ಮೈಸೂರು: ‘ಥಿಂಕ್ ಗ್ಯಾಸ್’ ನಗರದಲ್ಲಿ ಮುಂದಿನ ಆರು ತಿಂಗಳ ಅವಧಿಯಲ್ಲಿ 10 ಸಾವಿರ ಮನೆಗಳಿಗೆ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್ಜಿ) ಸಂಪರ್ಕ ನೀಡುವ ಗುರಿ ಹೊಂದಿದೆ’ ಎಂದು ಕಂಪನಿಯ ಮೈಸೂರು ಪ್ರಾದೇಶಿಕ ವಿಭಾಗದ ಮುಖ್ಯಸ್ಥ ಸಂಜಿತ್ ಸುಮನ್ ತಿಳಿಸಿದರು.

‘ಕಂಪನಿಯು ಮೈಸೂರು ಹಾಗೂ ಸುತ್ತಮುತ್ತ ಒಟ್ಟು 242 ಕಿ.ಮೀ. ಉದ್ದದ ಪೈಪ್ಲೈನ್ ನಿರ್ಮಾಣ ಮಾಡುತ್ತಿದೆ. ಬಿಡದಿಯಿಂದ ಸುಮಾರು 160 ಕಿ.ಮೀ. ಉದ್ದದ ಕೊಳವೆ ಮಾರ್ಗದ ಮೂಲಕ ಮೈಸೂರಿಗೆ ಪಿಎನ್ಜಿ ಅನಿಲ ಪೂರೈಕೆ ಆಗುತ್ತಿದೆ. ಹೆಬ್ಬಾಳ, ಹೂಟಗಳ್ಳಿ, ರಾಮಕೃಷ್ಣನಗರ, ಕುವೆಂಪುನಗರ, ವಿಜಯನಗರ, ದಟ್ಟಗಳ್ಳಿ, ಕಡಕೊಳ ಮತ್ತು ನಂಜನಗೂಡು ಪ್ರದೇಶಗಳಲ್ಲಿ ಸೇವೆ ಲಭ್ಯವಿದ್ದು, ಈ ಪ್ರದೇಶಗಳಲ್ಲಿನ ಇತರ ಗ್ರಾಹಕರು ಹೊಸ ಸಂಪರ್ಕ ಪಡೆಯಬಹುದಾಗಿದೆ’ ಎಂದು ಬುಧವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ 5400ಕ್ಕೂ ಹೆಚ್ಚು ಮನೆಗಳಿಗೆ ಈಗಾಗಲೇ ಪಿಎನ್ಜಿ ಸಂಪರ್ಕ ಕಲ್ಪಿಸಿದ್ದೇವೆ. ಇದಲ್ಲದೆ ಮೈಸೂರಿನ 14 ಕೈಗಾರಿಕೆ, 22 ವಾಣಿಜ್ಯ ಕಟ್ಟಡಗಳಿಗೂ ಸಂಪರ್ಕ ನೀಡಲಾಗಿದೆ. 43 ಸಾವಿರದಷ್ಟು ಅರ್ಜಿಗಳು ಬಂದಿವೆ. ಹೊಸ ಗ್ರಾಹಕರು ₹6 ಸಾವಿರ ಠೇವಣಿ ಹಾಗೂ ₹ 354 ಸ್ಥಾಪನಾ ಶುಲ್ಕ ಪಾವತಿಸಿ ಹೊಸ ಸಂಪರ್ಕ ಪಡೆಯಬಹುದಾಗಿದೆ. ಕಂತುಗಳ ಮೂಲಕವೂ ಠೇವಣಿ ಪಾವತಿಗೆ ಅವಕಾಶವಿದೆ’ ಎಂದರು.

‘ಸದ್ಯ ಪ್ರತಿ ಕ್ಯುಬಿಕ್ ಮೀಟರ್ ಪಿಎನ್ಜಿಗೆ ₹49 ಶುಲ್ಕ ವಿಧಿಸಲಾಗುತ್ತಿದೆ. ಎಲ್ಪಿಜಿ ಸಿಲಿಂಡರ್ಗಳಿಗೆ ಹೋಲಿಸಿದರೆ ಪಿಎನ್ಜಿ ಬಳಕೆಯಿಂದ ಗ್ರಾಹಕರು ಶೇ 10ರಷ್ಟು ಹಣ ಉಳಿಸಬಹುದಾಗಿದೆ. ಸದ್ಯ ಪೋಸ್ಟ್ಪೇಯ್ಡ್ ಮಾದರಿಯಲ್ಲಿ ಸೇವೆ ಲಭ್ಯವಿದ್ದು, ಪ್ರಿಪೇಯ್ಡ್ ಮೀಟರ್ಗಳ ಅಳವಡಿಕೆಗೂ ಚಿಂತನೆ ನಡೆದಿದೆ’ ಎಂದರು.

‘ಮೈಸೂರಿನಲ್ಲಿ ಒಟ್ಟು 3 ಲಕ್ಷದಷ್ಟು ಮನೆಗಳಿವೆ. ಇನ್ನೂ 250 ಕಿ.ಮೀ. ಉದ್ದದ ಜಾಲ ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಎಲ್ಲ ಮನೆಗಳಿಗೂ ಸಂಪರ್ಕ ನೀಡಬಹುದಾಗಿದೆ’ ಎಂದರು. ‘ಸದ್ಯದ ಜಾಗತಿಕ ಯುದ್ಧ ಭೀತಿಯು ಪಿಎನ್ಜಿ ಪೂರೈಕೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಎಲ್ಲಿಯೂ ಗ್ರಾಹಕರಿಗೆ ತೊಂದರೆ ಆಗಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕಂಪನಿಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ನಿತಿನ್, ಕರ್ನಾಟಕ ವಿಭಾಗದ ಮುಖ್ಯಸ್ಥ ಬ್ರಿಜೇಶ್ ಸಿಂಗ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಭಾಕರ್ ಶಿಂಧೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-39-1920188432

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.