ಮೈಸೂರು: ನಗರದ ಜಯಲಕ್ಷ್ಮೀಪುರಂನ ಸತ್ಯಸಾಯಿ ಬಾಬಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಗುರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

1996ರಿಂದ 2004ರವರೆಗೆ ಕಲಿತ ವಿದ್ಯಾರ್ಥಿಗಳು ಭಾನುವಾರ ‘ಸಾಯಿ ಸ್ನೇಹ ಸಂಗಮ- 2026’ ಎಂದು ಕಾರ್ಯಕ್ರಮ ಆಯೋಜಿಸಿ, ತಮಗೆ ಕಲಿಸಿದ ಜಿ.ಎಸ್.ಸುಪ್ರಭಾ, ಸಾವಿತ್ರಮ್ಮ, ಪಿ.ಸರೋಜಮ್ಮ, ಮಹಾದೇವಮ್ಮ, ಕಮಲಮ್ಮ ಹಾಗೂ ಶಿವಮೂರ್ತಿ ಅವರನ್ನು ಗೌರವಿಸಿದರು. ಈ ಮೂಲಕ ಹಳೆಯ ವಿದ್ಯಾರ್ಥಿಗಳ ಸಮಾಗಮವೂ ಆಯಿತು. ಸಹಪಾಠಿಗಳೆಲ್ಲರೂ ವಿದ್ಯಾರ್ಥಿ ಜೀವನದ ದಿನಗಳನ್ನು ನೆನೆದು ಸಂಭ್ರಮಿಸಿದರು.

ಇಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ, 80 ವರ್ಷದ ಜಿ.ಎಸ್.ಸುಪ್ರಭಾ, ‘ಕಲಿಸಿದವರನ್ನು ಮರೆಯದೆ ಒಂದೆಡೆ ಸೇರಿ ಗೌರವ ಸಲ್ಲಿಸಿದ್ದು ಮೆಚ್ಚುಗೆ ಆಯಿತು’ ಎಂದರು.

ನಿವೃತ್ತ ಶಿಕ್ಷಕಿ ಮಹಾದೇವಮ್ಮ, ‘ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸನ್ಮಾನಿತರಾದ ಸರೋಜ ಮ್ಮ, ದೈಹಿಕ ಶಿಕ್ಷಣ ಶಿಕ್ಷಕ ಶಿವಮೂರ್ತಿ, ಹಳೆಯ ವಿದ್ಯಾರ್ಥಿ, ಗಣಿತ ಶಿಕ್ಷಕ ವೈದ್ಯನಾಥ್ ಶಿಕ್ಷಕರ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸತ್ಯಸಾಯಿ ಬಾಬಾ ಪಿಯು ಕಾಲೇಜಿನ ಪ್ರಾಂಶುಪಾಲ ತ್ರಿಮೂರ್ತಿ ಮಾತನಾಡಿ, ‘2032ರಲ್ಲಿ ಈ ಶಾಲೆಯ ಅಮೃತ ಮಹೋತ್ಸವ ನಡೆಯಲಿದೆ. ಇದನ್ನು ಸ್ಮರಣೀಯವಾಗಿಸಲು ಹಳೆಯ ವಿದ್ಯಾರ್ಥಿಗಳ ಸಹಕಾರ ಅಗತ್ಯ’ ಎಂದರು.

ಶಾಲೆಯ ಸಿಬ್ಬಂದಿ ಅಪ್ಪಯ್ಯ ಇದ್ದರು. ಹಳೆಯ ವಿದ್ಯಾರ್ಥಿಗಳಾದ ಆರ್.ಪ್ರಶಾಂತ್, ನಾಗೇಶ್ ಎಂ., ಭವಾನಿ ಸಾಗರ, ಸುನೀಲಕುಮಾರ್, ಚೇತನಾ ಹಾಗೂ ದೀಪಾ ನೇತೃತ್ವ ವಹಿಸಿದ್ದರು. ಕಿರಣ ಕೆ.ವಿ. ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-39-1903550372

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.