕಾರ್ಯಗಳು ನಡೆಯುತ್ತಿವೆ’ ಎಂದು ಶ್ಲಾಘಿಸಿದರು.

‘ಗ್ಯಾರಂಟಿ ಯೋಜನೆಗಳು ಬಸವಣ್ಣನ ಕನಸಿನ ಕೂಸುಗಳೇ ಆಗಿವೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಶರಣರೇ ಕುಲಜರು ಎಂದು ಬಸವಣ್ಣ ಹೇಳಿದಂತೆ, ಸರ್ಕಾರ ಹಿಂದೂ– ಮುಸ್ಲಿಂ, ದಲಿತ– ಸವರ್ಣೀಯ, ಹೆಣ್ಣು– ಗಂಡು ಎಂಬ ಭೇದವಿಲ್ಲದ ಸಾಮಾಜಿಕ ನ್ಯಾಯವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಕೊಟ್ಟಿದೆ’ ಎಂದರು.

‘ತಾಳೆಗರಿಗಳಲ್ಲಿರುವ ಶರಣರ ಸಾವಿರಾರು ವಚನಗಳು, ಸ್ವರವಚನಗಳ ಸಂಗ್ರಹಗಳು ಸರ್ಕಾರದ ಸೊತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಬೇಕು’ ಎಂದು ಕೋರಿದರು.

ಜನರ ಭಾಷೆಯಾದ ಕನ್ನಡವನ್ನು ದೈವ ಭಾಷೆಯಾಗಿಸಿದ ನಾಯಕ ಬಸವಣ್ಣ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ದೇಶದ ಧ್ರುವತಾರೆಗಳು.
-ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಯುವಕರು ಕೋಮುವಾದಕ್ಕೆ ಬಲಿಯಾಗದೇ ಬಸವ ತತ್ವಗಳನ್ನು ಅನುಸರಿಸಬೇಕು. ಜಾಗೃತಿ ಮೂಡಿಸಲು ಇಲಾಖೆಯು ಪ್ರತಿ ಜಿಲ್ಲೆಯಲ್ಲಿ ಬಸವ ಜಯಂತಿ ಆಚರಿಸುತ್ತಿದೆ.
-ಶಿವರಾಜ್ ಎಸ್. ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

ಧರ್ಮ, ಜಾತಿ, ಭಾಷೆಯ ಹೆಸರಿನಲ್ಲಿ ವೈಮನಸ್ಯ ಮೂಡುತ್ತಿದೆ. ಭಾರತ ಒಂದಾಗಬೇಕೆಂದರೆ ಮನುಷ್ಯರು ಒಂದಾಗಬೇಕು. ಅದಿಲ್ಲದಿದ್ದರೆ ‘ಹಿಂದೂ ಒಂದು’ ಎಂಬ ಮಾತುಗಳೆಲ್ಲ ಕಪಟವಷ್ಟೇ.
-ಸಿದ್ಧರಾಮ ಶರಣ ಬೆಲ್ದಾಳ, ‘ಬಸವ ರಾಷ್ಟ್ರೀಯ ಪ್ರಶಸ್ತಿ’ ಪುರಸ್ಕೃತರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-2033071074

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.