ಮೈಸೂರು: ಇಲ್ಲಿನ ತಿಲಕ್ನಗರದಲ್ಲಿ ಶಿಥಿಲಾವಸ್ಥೆಗೆ ತಲುಪಿ, ಆಕಸ್ಮಿಕ ಬೆಂಕಿ ಅವಘಡದಲ್ಲಿ ಹಾನಿಗೊಂಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಈಗ ಸ್ಥಳೀಯರು ಮತ್ತು ಹಳೇ ವಿದ್ಯಾರ್ಥಿಗಳ ನೆರವಿನಿಂದ ‘ಅಭಿವೃದ್ಧಿಯ ಬೆಳಕು’ ಕಂಡಿದೆ.

ಉತ್ತರ ಶೈಕ್ಷಣಿಕ ವಲಯದಲ್ಲಿರುವ ಶತಮಾನ ಕಂಡಿರುವ ಈ ಶಾಲೆಯ ಕಟ್ಟಡಕ್ಕಾಗಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಹೊಸ ರೂಪ ನೀಡಲಾಗಿದೆ. ಕಟ್ಟಡ ಸುಣ್ಣ–ಬಣ್ಣದಿಂದ ಕಂಗೊಳಿಸುತ್ತಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ತರಗತಿಗಳು ಆರಂಭವಾಗಲಿವೆ.

ಅಭಿವೃದ್ಧಿಗಾಗಿ ರಚನೆಯಾದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿತ ರಕ್ಷಣಾ ಸಮಿತಿ’ಯಲ್ಲಿರುವ 22 ಮಂದಿ ಸ್ವತಃ ದೇಣಿಗೆ ನೀಡಿ, ದಾನಿಗಳಿಂದಲೂ ಸಂಗ್ರಹಿಸಿದ್ದಾರೆ. ನಗರಪಾಲಿಕೆ ಮಾಜಿ ಸದಸ್ಯೀಹ, ಬಿಇಒ ಎಸ್.ರೇವಣ್ಣ ಅವರೂ ಆರ್ಥಿಕ ಸಹಾಯ ಮಾಡಿದವರಲ್ಲಿ ಸೇರಿದ್ದಾರೆ.

60 ಮಕ್ಕಳಿದ್ದರು:

ಮೈಸೂರು ಅರಸು ಸಂಸ್ಥಾನದವರು ಪ್ರಾರಂಭಿಸಿದ್ದ ಶಾಲೆಯನ್ನು ಸ್ವಾತಂತ್ರ್ಯದ ನಂತರ ಬಾಲಕಿಯರ ಶಾಲೆಯಾಗಿ ಮಾಡಲಾಗಿತ್ತು. ಸದ್ಯ ಬಾಲಕರು ಹಾಗೂ ಬಾಲಕಿಯರಿಬ್ಬರಿಗೂ ಪ್ರವೇಶಾವಕಾಶವಿದೆ.

ಶಾಲೆಯನ್ನು 2019ರಲ್ಲಿ ಸಮೀಪದ ಶ್ರವಣದೋಷವುಳ್ಳ ಮಕ್ಕಳ ಶಾಲೆಗೆ ಸ್ಥಳಾಂತರಿಸಲಾಗಿತ್ತು. 60 ಮಕ್ಕಳು ಅಲ್ಲಿಗೆ ಹೋಗಿದ್ದರು. ಆಗಿನ ಬಿಇಒ, ಅಲ್ಲಿ 5 ಕೊಠಡಿಗಳನ್ನು ಕೊಡಿಸಿದ್ದರು. ಕಟ್ಟಡ 2021ರಲ್ಲಿ ಆಕಸ್ಮಿಕ ಬೆಂಕಿ ಅವಘಡಕ್ಕೂ ತುತ್ತಾಗಿ ಚಾವಣಿ, ಗೋಡೆಗಳಿಗೆ ಹಾನಿಯಾಗಿತ್ತು.

ಏಪ್ರಿಲ್ನಿಂದ ನವೀಕರಣ ಕಾರ್ಯ ನಡೆದಿದ್ದು, ಐದು ಕೊಠಡಿ ಸಜ್ಜಾಗಿದೆ. ಬೇಲಿ ಹಾಕಿ, ಗೇಟ್ ದುರಸ್ತಿಪಡಿಸಿ, ಅಡುಗೆ ಕೋಣೆಯನ್ನೂ ನಿರ್ಮಿಸಲಾಗಿದೆ. ಶೌಚಾಲಯದ ನಿರ್ಮಾಣ ನಡೆಯುತ್ತಿದೆ.

ಸಹಕಾರ–ಔದಾರ್ಯ:

‘ಸ್ಥಳೀಯರು ಉದಾರವಾಗಿ ಸಹಕರಿಸಿದರು. ಕಬ್ಬಿನ, ಸಿಮೆಂಟ್ ಕೊಡಿಸಿದರು, ನವೀಕರಣಕ್ಕಾಗಿ ₹ 13ಲಕ್ಷದಿಂದ ₹ 14 ಲಕ್ಷ ವೆಚ್ಚವಾಗಿದೆ’ ಎಂದು ಬಿಇಒ ಎಸ್.ರೇವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಗೆ ಸದ್ಯ 62 ಮಕ್ಕಳು ಪ್ರವೇಶ ಪಡೆದಿದ್ದಾರೆ. 1ರಿಂದ 7ನೇ ತರಗತಿಯವರೆಗೆ ಇದೆ. ಎಲ್ಕೆಜಿ, ಯುಕೆಜಿ ಶಿಕ್ಷಣ ಪ್ರಾರಂಭಿಸಿದ್ದೇವೆ’ ಎಂದು ಮುಖ್ಯಶಿಕ್ಷಕಿ ಡಿ.ಮಂಜುಳಾಕುಮಾರಿ ತಿಳಿಸಿದರು.

ಈ ಸಾಲಿನಿಂದ ಅಲ್ಲಿ ತರಗತಿಗಳು ಶುರುವಾಗಲಿವೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಜಾಸ್ತಿ ಇರುವ ಪ್ರದೇಶವದು. ಪ್ರವೇಶಾತಿ ಹೆಚ್ಚುವ ನಿರೀಕ್ಷೆ ಇದೆ
ಎಸ್. ರೇವಣ್ಣ ಬಿಇಒ ಉತ್ತರ ವಲಯ ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.