ಮೈಸೂರು: ಪಾರಂಪರಿಕ ನಗರಿ ಮೈಸೂರಿನ ವಿಶೇಷಗಳಲ್ಲಿ ಒಂದಾಗಿರುವ ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ‘ಟಾಂಗಾ ಸವಾರಿ’ಯ ಅನುಭವವನ್ನು ಮತ್ತಷ್ಟು ಮಧುರವಾಗಿಸಲು, ಇಲ್ಲಿ ಟಾಂಗಾ ನಿಲ್ದಾಣಗಳ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ‘ಸ್ವದೇಶಿ ದರ್ಶನ್ 2.0’ ಯೋಜನೆಯಡಿ ₹ 2.71 ಕೋಟಿಯನ್ನು ಈ ಕಾಮಗಾರಿಗೆ ಒದಗಿಸಲಾಗಿದೆ.

‘ಟಾಂಗಾ ರೈಡ್ ಎಕ್ಸ್ಪೀರಿಯೆನ್ಸ್’ (ಟಾಂಗಾ ಸವಾರಿ ಅನುಭವ) ಹೆಸರಿನ ಯೋಜನೆಯ ಕಾಮಗಾರಿಯನ್ನು ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಗಮ ನಿಯಮಿತದ (ಕೆಟಿಐಎಲ್) ಮೂಲಕ ನಿರ್ಮಾಣಕ್ಕೆ 2025ರ ಆ.7ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಪ್ರಸ್ತುತ ನಜರ್ಬಾದ್ನ ಕೆಎಸ್ಆರ್ಟಿಸಿ ಕೇಂದ್ರ ಬಸ್ ನಿಲ್ದಾಣದ (ಸಬ್ ಅರ್ಬನ್) ಬಳಿಯ ಟಾಂಗಾ ನಿಲ್ದಾಣ ಅತ್ಯಾಧುನಿಕ ರೂಪ ಪಡೆದುಕೊಳ್ಳುತ್ತಿದೆ.

ಮೂರು ಟಾಂಗಾ ನಿಲ್ದಾಣಗಳು ಹಾಗೂ ಎರಡು ಟಾಂಗಾ ಲಾಯಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಅನುದಾನ ಒದಗಿಸಲಾಗಿದೆ. ಅತ್ಯಾಧುನಿಕ ಸ್ಪರ್ಶ ನೀಡುವ ಉದ್ದೇಶವನ್ನು ಯೋಜನೆಯಲ್ಲಿ ಹೊಂದಲಾಗಿದೆ.

ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಲ್ಲಿಂದ ಅವರು, ಟಾಂಗಾ ಬಾಡಿಗೆಗೆ ಪಡೆದು ನಗರದ ಪಾರಂಪರಿಕ ತಾಣಗಳನ್ನು ವೀಕ್ಷಿಸಬಹುದಾಗಿದೆ. ಇದರಿಂದ, ಟಾಂಗಾಗಳನ್ನು ನಡೆಸುವವರು ರಸ್ತೆ ಬದಿಯಲ್ಲಿ ನಿಲ್ಲಿಸಿಕೊಂಡು ಕಾಯುವ ಬದಲಿಗೆ ನಿಲ್ದಾಣಗಳಿಂದ ಪ್ರವಾಸಿಗರನ್ನು ಕರೆದೊಯ್ಯಬಹುದಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಆಗುವುದು ತಪ್ಪಲಿದೆ ಎಂಬ ವಿಶ್ವಾಸ ಇಲಾಖೆಯದು.

ಸದ್ಯ, ನಜರ್ಬಾದ್ ಸಬ್ಅರ್ಬನ್ ಬಸ್ ನಿಲ್ದಾಣದ ಮುಂದಿನ ಲಾಯ ಅಭಿವೃದ್ಧಿ ಕಾಮಗಾರಿಯಷ್ಟೆ ಪ್ರಗತಿಯಲ್ಲಿದ್ದು, ಶೇ 20ರಷ್ಟು ಬಾಕಿ ಇದೆ. ಉಳಿದವುಗಳ ಕಾಮಗಾರಿ ಇನ್ನಷ್ಟೆ ಆರಂಭವಾಗಬೇಕಿದೆ. ಅನುಮೋದನೆಗಾಗಿ ಮಹಾನಗರಪಾಲಿಕೆಗೆ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

