ಮೈಸೂರು: ‘ತಿ. ನರಸೀಪುರ ಪಿಲೇಚರ್ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣದ ನಿರ್ಧಾರವನ್ನು ಮಾ.15 ರೊಳಗೆ ಹಿಂಪಡೆಯದಿದ್ದರೆ ಮತ್ತೆ ಹೋರಾಟ ಆರಂಭಿಸೋಣ’ ಎಂದು ಗುರುವಾರ ನಡೆದ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ನಿರ್ಣಯಿಸಲಾಯಿತು.

ಪರಿಸರಕ್ಕಾಗಿ ನಾವು ಸಂಘಟನೆಯ ಪರಶುರಾಮೇಗೌಡ ಮಾತನಾಡಿ, ‘ತಾಂತ್ರಿಕ ವರದಿ ಆಧರಿಸಿ ಕ್ರೀಡಾಂಗಣ ನಿರ್ಮಾಣ ನಿರ್ಧಾರವನ್ನು ಮರುಪರಿಶೀಲನೆ ಮಾಡುವುದಾಗಿ ವಿಧಾನಪರಿಷತ್ ಸದಸ್ಯ ಯತೀಂದ್ರ ಅವರು ಹೋರಾಟಗಾರರಿಗೆ ನೀಡಿರುವ ಭರವಸೆಯು ಸ್ವಾಗತಾರ್ಹ. ಅಧಿಕೃತ ಪ್ರಕಟಣೆಯಾಗುವವರೆಗೆ ಕಾರ್ಮಿಕರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಬೇಕು. ಹೆಚ್ಚುವರಿ ಕೆಲಸ ಮಾಡುವುದನ್ನು ನಿರಾಕರಿಸಬೇಕು’ ಎಂದು ನಿರ್ಧರಿಸಿದರು.

‘ಕಾರ್ಮಿಕರ ಮುಷ್ಕರ ಬೆಂಬಲಿಸಿದ್ದ ಸಂಘಟನೆಗಳು ವಿವಿಧ ರೀತಿಯಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕುವುದನ್ನು ಮುಂದುವರಿಸಬೇಕು. ಕ್ರೀಡಾಂಗಣ ನಿರ್ಮಾಣ ನಿರ್ಧಾರವನ್ನು ಮಾ. 15ರೊಳಗೆ ಸರ್ಕಾರ ಕೈಬಿಡದಿದ್ದರೆ ಪರಿಸರ ಸಂಘಟನೆಗಳು, ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು , ಪ್ರಗತಿಪರ ಸಂಘಟನೆಗಳ ಜೊತೆಗೂಡಿ ತೀವ್ರ ಸ್ವರೂಪದ ಹೋರಾಟ ರೂಪಿಸಬೇಕು’ ಎಂದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ದಸಂಸ ಜಿಲ್ಲಾ ಸಂಚಾಲಕ ಅಲಗೂಡು ಶಿವಕುಮಾರ್, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಕಬ್ಬು ಬೆಳೆಗಾರರ ಸಂಘದ ಮುಖಂಡ ಪ್ರಸಾದ್ ನಾಯಕ್, ದೇವನೂರು ವಿಜಯೇಂದ್ರ, ಯೋಗೇಶ್, ಮಹೇಶ್, ಮಹದೇವಸ್ವಾಮಿ, ರಾಜ್ಯ ರೈತ ಸಂಘದ ಮುಖಂಡ ಕರೋಹಟ್ಟಿ ಕುಮಾರಸ್ವಾಮಿ, ಬೂದಳ್ಳಿ ಶಂಕರ್, ಶಾಂತಕುಮಾರ್ ಕೊತ್ತೆಗಾಲ, ಇ. ರಾಜು, ಟೈಲರ್ ಮಹದೇವ, ಬಾನು ಪ್ರಶಾಂತ್, ಗಂಟಯ್ಯ, ವಿಶ್ವನಾಥ್, ಸಿಂಧುವಳ್ಳಿ ಅಕ್ಬರ್ ಭಾಗಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.