ಮೈಸೂರು: ತಾಯಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಕೆಯನ್ನು ಕೊಲೆ ಮಾಡಿದ ಮಗ ಹಾಗೂ ಮೃತದೇಹ ಸುಟ್ಟು ಸಾಕ್ಷಿ ನಾಶಪಡಿಸಲು ಯತ್ನಿಸಿದ ಆಕೆಯ ಪತಿ ಸಹಿತ ಮೂವರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಜಯಪುರ ಹೋಬಳಿಯ ಕೆ.ಮಾದಳ್ಳಿ ನಿವಾಸಿ ಸುಧಾ (48) ಕೊಲೆಯಾದ ಮಹಿಳೆ. ಆಕೆಯ ಮಗ ಶಿವರುದ್ರಪ್ಪ (32), ನಂಜುಂಡಯ್ಯ (55), ಅಭಿ (22), ಆಕಾಶ್ (20) ಬಂಧಿತರು.

ಮಾಹಿತಿ ನೀಡಿದ ಅನಾಮಧೇಯ ಕರೆ: ಭಾನುವಾರ ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಬಂದ ಅನಾಮಧೇಯ ವ್ಯಕ್ತಿಯ ಕರೆಯು ಪ್ರಕರಣದ ಜಾಡು ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿತು.

‘ವ್ಯಕ್ತಿಯೊಬ್ಬರು ಕರೆ ಮಾಡಿ ನಮ್ಮ ಊರಿನಲ್ಲಿ ಜಗಳವಾಗಿ, ಮಗ ತಾಯಿಗೆ ಹಲ್ಲೆ ಮಾಡಿದ್ದಾನೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಈಗ ಶವ ಸುಟ್ಟು ಹಾಕಿದ್ದಾರೆ. ಎಂದು ಊರಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಜಯಪುರ ಠಾಣಾ ಎಸ್ಐನ್ನು ಘಟನೆಯ ಸ್ಥಳಕ್ಕೆ ಕಳಿಸಿದೆ. ಆದರೆ ಸ್ಥಳಿಯರು ಯಾರೂ ಈ ಬಗ್ಗೆ ಮಾಹಿತಿ ನೀಡುತ್ತಿರಲಿಲ್ಲ’ ಎಂದು ಮಲ್ಲಿಕಾರ್ಜುನ ಬಾಲದಂಡಿ ವಿವರಿಸಿದರು.

‘ಕೊಲೆಯಾದ ಸುಧಾ ಅವರ ಮಗ ಶಿವರುದ್ರಪ್ಪನನ್ನು ಗುಂಡ್ಲಪೇಟೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದೆವು. ಈ ವೇಳೆ ಆತ ಘಟನೆಯ ಬಗ್ಗೆ ಬಾಯಿ ಬಿಟ್ಟ. ಈಚೆಗೆ ಸುಧಾ ಅವರು ಅದೇ ಗ್ರಾಮದವರೊಬ್ಬರೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದುದನ್ನು ಯಾರೋ ವಿಡಿಯೋ ಮಾಡಿ ಆತನಿಗೆ ಕಳಿಸಿದ್ದರು. ಅನೈತಿಕ ಸಂಬಂಧದ ಅನುಮಾನದಲ್ಲಿ ತಾಯಿ– ಮಗನ ನಡುವೆ ಆಗಾಗ್ಗೆ ಜಗಳವೂ ನಡೆದಿದ್ದು, ಭಾನುವಾರ ಬೆಳಿಗ್ಗೆ 9ಕ್ಕೆ ಜೆ.ಪಿ ನಗರದ ತನ್ನ ಮನೆಯಿಂದ ಬಂದ ಆತ ಇದೇ ವಿಚಾರಕ್ಕೆ ಜಗಳವಾಡಿದ್ದು ಅಲ್ಲೇ ಇದ್ದ ದೊಣ್ಣೆಯಿಂದ ತಾಯಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದ’ ಎಂದರು.

‘ಅಲ್ಲೇ ಇದ್ದ ಆರೋಪಿಯ ಚಿಕ್ಕಪ್ಪನ ಮಕ್ಕಳಾದ ಅಭಿ ಹಾಗೂ ಆಕಾಶ್ ತಮ್ಮ ಸ್ನೇಹಿತರ ಕಾರಿನಲ್ಲಿ ಸುಧಾ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ತಲೆಯ ಭಾಗಕ್ಕೆ ಬಲವಾದ ಏಟು ಬಿದ್ದಿದ್ದರಿಂದ ಆಕೆ ಮಾರ್ಗ ಮಧ್ಯೆ ಮೃತಪಟ್ಟರು. ಆಕೆಯ ಪತಿ ನಂಜುಂಡಯ್ಯ ಅವರಿಗೆ ಕರೆ ಮಾಡಿದಾಗ ಶವವನ್ನು ತಮ್ಮ ಜಮೀನಿನಲ್ಲಿ ಸುಟ್ಟು ಹಾಕೋಣ ಎಂದ ಬಳಿಕ ಕನಿಯಹುಂಡಿ ಬಳಿ ಮುಖ್ಯರಸ್ತೆಯಿಂದ ಮೂರು ಕಿ.ಮೀ ದೂರದಲ್ಲಿರುವ ಮಾವಿನ ತೋಟಕ್ಕೆ ತೆರಳುತ್ತಾರೆ’ ಎಂದು ವಿವರಿಸಿದರು.

‘ಟ್ರಾಕ್ಟರ್ ಮೂಲಕ ಕಟ್ಟಿಗೆ ತರಿಸಿ, ಬೆಳಿಗ್ಗೆ 11ಕ್ಕೆ ಶವ ಸುಡುತ್ತಾರೆ. ನಂತರ ಅವರೆಲ್ಲರೂ ಬೇರೆ– ಬೇರೆ ಕಡೆ ಪರಾರಿಯಾಗಿದ್ದರು. ಪೊಲೀಸರು ಶವ ಸುಟ್ಟ ಸ್ಥಳಕ್ಕೆ ತೆರಳಿದಾಗ ಮಹಿಳೆಯ ಎಲುಬು, ಆಭರಣ, ಮಾಂಗಲ್ಯ ಸರ, ಬಟ್ಟೆಗಳು ಸಿಕ್ಕವೆ. ಶವ ಸಾಗಿಸಲು ಬಳಸಿದ ಕಾರು ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.