ಮೈಸೂರು: ‘ಕೌಶಲ ಹಾಗೂ ಸಾಧನೆಗೆ ಗಡಿಯಿಲ್ಲ. ಅವಕಾಶಗಳನ್ನು ಉಪಯೋಗಿಸಿಕೊಂಡಾಗ ಜಗತ್ತು ಗುರುತಿಸುವಂಥ ಸಾಧನೆ ಮಾಡಲು ಸಾಧ್ಯ’ ಎಂದು ಪಶ್ಚಿಮ ಬಂಗಾಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಶೇಷ ಅಧಿಕಾರಿ ಕೆಂಪ ಹೊನ್ನಯ್ಯ ತಿಳಿಸಿದರು.

ಜೆಎಸ್ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ‘ಮಾಹಿತಿ ಕೊರತೆಯಿಂದ ನಾನು 30 ವರ್ಷದ ಬಳಿಕ ಯುಪಿಎಸ್ಸಿಗೆ ತಯಾರಿ ಆರಂಭಿಸಿದೆ. ಆದರೆ ಈಗ ಮಾಹಿತಿ ಕೊರತೆ ಇಲ್ಲ, ದೈಹಿಕ ನ್ಯೂನತೆಗಳಿಗೆ ಕೊರಗದೆ ಸಾಧನೆಯ ಹಾದಿಯಲ್ಲಿ ಸಾಗಿ’ ಎಂದು ಸಲಹೆ ನೀಡಿದರು.

‘ಐದನೇ ವಯಸ್ಸಿನಲ್ಲಿ ನನಗೆ ದೃಷ್ಟಿ ದೋಷ ಕಾಣಿಸಿಕೊಂಡಿತು. ಆದರೆ ನಾನು ಎದೆಗುಂದದೆ ಶಿಕ್ಷಣ ಮುಂದುವರಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆಯಾಗಿ ಎಚ್.ಡಿ.ಕೋಟೆ ಹಾಗೂ ಒಂಟಿಕೊಪ್ಪಲಿನಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದೆ. 2008ರಲ್ಲಿ ಬನರಾಸಿನಲ್ಲಿ ಶ್ರವಣ ದೋಷವುಳ್ಳ ಗೋಪಾಲಕೃಷ್ಣ ತಿವಾರಿ ಯುಪಿಎಸ್ಸಿಯಲ್ಲಿ ತೇರ್ಗಡೆಯಾದರು. ಆದರೆ ಅವರಿಗೆ ಕೆಲಸ ನೀಡಲಿಲ್ಲ. ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಕೆಲಸ ಗಿಟ್ಟಿಸಿಕೊಂಡಿದ್ದರು. ಅದರಿಂದ ಪ್ರೇರೇಪಣೆಗೊಂಡು ನಾನೂ ಪರೀಕ್ಷೆ ಬರೆದು ತೇರ್ಗಡೆಯಾದೆ’ ಎಂದರು.

‘ಸಂವಿಧಾನದ ಕಾರಣದಿಂದ ವಿಶೇಷ ಚೇತನರಿಗೆ ಸಾಕಷ್ಟು ಅವಕಾಶ ಸೃಷ್ಟಿಯಾಗಿದೆ. ನಮ್ಮವರ ಹೋರಾಟದ ಫಲವಾಗಿ ಸವಲತ್ತನ್ನು ಪಡೆದುಕೊಂಡಿದ್ದೇವೆ. ಅವನ್ನು ಬಳಸಿ ಸಾಧನೆ ಮಾಡಬೇಕು. ಪ್ರಸ್ತುತ ತಂತ್ರಜ್ಞಾನ ನಮಗೆ ದೊಡ್ಡ ಮಟ್ಟಿನ ಯಶಸ್ಸು ನೀಡಿದೆ. ಆಡಿಯೋ ಪುಸ್ತಕಗಳು ನಮ್ಮ ಜ್ಞಾನ ಹೆಚ್ಚಿಸಲು ಸಹಾಯಕವಾಗಿವೆ’ ಎಂದರು.

ಬಾಬ ಆಟೊಮೆಟಿಕ್ ಸೆಂಟರ್ನ ಎಂ.ಆರ್.ವೀರೇಶ್ ಕುಮಾರ್, ಎಂ.ರಂಗಸ್ವಾಮಿ, ಕಾಲೇಜಿನ ಪ್ರಾಂಶುಪಾಲ ಬಿ.ಇಳಂಗೋವನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-39-1745660890

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.