ಮೈಸೂರು: ‘ರಂಗಭೂಮಿ ಇಂದು ಛಿದ್ರವಾಗುತ್ತಿದ್ದು, ಬಹುತ್ವವನ್ನು ಹೊಡೆದುಹಾಕುತ್ತಿದ್ದೇವೆ’ ಎಂದು ರಂಗ ನಿರ್ದೇಶಕ ಅಮಿತ್ ರೆಡ್ಡಿ ವಿಷಾದ ವ್ಯಕ್ತಪಡಿಸಿದರು.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನಲ್ ಥಿಯೇಟರ್, ಮೈಸೂರು ಇಂಗ್ಲಿಷ್ ಥಿಯೇಟರ್ ಫೋರಂ ಸಹಯೋಗದಲ್ಲಿ ಇಲ್ಲಿನ ಹಾರ್ಡ್ವಿಕ್ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಲಿತರು, ಮುಸ್ಲಿಮರು, ಮಹಿಳೆಯರ ಹೋರಾಟ, ಪರಿಸರ ಸಂರಕ್ಷಣೆ ಕುರಿತ ಹೋರಾಟಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ರಂಗಭೂಮಿ ಛಿದ್ರವಾಗಿದ್ದು, ಭಾಗಗಳನ್ನಾಗಿ ಮಾಡಿಕೊಂಡಿದ್ದೇವೆ. ರಂಗಭೂಮಿಯ ಬಹುತ್ವವನ್ನು ನಾಶಪಡಿಸುತ್ತಿದ್ದೇವೆ’ ಎಂದರು.

‘ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಿದ್ದ, ರಚನಾತ್ಮಕವಾಗಬೇಕಿದ್ದ ರಂಗಭೂಮಿ, ಇಂದು ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ. ರಂಗಭೂಮಿಯ ಛಿದ್ರವಾಗಿರುವುದನ್ನು ಗಮನಿಸಿದ ಇಂದಿನ ಯುವಕರು ಬೆನ್ನು ಹಾಕಿ ಓಡಿಹೋಗುತ್ತಿದ್ದಾರೆ. ನಮಗೆ ಅನುಕೂಲವಾದ ಕಾರಣಗಳನ್ನು ಯುವಪೀಳಿಗೆಯ ಮೇಲೆ ಆಪಾದಿಸಿ ಅವರ ಆಲೋಚನೆಗಳಿಗೆ ಬೇಕಾದ ವಾತಾವರಣವನ್ನು ನಿರ್ಮಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರಗಳ ವಿರುದ್ಧ ಹೋರಾಡುವುದು ಕಲಾವಿದನ ಜವಾಬ್ದಾರಿಯಾದರೂ, ಸಣ್ಣ ಸಣ್ಣ ರೀತಿಯಲ್ಲಿ ವ್ಯವಸ್ಥೆಯನ್ನುಬದಲಾಯಿಸುವುದುಹೋರಾಟವೇ, ನಾನು ಆ ಪ್ರಯತ್ನ ಮಾಡುತ್ತಿದ್ದೇನೆ’ ಎಂದರು.

ಪ್ರೊ. ಕೃಷ್ಣಪ್ರಸಾದ್ ಅವರು ನಟ ವಿಲೆಮ್ ಡಫೋ ಕುರಿತು ಉಪನ್ಯಾಸ ನೀಡಿದರು. ಕಿಟ್ಟಿ ಮಂದಣ್ಣ ವಿಶ್ವ ರಂಗಭೂಮಿ ಸಂದೇಶವನ್ನು ವಾಚಿಸಿದರು. ಶಶಿಧರ ಡೋಂಗ್ರೆ ಅವರ ಸಂಯೋಜನೆಯಲ್ಲಿ ‘ಲಂಕಾ ಲಕ್ಷ್ಮಿ’ ನಾಟಕವನ್ನು ಓದಲಾಯಿತು. ನಿಮಾ ಮಂಜ್ರೆಕರ್ ಅವರು ಇಂಗ್ಲಿಷ್ ನಾಟಕ ವಾಚಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-39-990763766

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.