ಮೈಸೂರು: ‘ಸಮಾಜದ ಜನರ ನಡುವೆ ಮನುಷ್ಯ ಸಂಬಂಧಗಳನ್ನು ಬೆಸೆಯುವ ಕೆಲಸ ಆಗಬೇಕಿದೆ’ ಎಂದು ಸಾಹಿತಿ ಪ್ರೊ. ಸಿ.ಪಿ. ಕೃಷ್ಣಕುಮಾರ್ ಆಶಿಸಿದರು.

ವಿಶ್ವೇಶ್ವರ ನಗರದ ಕೆವಿಆರ್ ವೆಡ್ಡಿಂಗ್ ಬೆಲ್ ಸಭಾಂಗಣದಲ್ಲಿ ಶನಿವಾರ ಹಿರಿಯ ವಕೀಲ ಎಚ್ವಿಎಸ್ ಮೂರ್ತಿ ಅವರ 80ನೇ ವರ್ಷದ ಅಭಿನಂದನಾ ಸಮಾರಂಭದಲ್ಲಿ ‘ಎಚ್ವಿಎಸ್ ಮೂರ್ತಿ ಬದುಕು– ಹೋರಾಟದ ಅವಕಲೋಕನ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ಪ್ರಸ್ತುತ ಓದು, ಪುಸ್ತಕ, ಸತ್ಯಾಗ್ರಹದಂತಹ ಸಂಗತಿಗಳು ಬೆಲೆ ಕಳೆದುಕೊಳ್ಳುತ್ತಿವೆ. ಪುಸ್ತಕ ಸಂಸ್ಕೃತಿಯನ್ನು ಪೋಷಿಸಬೇಕಿದೆ’ ಎಂದರು.

‘ಎಚ್ವಿಎಸ್ ಮೂರ್ತಿ ಜ್ಞಾನ ವೃದ್ಧರು ಹಾಗೂ ತಪೋವೃದ್ಧರೂ ಹೌದು. ಅವರ ನಡೆ- ನುಡಿಯನ್ನು ಸಂಕೇತಿಸುವ ಕೃತಿ ಇದು. ಅವರು ಬದುಕು- ಹೋರಾಟದ ಬಗ್ಗೆ ಕೇಳದವರು ವಿರಳ. ಅಪರೂಪದ ಆತ್ಮೀಯ ಎನಿಸಬಹುದಾದ ಗ್ರಂಥ ಇದಾಗಿದ್ದು, ಅವರು ಬರೆದಿಲ್ಲ. ಆದರೆ ಲಿಪಿಕಾರರ ಮೂಲಕ ಅದನ್ನು ದಾಟಿಸಿದ್ದಾರೆ’ ಎಂದರು

‘ಈ ಕೃತಿಯಲ್ಲಿ ಹಿರಿಕಿರಿಯರು ತಿಳಿದುಕೊಳ್ಳಬಹುದಾದ ಸಾಕಷ್ಟು ವಿಷಯಗಳಿವೆ. ಸಂದೇಶ ಮತ್ತು ಸೂಕ್ತಿಗಳು ತುಂಬಿ ತುಳುಕುತ್ತಿವೆ.. ಮೂರ್ತಿ ಅವರು ಕೃಷಿ ಬಗ್ಗೆ ಅಪಾರ ಜ್ಞಾನವುಳ್ಳವರು. ಶಾರದಾ ನಿಕೇತನ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರು. ಇದೊಂದು ರೀತಿಯಲ್ಲಿ ಆತ್ಮಕತೆ ಇದ್ದಹಾಗೆ. ಕೃಷಿಯ ಮೌಲಿಕತೆಯನ್ನು ಕೃತಿಯಲ್ಲಿ ಹೇಳಿದ್ದಾರೆ’ ಎಂದು ವಿವರಿಸಿದರು.

ರಾಮಕೃಷ್ಣ ಆಶ್ರಮದ ಸ್ವಾಮಿ ಸರ್ವಜಯಾನಂದಜಿ ಸಾನ್ನಿಧ್ಯ ಹಾಗೂ ಶಾಸಕ ಟಿ.ಎಸ್. ಶ್ರೀವತ್ಸ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್, ಕಾರ್ಯದರ್ಶಿ ಎ.ಜಿ. ಸುಧೀರ್, ರಾಜ್ಯ ಪರಿಷತ್ ಸದಸ್ಯ ಚಂದ್ರಮೌಳಿ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಶಾರದವಿಲಾಸ ಶಿಕ್ಷಣ ಸಂಸ್ಥೆ ಮಾಜಿ ಅಧ್ಯಕ್ಷ ಎಸ್. ನಾರಾಯಣ ರಾವ್, ಸಮಾಜ ಸೇವಕ ಯು.ಎನ್. ಪದ್ಮನಾಭರಾವ್, ಎಂಕೆಬಿಎಸ್ ಅಧ್ಯಕ್ಷ ವಿಶ್ವನಾಥಯ್ಯ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್ಬಿಎಂ ಮಂಜು, ಪ್ರಕಾಶಕ ಶ್ರೀಧರ್, ಎಚ್.ಎಸ್. ವೀಣಾ ಮೂರ್ತಿ, ಎಚ್.ಎಸ್. ವಿದ್ಯಾ ಮೂರ್ತಿ, ಎಚ್.ಎಸ್. ವಾಣಿ ಮೂರ್ತಿ ಇದ್ದರು.

ಅಭಿನಂದನೆ: ಗುಂಡ್ಲುಪೇಟೆ ಶಾಸಕ ಶಾಸಕ ಎಚ್.ಎಂ. ಗಣೇಶ ಪ್ರಸಾದ್, ಚಾಮುಲ್ ಮಾಜಿ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್. ಹಿರಿಯ ವಕೀಲರಾದ ಸಿ. ಅಪ್ಪಾಜಿಗೌಡ, ಸಿ.ಎಂ. ಜಗದೀಶ್ ಹೋರಾಟಗಾರ ಎಚ್.ಕೆ. ಅನಂತ ಸೇರಿದಂತೆ ಹಲವರು ಎಚ್ವಿಎಸ್ ಮೂರ್ತಿ ಅವರನ್ನು ಸನ್ಮಾನಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-39-72728927

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.