‘ಮೈಸೂರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅದರಲ್ಲಿ ವಿದೇಶಿಯರೂ ಇರುತ್ತಾರೆ. ಅವರಿಗೆ ಟಾಂಗಾ ಸವಾರಿಗೆ ದರ ನಿಗದಿಯಾಗಿಲ್ಲ. ಟಾಂಗಾದವರು ಮನಬಂದಂತೆ ಹಣ ಪಡೆಯುವ ಉದಾಹರಣೆಯೂ ಇದೆ. ಇದನ್ನು ತಪ್ಪಿಸಲು, ನಿಲ್ದಾಣ ಸಿದ್ಧವಾದ ಬಳಿಕ ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಟಿಕೆಟ್ ದರ ನಿಗದಿಪಡಿಸಲಾಗುವುದು. ನಗರದಲ್ಲಿ 150 ಮಂದಿ ಟಾಂಗಾ ನಡೆಸುವವರಿದ್ದು ಎಲ್ಲರೂ ನೋಂದಾಯಿಸಿಕೊಳ್ಳಲಿದ್ದಾರೆ. ಪ್ರವಾಸಿಗರು ಕೌಂಟರ್ನಲ್ಲಿ ಟಿಕೆಟ್ ಪಡೆದು ಟಾಂಗಾ ಸವಾರಿಗೆ ಹೋಗಲು ವ್ಯವಸ್ಥೆ ಮಾಡಲಾಗುವುದು. ಸರದಿಯಂತೆ ಟಾಂಗಾದವರಿಗೆ ಅವಕಾಶ ಸಿಗಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅಂಬಾವಿಲಾಸ ಅರಮನೆ, ಮೃಗಾಲಯ, ಮಾರುಕಟ್ಟೆ ಪ್ರದೇಶ ಸೇರಿದಂತೆ ಪಾರಂಪರಿಕ ಕಟ್ಟಡಗಳ ‘ಸರ್ಕ್ಯೂಟ್’ ಮಾಡಲಾಗುತ್ತದೆ. ಅವುಗಳನ್ನು ಟಾಂಗಾದವರು ಪ್ರವಾಸಿಗರಿಗೆ ತೋರಿಸುತ್ತಾರೆ ಎನ್ನುತ್ತಾರೆ ಅವರು.

‘ಟಾಂಗಾ ಸವಾರಿ ಅನುಭವ ಕಾಮಗಾರಿ’ ವಿವರ

ಟಾಂಗಾ ನಿಲ್ದಾಣಗಳ ಅಭಿವೃದ್ಧಿ

ಮೈಸೂರು ಅರಮನೆ ವರಹಾ ಗೇಟ್ ಬಳಿಯ ಇಂದಿರಾ ಕ್ಯಾಂಟೀನ್ ಆವರಣ; ₹ 51.56 ಲಕ್ಷ

ಬಲರಾಮ ಗೇಟ್ ರಾಜ್ಕುಮಾರ್ ಉದ್ಯಾನದ ಆವರಣ; ₹ 26.53 ಲಕ್ಷ

ಚಾಮರಾಜೇಂದ್ರ ಮೃಗಾಲಯದ ಬಳಿ; ₹ 31.63 ಲಕ್ಷ

ಟಾಂಗಾ ಲಾಯ ಅಭಿವೃದ್ಧಿ

ಕುಕ್ಕರಹಳ್ಳಿ ಕೆರೆ ಬಳಿ; ₹ 40.93 ಲಕ್ಷ

ನಜರ್ಬಾದ್ ಸಬ್ಅರ್ಬನ್ ಬಸ್ ನಿಲ್ದಾಣದ ಮುಂಭಾಗ; ₹ 43.28 ಲಕ್ಷ

ಐಟಿ ಉಪಕರಣ/ಸೇವೆ; ₹ 25 ಲಕ್ಷ

ರಾಜ್ಕುಮಾರ್ ಉದ್ಯಾನದ ಆವರಣದಲ್ಲಿ...

