ಮೈಸೂರು: ‘ವಿದ್ಯಾರ್ಥಿಗಳು ಸಾಧಕರ ಚರಿತ್ರೆ ಅಧ್ಯಯನ ಮಾಡಬೇಕು. ಗೆದ್ದವರ ಸ್ಫೂರ್ತಿಯೊಂದಿಗೆ, ಸೋತವರ ಬದುಕಿನ ಅಧ್ಯಯನವೂ ಆಗುತ್ತಿರಬೇಕು’ ಎಂದು ವೈದ್ಯ ಸಾಹಿತಿ ಡಾ.ನಾ.ಸೋಮೇಶ್ವರ ಹೇಳಿದರು.

ಇಲ್ಲಿನ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಸ್ನಾತಕೋತ್ತರ ವಿಭಾಗದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚರಿತ್ರೆಯಲ್ಲಿ ಗೆದ್ದವರ ಕಥೆಯಷ್ಟೆ ಇರುವುದಿಲ್ಲ. ಸೋತವರ ಕಥೆಯೂ ಇದೆ. ಅದರಿಂದಲೂ ಕಲಿಯುವುದು ಸಾಕಷ್ಟಿದೆ. ಸೋಲಿಗೆ ಹೆದರಬಾರದು, ಗೆಲುವಿಗೆ ಪ್ರಯತ್ನಿಸಬೇಕು. ಗೆದ್ದವರು ಬೀಗಬಾರದು. ಮುಂದಿನ ಮಹತ್ವದ ಜವಾಬ್ದಾರಿ, ಸವಾಲುಗಳನ್ನು ಎಚ್ಚರಿಕೆಯಿಂದ ಅರಿಯಬೇಕು’ ಎಂದರು.

‘ವಿದ್ಯಾರ್ಥಿಗಳು ಅರ್ಜುನನಂತೆ ಸವ್ಯಸಾಚಿ ಗುಣ ಬೆಳೆಸಿಕೊಳ್ಳಬೇಕು. ಶಿಸ್ತು, ಸಂಯಮ, ಸಮಯಪಾಲನೆ, ನಿಯಮಪಾಲನೆ, ಏಕಾಗ್ರತೆಯ ಮನೋಭಾವಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಯೋಗಪಟು ಎಚ್.ಖುಷಿ ಮಾತನಾಡಿ, ‘ಯೋಗ ಅಭ್ಯಾಸದಿಂದ ವಿಭಿನ್ನವಾದ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ದೇಹ ಮತ್ತು ಮನಸ್ಸಿನ ಮೇಲಿನ ನಿಯಂತ್ರಣ ಸಾಧಿಸುತ್ತೇವೆ’ ಎಂದು ಹೇಳಿದರು.

ಪ್ರಾಂಶುಪಾಲ ಎಂ.ಪ್ರಭು, ‘ಅನಿವಾರ್ಯ ಮತ್ತು ಅವಕಾಶಗಳ ಬಗ್ಗೆ ನಿಮಗೆ ಪ್ರಜ್ಞೆ ಇರಲಿ. ಬದುಕಿನಲ್ಲಿ ಯಾವುದೂ ಅನಿವಾರ್ಯವಲ್ಲ. ಎಲ್ಲವನ್ನು ಅವಕಾಶವಾಗಿ ನೋಡಿ’ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ‘ಇಂದು ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಾವಕಾಶ ನಾಶವಾಗುತ್ತಿವೆ ಎಂಬ ಚರ್ಚೆ ಕೇಳಿಬರುತ್ತಿದೆ. ಆದರೆ ಈ ತಂತ್ರಜ್ಞಾನದಿಂದ ಉದ್ಯೋಗ ನಾಶವಾಗುತ್ತಿಲ್ಲ. ಉದ್ಯೋಗದ ಸ್ವರೂಪಗಳು ಬದಲಾಗುತ್ತಿವೆ. ಇದನ್ನು ವಿದ್ಯಾರ್ಥಿಗಳು ಸರಿಯಾಗಿ ಅರಿತುಕೊಂಡರೆ ಹಲವು ಅವಕಾಶ ಲಭಿಸುತ್ತವೆ’ ಎಂದು ತಿಳಿಸಿದರು.

ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಯಿತು.

ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಎಂ.ಪಿ.ಸೋಮಶೇಖರ್, ದೈಹಿಕ ನಿರ್ದೇಶಕ ಎಂ.ಕಾರ್ತಿಕ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-38-671870858

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.