ಮೈಸೂರು: ಕಬ್ಬಿನ ಲಾಭಾಂಶದ ಹಣವನ್ನು ಬಣ್ಣಾರಿ ಕಬ್ಬಿನ ಕಾರ್ಖಾನೆ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ‘ಕಳೆದ ವರ್ಷ ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ರೈತರಿಗೆ ಕೊಡಲು ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ಟನ್ ಕಬ್ಬಿಗೆ ₹ 50 ಹಾಗೂ ರಾಜ್ಯ ಸರ್ಕಾರದಿಂದ ₹ 50 ನೀಡುವುದಾಗಿ ಆದೇಶ ಮಾಡಿದ್ದರು. ಆದರೆ, ಬಣ್ಣಾರಿ ಸಕ್ಕರೆ ಕಾರ್ಖಾನೆ ಈ ಹಣ ನೀಡಿಲ್ಲ. ಕಾರ್ಖಾನೆಯು ಒಟ್ಟು ₹ 18 ಕೋಟಿಗೂ ಹೆಚ್ಚು ಹಣ ರೈತರಿಗೆ ನೀಡಬೇಕಿದೆ. ಹೀಗಾಗಿ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸಕ್ಕರೆ ಕಾರ್ಖಾನೆ ಮುಂಭಾಗ ತೂಕದ ಯಂತ್ರ ಹಾಕುವಲ್ಲೂ ಸರ್ಕಾರ ವಿಫಲವಾಗಿವೆ. ಇಳುವರಿಯಲ್ಲಿನ ಮೋಸ ತಪ್ಪಿಸಲು ಸ್ಥಳೀಯವಾಗಿ ತಜ್ಞರ ಸಮಿತಿ ನೇಮಕ ಮಾಡಬೇಕು. ಸಕ್ಕರೆ ಕಾರ್ಖಾನೆ ಮುಂದೆ ಇಳುವರಿ ಪರಿಶೀಲನೆ ಮಾಡುವ ಲ್ಯಾಬ್ ಸ್ಥಾಪಿಸಬೇಕು. ಕಬ್ಬು ದರ ನಿಗದಿಯಲ್ಲಿ ಉತ್ತರ, ದಕ್ಷಿಣ ಎಂಬ ವ್ಯತ್ಯಾಸವಿಲ್ಲದೆ ರಾಜ್ಯಕ್ಕೆ ಏಕರೀತಿಯ ದರ ನಿಗದಿ ಆಗಬೇಕು’ ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ‘ಕಾರ್ಖಾನೆಯ ಹಣ ಪಾವತಿ ವಿಚಾರ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಸರ್ಕಾರದಿಂದ ನಿರ್ದೇಶನ ಬಂದ ನಂತರ ಪಾವತಿಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಸಂಘಟನೆಯ ಕೆರೆಹುಂಡಿ ರಾಜಣ್ಣ, ಎಚ್.ಎಸ್. ರಾಜು ಅಂಡುವಿನಹಳ್ಳಿ, ಹಾಲಿನ ನಾಗರಾಜ್ ವಳಗೆರೆ, ಗಣೇಶ್ ಮಲಿಯೂರು, ಮಹೇಂದ್ರ ಪ್ರಕಾಶ್, ಗಾಂಧಿ ದೇವನೂರು, ನಾಗೇಂದ್ರ, ಮಹದೇವಪ್ಪ, ಶ್ರೀಕಂಠ, ಮುದ್ದಳ್ಳಿ ಮಧು, ಚಿದಂಬರ ಸ್ಯಾಂಡರಳ್ಳಿ, ಬಸವರಾಜು, ಉಮೇಶ್, ನಾಗರಾಜಪ್ಪ, ಊರ್ದಳ್ಳಿ ರಾಮಣ್ಣ, ಮುಕುಡಹಳ್ಳಿ ರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.