ಈ ಹಿಂದಿನ ಯೋಜನೆಯಂತೆ, ಪುರಭವನದ ಎದುರಿನ ಪಾದಚಾರಿ ಮಾರ್ಗದಲ್ಲಿ ಟಾಂಗಾ ನಿಲ್ದಾಣ ಅಭಿವೃದ್ಧಿಗೆ ಕಾಮಗಾರಿ ಅರಂಭಿಸಲಾಗಿತ್ತು.

‘ಇದು ಅವೈಜ್ಞಾನಿಕ ಹಾಗೂ ಪಾದಚಾರಿ ಮಾರ್ಗದಲ್ಲಿ ನಿರ್ಮಾಣ ಮಾಡುವುದು ಸರಿಯಲ್ಲ’ ಎಂಬ ವಿರೋಧ ಸಾರ್ವಜನಿಕರಿಂದ ವ್ಯಕ್ತವಾದ ಕಾರಣದಿಂದ ಆ ಕಾಮಗಾರಿ ಕೈಬಿಡಲಾಯಿತು. ಇದೀಗ, ಬಲರಾಮ ಗೇಟ್ ರಾಜ್ಕುಮಾರ್ ಉದ್ಯಾನದ ಆವರಣದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಕುಕ್ಕರಹಳ್ಳಿ ಕೆರೆ ಎದುರಿನ ಲಾಯ ಅಭಿವೃದ್ಧಿಗೆ ಸಿವಿಲ್ ಕಾಮಗಾರಿ ಆರಂಭಿಸಲಾಗಿತ್ತು. ಅದನ್ನು, ರೈಲ್ವೆ ಕೆಳಸೇತುವೆ ನಿರ್ಮಾಣದ ಉದ್ದೇಶದಿಂದ ಸ್ಥಗಿತಗೊಳಿಸಲಾಗಿದೆ.

ಏನೇನು ಸೌಲಭ್ಯ ದೊರೆಯಲಿದೆ?

ಸಬ್ಅರ್ಬನ್ ಬಸ್ ನಿಲ್ದಾಣದ ಎದುರಿನ ಟಾಂಗಾ ನಿಲ್ದಾಣದಲ್ಲಿ 20ರಿಂದ 30 ಕುದುರೆಗಳನ್ನು ಕಟ್ಟಲು ಅವಕಾಶ ಆಗಲಿದೆ. ಹಿಂದಿದ್ದ ಕಟ್ಟಡ, ಶಿಥಿಲಗೊಂಡಿದ್ದ ಕಾಂಪೌಂಡ್ ತೆರವುಗೊಳಿಸಿ ಹೊಸದಾಗಿ ನಿರ್ಮಿಸಲಾಗಿದೆ. ಟಿಕೆಟ್ ಕೌಂಟರ್ ಕೂಡ ಬರಲಿದೆ. ನಾಲ್ಕು ಆಸನಗಳ ವ್ಯವಸ್ಥೆಯೂ ಇರಲಿದೆ.

ಎಟಿಎಂ, ಕುಡಿಯುವ ನೀರಿನ ವ್ಯವಸ್ಥೆ, ಪಾರಂಪರಿಕ ಶೈಲಿಯ ವಿದ್ಯುತ್ ಕಂಬಗಳ ಅಳವಡಿಕೆ, ಟಾಂಗಾಗಳಿಗೆ ಕ್ಯೂಲೈನ್ ವ್ಯವಸ್ಥೆ ಮಾಡಲಾಗುವುದು. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಐದು ವರ್ಷಗಳವರೆಗೆ ಇಲಾಖೆಯಿಂದಲೇ ನಿರ್ವಹಿಸಲಾಗುತ್ತದೆ. ಇದರಿಂದ ಸ್ವಚ್ಛತೆ ಕಾಪಾಡಿಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಟಾಂಗಾದಲ್ಲಿ ಸುತ್ತಾಡಲು ಬಯಸುವವರಿಗೆ ಅನುಕೂಲ ಕಲ್ಪಿಸಲು ನಿಲ್ದಾಣ ಅಭಿವೃದ್ಧಿಪಡಿಸಲಾಗುತ್ತಿದೆ. ಶುಲ್ಕ ನಿಗದಿಪಡಿಸಿ, ನಿರ್ವಹಿಸಲಾಗುವುದು.
– ವಿ.ಎಂ. ಪ್ರಭುಸ್ವಾಮಿ, ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.