ತಿ.ನರಸೀಪುರ: ತಾಲ್ಲೂಕಿನ ಮೂಗೂರು ಗ್ರಾಮದಲ್ಲಿ 2021ರಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಅಪರಾಧಿಗೆ ಮೈಸೂರಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಗ್ರಾಮದ ಮಹೇಶ್ಕುಮಾರ್ ಶಿಕ್ಷೆಗೊಳಗಾದ ಅಪರಾಧಿ. ಗ್ರಾಮದ ಭಾಗ್ಯಲಕ್ಷ್ಮಿ ಕೊಲೆಯಾದವರು.

ಮಹೇಶ್ಕುಮಾರ್ ಮತ್ತು ಭಾಗ್ಯಲಕ್ಷ್ಮಿ ಅವರ ಪುತ್ರಿ ಪೂಜಾಶ್ರೀ ಪ್ರೀತಿಸುತ್ತಿದ್ದರು.

ಇದೇ ವಿಚಾರವಾಗಿ ಭಾಗ್ಯಲಕ್ಷ್ಮಿ ಮಹೇಶ್ಕುಮಾರ್ನನ್ನು ಆಗಾಗನಿಂದಿಸುತ್ತಿದ್ದರು. ಇದರಿಂದ ಭಾಗ್ಯಲಕ್ಷ್ಮಿ ಮೇಲೆ ಮಹೇಶ್ಕುಮಾರ್ ಕೋಪಗೊಂಡಿದ್ದ.

2021ರ ಆಗಸ್ಟ್ 25ರಂದು ಭಾಗ್ಯಲಕ್ಷ್ಮಿ ಅವರು ಚಾಮರಾಜ ಬಲದಂಡೆ ನಾಲೆಯ ರಸ್ತೆ ಬಳಿ ಹೋಗುತ್ತಿದ್ದರು. ಆಗ ಎದುರಿಗೆ ಬಂದ ಮಹೇಶ್ಕುಮಾರನನ್ನು ಕಂಡು ನಿಂದಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಗುದ್ದಲಿಯಿಂದ ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ.

ಬಳಿಕ ಗೋಣಿ ಚೀಲದೊಳಗೆ ಶವ ಹಾಕಿ ಕಾಲುವೆಯ ನೀರು ಬರುವ ಪೈಪಿನೊಳಗೆ ಹಾಕಿದ್ದ.

ಈ ಸಂಬಂಧ ಅಂದಿನ ತನಿಖಾಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್ ಎನ್.ಜಿ. ಕೃಷ್ಣಪ್ಪ ಮಹೇಶ್ಕುಮಾರ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲನಗೌಡ ಅವರು ಅಪರಾಧ ಸಾಬೀತಾಗಿದ್ದರಿಂದ ಮಹೇಶ್ಕುಮಾರ್ಗೆ ಜೀವಾವಧಿ ಶಿಕ್ಷೆ ಮತ್ತು ₹ 75,000 ದಂಡ ಹಾಗೂ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಕ್ಕೆ 5 ವರ್ಷಗಳ ಶಿಕ್ಷೆ ಮತ್ತು ₹ 25,000 ದಂಡ ವಿಧಿಸಿದ್ದಾರೆ.

ದಂಡದ ಮೊತ್ತವನ್ನು ಭಾಗ್ಯಲಕ್ಷ್ಮಿ ಪುತ್ರಿ ಹಾಗೂ ತಂದೆಗೆ ನೀಡುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.

ಸರ್ಕಾರಿ ಅಭಿಯೋಜಕಿ ಬಿ.ಎಂ.ವೀಣಾ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-38-696846031

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.