ಮೈಸೂರು: ‘ರಾಜ್ಯ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಹಣವನ್ನು ವಿನಿಯೋಗಿಸುವ ಮೂಲಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ಈ ವಿಷಯವನ್ನು ನ್ಯಾಯಾಲಯದ ಜೊತೆಗೆ ‘ಜನತಾ ನ್ಯಾಯಾಲಯ’ದ ಮುಂದಿಟ್ಟು ಪ್ರಶ್ನಿಸುತ್ತೇವೆ’ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮೈಸೂರು ನಗರ ಪ್ರಶಿಕ್ಷಣ ವರ್ಗ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ಪಕ್ಷಕ್ಕೆ ಹೈಕಮಾಂಡ್ ಜೀವಾಳವಾಗಿದೆ. ಆ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪದೇಪದೇ ದೆಹಲಿಗೆ ಓಡುತ್ತಿದ್ದಾರೆ. ಜೆಡಿಎಸ್ಗೆ ಒಂದು ನಿರ್ದಿಷ್ಟ ಸಮುದಾಯವೇ ಆತ್ಮವಾಗಿದ್ದರೆ, ಬಿಜೆಪಿಗೆ ಹಿಂದುತ್ವವೇ ಆತ್ಮ ಮತ್ತು ಕಾರ್ಯಕರ್ತರೇ ಪಕ್ಷದ ದೊಡ್ಡ ಶಕ್ತಿ. ಬಿಜೆಪಿಯನ್ನು ಯಾರೂ ಬಂಡವಾಳ ಹಾಕಿ ಕಟ್ಟಿಲ್ಲ; ಬದಲಿಗೆ ಕಾರ್ಯಕರ್ತರ ಬೆವರು, ಸಿದ್ಧಾಂತ ಹಾಗೂ ನಿರಂತರ ಸಂವಾದಗಳ ಮೂಲಕ ಕಟ್ಟಲಾಗಿದೆ’ ಎಂದು ಅವರು ಪ್ರತಿಪಾದಿಸಿದರು.

‘ಕೇವಲ ಪಕ್ಷದಿಂದಲೇ ಎಲ್ಲವನ್ನೂ ತಲುಪಲು ಸಾಧ್ಯವಿಲ್ಲ. ಜನನಾಯಕತ್ವವಿಲ್ಲದೆ ಜನಬೆಂಬಲ ಸಿಗುವುದಿಲ್ಲ. ಹೀಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ತಮಗೆ ಸಿಕ್ಕ ಸ್ಥಾನವನ್ನು ಅಧಿಕಾರ ಎಂದು ಭಾವಿಸದೆ ಜವಾಬ್ದಾರಿ ಎಂದು ತಿಳಿಯಬೇಕು. ಸಾಮಾಜಿಕ ಜಾಲತಾಣಗಳಲ್ಲಿನ ಹೊಗಳಿಕೆ ಅಥವಾ ಫ್ಲೆಕ್ಸ್ ಸಂಸ್ಕೃತಿಯಿಂದ ನಾಯಕತ್ವ ಹುಟ್ಟುವುದಿಲ್ಲ. ಜನಪರ ಕೆಲಸ ಮತ್ತು ಹೋರಾಟಗಳಿಂದ ಮಾತ್ರ ನಾಯಕರು ಮೂಡಿಬರುತ್ತಾರೆ. ಬಿಜೆಪಿ ದೇಶ ಮೊದಲು ಎಂಬ ತತ್ವದಡಿ ಕೆಲಸ ಮಾಡಿದರೆ, ಕಾಂಗ್ರೆಸ್ ದೇಶಕ್ಕಿಂತ ಪಕ್ಷವೇ ಮೊದಲು ಎಂಬ ಆಧಾರದಲ್ಲಿ ಕೆಲಸ ಮಾಡುತ್ತದೆ’ ಎಂದು ಟೀಕಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಶಾಸಕ ಟಿ.ಎಸ್. ಶ್ರೀವತ್ಸ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-39-1698672851

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.