ಮೈಸೂರು: ಸಾಹಿತ್ಯ ಹಾಗೂ ದೃಶ್ಯಕಲಾ ಮಾಧ್ಯಮದ 11 ಸಾಧಕರಿಗೆ ಇಲ್ಲಿನ ಸುತ್ತೂರು ಶಾಖಾ ಮಠದ ಆವರಣದಲ್ಲಿ ಸಂಜೆ ವಿವಿಧ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ, ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 2023, 2024 ಹಾಗೂ 2025ನೇ ಸಾಲಿನ ಶಿವರಾತ್ರೀಶ್ವರ ಪ್ರಶಸ್ತಿ, ಕಲಾಗುರು ಡಿ.ವಿ. ಹಾಲಭಾವಿ ಪ್ರಶಸ್ತಿ ಹಾಗೂ ವಚನ ಚಿತ್ರರಚನಾ ಪಿತಾಮಹ ಎಂ. ವೀರಪ್ಪ ದತ್ತಿ ಪ್ರಶಸ್ತಿಗಳನ್ನು ನೀಡಲಾಯಿತು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.

ಉತ್ತಮ ಕೃತಿಗಳಿಗೆ ನೀಡುವ ‘ಶಿವರಾತ್ರೀಶ್ವರ’ ಪ್ರಶಸ್ತಿಯನ್ನು ಓ.ಎಲ್. ನಾಗಭೂಷಣಸ್ವಾಮಿ, ಎಚ್.ಎಸ್. ಸಿದ್ಧಗಂಗಪ್ಪ, ಎಸ್. ಶಿವಾನಂದ ಬ್ಯಾಲಹುಣಸಿ, ದಿ. ಪ್ರೊ. ಭಾಲಚಂದ್ರ ಜಯಶೆಟ್ಟಿ ಪರವಾಗಿ ಅವರ ಕುಟುಂಬದವರು ಸ್ವೀಕರಿಸಿದರು.

‘ಎಂ.ವೀರಪ್ಪ ದತ್ತಿ’ ಪ್ರಶಸ್ತಿಯನ್ನು ಸಂಗಪ್ಪ ನಿಂಗಪ್ಪ ಮಲಗೊಂಡ, ಶಿವಪುತ್ರಪ್ಪ ಎಂ. ಬಡಿಗೇರ ಮತ್ತು ಚಂದ್ರಶೇಖರ ಭೀಮಣಪ್ಪ ಸೋಮಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ‘ಡಿ.ವಿ. ಹಾಲಭಾವಿ’ ಪ್ರಶಸ್ತಿಯನ್ನು ಪ್ರೊ.ಕೆ.ಎಸ್. ಅಪ್ಪಾಜಯ್ಯ, ವಿಜಯ ರಾವ್ ಹಾಗೂ ಕಿಶೋರ್ಕುಮಾರ್ ಹಿರೇಮಠ ಅವರು ಸ್ವೀಕರಿಸಿದರು.

ಪ್ರಶಸ್ತಿ ಪುರಸ್ಕೃತ ಕಲಾವಿದರ ಕುರಿತು ಮಾತನಾಡಿದ ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಸ್. ಮೂರ್ತಿ, ‘ಅಕ್ಷರದ ತಾಯಿ ಆಗಿರುವ ದೃಶ್ಯಕಲೆಗೆ ಇಷ್ಟು ದೊಡ್ಡ ಗೌರವವನ್ನು ಅಕಾಡೆಮಿ ಬಿಟ್ಟರೆ ಸುತ್ತೂರು ಮಠ ಮಾತ್ರವೇ ನೀಡುತ್ತಿದೆ. ಅತ್ಯಂತ ಘನತೆಯಿಂದ ಈ ಕಾರ್ಯ ನಡೆದಿದೆ’ ಎಂದು ಶ್ಲಾಘಿಸಿದರು.

‘ಕಳೆದ ನೂರು ವರ್ಷಗಳ ಸಾಹಿತ್ಯ ಪರಂಪರೆ ಗಮನಿಸಿದರೆ ನಮ್ಮ ದೃಶ್ಯಕಲೆ ಎಲ್ಲಿ ನಿಂತಿದೆ ಎಂಬುದು ಗೊತ್ತಾಗುತ್ತದೆ. ದೃಶ್ಯಕಲೆ ಎನ್ನುವುದು ಸಾಮಾನ್ಯ ಜನರ ಬದುಕಿನ ಭಾಗ. ದರ್ಶನ ತತ್ವದ ಮೂಲವೂ ಆಗಿದೆ’ ಎಂದರು.

ಪ್ರಶಸ್ತಿ ಪುರಸ್ಕೃತ ಕೃತಿಗಳ ಕುರಿತು ಮಾತನಾಡಿದ ಧ್ವನಿ ಫೌಂಡೇಶನ್ ಅಧ್ಯಕ್ಷೆ ಶ್ವೇತಾ ಮಡಪ್ಪಾಡಿ, ‘ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತಂದವರು ವಚನಕಾರರು. ಇಂದು ಪ್ರಶಸ್ತಿ ಪಡೆದ ನಾಲ್ಕು ಕೃತಿಗಳೂ ಅದಕ್ಕೆ ಸಂಬಂಧಿಸಿದ್ದೇ ಆಗಿವೆ. ಕ್ರೌರ್ಯ ಎನ್ನುವುದು ಧರ್ಮದ ಭಾಗ ಎಂಬಂತಾಗಿರುವ ಈ ಹೊತ್ತಿನಲ್ಲಿ ಧರ್ಮ ಎಂದರೆ ಪ್ರೀತಿ ಎನ್ನುವ ಭಾವವನ್ನು ಈ ಕೃತಿಗಳು ಮೂಡಿಸುತ್ತವೆ’ ಎಂದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ವಿಮರ್ಶಕ ಓ.ಎಲ್. ನಾಗಭೂಷಣಸ್ವಾಮಿ, ‘ಕರ್ನಾಟಕದ ಸಂಸ್ಕೃತಿಯನ್ನು ನಾಲ್ಕು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಿದ್ದು ನಾಡಿನ ಮಠಗಳು. ಇಲ್ಲಿ ನೀಡುತ್ತಿರುವ ಪ್ರಶಸ್ತಿ ಹೆಚ್ಚು ಮೌಲ್ವಿಕವಾದುದು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ.ಎಸ್. ಮಂಜುನಾಥ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಜೆಎಸ್ಎಸ್ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ, ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ. ನಿರಂಜನ ಮೂರ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-38-805272656

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.