ತಿ.ನರಸೀಪುರ: ತ್ರಿವೇಣಿ ಸಂಗಮದ ದಂಡೆಯ ಶ್ರೀ ಕ್ಷೇತ್ರ ಪಟ್ಟಣದ ಹಳೇ ತಿರುಮಕೂಡಲಿನ ಪುರಾತನ ಪ್ರಸಿದ್ಧ ಪೂರ್ಣ ಮಂಗಳ ಕಾಮಾಕ್ಷಾಂಬ ಸಮೇತ ಅಗಸ್ತ್ಯೇಶ್ವರ ಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.

ದಕ್ಷಿಣ ಪ್ರಯಾಗ, ತ್ರಿಮಕೂಟ ಕ್ಷೇತ್ರ ಹಳೇ ತಿರುಮಕೂಡಲು ಕಾವೇರಿ ಕಪಿಲಾ ಸ್ಫಟಿಕ ಸರೋವರಗಳ ಸಂಗಮದಲ್ಲಿ ಪರಾಭವ ನಾಮ ಸಂವತ್ಸರದ ಶುಭ ದಿವಸ ಮಧ್ಯಾಹ್ನ 12ಕ್ಕೆ ಅಮ್ಮನವರ ಉತ್ಸವ ಮೂರ್ತಿಯ ಮೆರವಣಿಗೆ ನಂತರ ರಥದ ಸುತ್ತ ಮೂರು ಪ್ರದಕ್ಷಿಣೆ ಹಾಕಲಾಯಿತು. ನಂತರ ಅಮ್ಮನವರನ್ನು ಪ್ರತಿಷ್ಠಾಪಿಸಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.

ಮುಖ್ಯರಥದೊಂದಿಗೆ ಚಂದ್ರ ಮೌಳೇಶ್ವರ, ಪಾರ್ವತಮ್ಮ, ವಿಘ್ನೇಶ್ವರ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಎರಡು ಚಿಕ್ಕ ರಥಗಳು ಸಂಚರಿಸಿದವು. ದೇವಸ್ಥಾನ ಬಳಿ ನೆರೆದಿದ್ದ ಭಕ್ತರು ರಥವನ್ನು ಎಳೆದರು. ದೇವಾಲಯದ ಮುಂಭಾಗದಿಂದ ಆರಂಭಗೊಂಡ ರಥವು ತಿರುಮಕೂಡಲಿನ ಮುಖ್ಯ ಬೀದಿಯಲ್ಲಿ ಸಂಚರಿಸಿದ ಬಳಿಕ ಸ್ವಸ್ಥಾನ ಸೇರಿತು. ಭಕ್ತರು ರಥಕ್ಕೆ ಪೂಜೆ ಸಲ್ಲಿಸಿ ಹಣ್ಣು-ಧವನ ಎಸೆದು ಭಕ್ತಿ ಸಮರ್ಪಿಸಿದರು.

ಬೆಳಿಗ್ಗೆಯಿಂದಲೇ ದೇವಸ್ಥಾನ ದಲ್ಲಿ ಅಗಸ್ತೇಶ್ವರಸ್ವಾಮಿಗೆ ಹಾಗೂ ಪೂರ್ಣ ಮಂಗಳ ಕಾಮಾಕ್ಷಾಂಬ ದೇವಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು, ಅಭಿಷೇಕ, ಉತ್ಸವಗಳು ನೆರವೇರಿದವು. ಭಕ್ತರು ದೇವರ ದರ್ಶನ ಪಡೆದರು. ವಿವಿಧ ಕಡೆಗಳಲ್ಲಿ ಭಕ್ತರಿಗೆ ಪ್ರಸಾದ ಸೇರಿದಂತೆ ನೀರು, ಕೋಸಂಬರಿ, ಮಜ್ಜಿಗೆ ಪಾನಕ ವಿತರಿಸಲಾಯಿತು. ರಥೋತ್ಸವದ ಪೂಜಾ ಕಾರ್ಯಕ್ರಮಗಳನ್ನು ಮಾ.23 ರಂದು ಆರಂಭಿಸಲಾಗಿತ್ತು. ಸೋಮವಾರ ಮಹಾ ರಥೋತ್ಸವದ ಬಳಿಕ ಹಂಸಾರೋಹಣ, ರಾತ್ರಿ ತೇರಡಿ ಮಂಟಪೋತ್ಸವ ಸಂಗೀತ ನಡೆಯಿತು.

ಮಂಗಳವಾರ (ಮಾ.31) ಶಯನೋತ್ಸವ, ಆಶ್ವಾರೋಹಣ, ಏ.1ರಂದು ತೆಪ್ಪೋತ್ಸವ, ಧ್ವಜಾವರೋಹಣ ಹಾಗೂ 2ರಂದು ಮಹಾಭಿಷೇಕ, ಪೂರ್ವಕ ನಂದಾ ರೋಹಣ ಕೈಲಾಸ ವಾಹನದೊಂದಿಗೆ ಜಾತ್ರೋತ್ಸವದ ಉತ್ಸವಗಳು ಸಂಪನ್ನಗೊಳ್ಳಲಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-38-1594297922

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.