ಮೈಸೂರು: ಅಶೋಕರಸ್ತೆಯ ಮಿಲಾದ್ ಭಾಗ್ನಲ್ಲಿ ಹಜ್ರತ್ ಟಿಪ್ಪು ಸುಲ್ತಾನ್ ಷಹೀದ್ ವೆಲ್ಫೇರ್ ಮತ್ತು ಉರುಸ್ ಸಮಿತಿಯಿಂದ ಟಿಪ್ಪು ಸುಲ್ತಾನ್ ಅವರ 234ನೇ ಗಂಧದ ಉರುಸ್ ಪ್ರಯುಕ್ತ ಶನಿವಾರ ಸಂದಲ್ (ಗಂಧ) ಮೆರವಣಿಗೆ ನಡೆಯಿತು.

ಮೀನಾ ಬಜಾರ್ನ ಟಿಪ್ಪು ಹಾಲ್ನಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಆ ಬಳಿಕ ಪವಿತ್ರ ಗಂಧವನ್ನು ಮಿಲಾದ್ ಬಾಗ್ಗೆ ತರಲಾಯಿತು. ಗೌರವ ಸಮರ್ಪಣೆ ಬಳಿಕ ಶಾಸಕ ತನ್ವೀರ್ ಸೇಠ್ ಗಂಧವನ್ನು ಹೊತ್ತು ಹೆಜ್ಜೆ ಹಾಕಿದರು.

ದಫ್ ಕಲಾವಿದರು, ಸೂಫಿ ಸಂತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಸಾರೋಟಿನಲ್ಲಿ ತನ್ವೀರ್ ಸೇಠ್ ಗಂಧವನ್ನು ತಲೆಯ ಮೇಲೆ ಹೊತ್ತು ಅಶೋಕ ರಸ್ತೆ, ಸೇಂಟ್ ಫಿಲೋಮಿನಾ ಚರ್ಚ್ ವೃತ್ತ, ಫೌಂಟೇನ್ ವೃತ್ತ, ಬಡಾಮಕಾನ್, ಟಿಪ್ಪು ವೃತ್ತದವರೆಗೆ ಮೆರವಣಿಗೆಯಲ್ಲಿ ಸಾಗಿದರು. ಅಲ್ಲಿಂದ ಪವಿತ್ರ ಗಂಧವನ್ನು ಶ್ರೀರಂಗಪಟ್ಟಣದ ದರಿಯಾ ದೌಲತ್ ಭಾಗ್ಗೆ ಕೊಂಡೊಯ್ಯಲಾಯಿತು.

ವೇದಿಕೆ ಕಾರ್ಯಕ್ರಮದಲ್ಲಿ ಮೊಹಮ್ಮದ್ ಶಂಶುಲ್ ಹುದಾ ಸಮದಿ ಮಾತನಾಡಿ, ‘ಮೈಸೂರು ಸಂಸ್ಥಾನದಲ್ಲಿ ಟಿಪ್ಪು ಮಹಾನ್ ನಾಯಕನಾಗಿದ್ದನು. ಆ ಕಾಲದ ಶ್ರೇಷ್ಠ ಇಸ್ಲಾಮಿಕ್ ಪಂಡಿತನಾಗಿದ್ದು, ದೇವರ ಬಗೆಗೆ ಅಪಾರ ಭಕ್ತಿ ಹೊಂದಿದ್ದನು. ಇಸ್ಲಾಂನ ಧಾರ್ಮಿಕ ಆಚರಣೆಗಳನ್ನು ತಪ್ಪದೆ ನಡೆಸುತ್ತಿದ್ದ’ ಎಂದು ಹೇಳಿದರು.

‘ಟಿಪ್ಪು ಸುಲ್ತಾನ್ ಶಹೀದ್ ಅವರ ನಿತ್ಯಕ್ರಮವೇ ಇಸ್ಲಾಂ ಪಾರಾಯಣವಾಗಿತ್ತು. ಪ್ರತಿದಿನ ಫಜರ್ ನವಾಜಿನ ನಂತರ ಒಂದು ಗಂಟೆ ಕಾಲ ಪವಿತ್ರ ಖುರಾನ್ ಪಠಣ ಮಾಡುತ್ತಿದ್ದರು. ಹಿಂದೂಸ್ಥಾನದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ರಾಜಿ ಮಾಡಿಕೊಳ್ಳದೆ ಹೋರಾಡಿದ ಟಿಪ್ಪು ಸುಲ್ತಾನ್ ನಮಗೆ ಆದರ್ಶವಾಗಬೇಕು’ ಎಂದರು.

‘ಯುದ್ಧ ಭೂಮಿಯಲ್ಲಿ ಅವರು ಎಲ್ಲರಿಗೂ ಮಣ್ಣು ಮುಕ್ಕಿಸುತ್ತಿದ್ದರು. ಬ್ರಿಟಿಷರಿಗೆ ಟಿಪ್ಪು ಸುಲ್ತಾನ್ ಪರಾಕ್ರಮದ ಬಗ್ಗೆ ವಿಪರೀತ ಭಯವಿತ್ತು. ಅವರ ಸಾಹಸಗಳ ಬಗ್ಗೆ ಹೊರ ಪ್ರಪಂಚ ಏನೇ ಕಥೆಗಳನ್ನು ಹೇಳಬಹುದು. ಆದರೆ ಅವರು ನಮ್ಮ ಸಮುದಾಯದ ಹೆಮ್ಮೆ. ಟಿಪ್ಪು ಒಬ್ಬ ರಾಜನಾಗಿ ಅಷ್ಟೇ ಅಲ್ಲ, ಒಬ್ಬ ಶ್ರೇಷ್ಠ ಧರ್ಮಪಂಡಿತನಾಗಿಯೂ ಮಾದರಿ ಕೆಲಸ ಮಾಡಿದ್ದನು. ಈ ಕಾರಣದಿಂದಾಗಿಯೇ ಎರಡು ಶತಮಾನ ಕಳೆದರೂ ಟಿಪ್ಪು ಸುಲ್ತಾನನ ಹೆಸರು ಇನ್ನೂ ಜೀವಂತವಾಗಿದೆ’ ಎಂದು ತಿಳಿಸಿದರು.

ಬೆಂಗಳೂರಿನ ಖಾನ್ ಖಾ-ಇ-ವಾರ್ಸಿಯ ಸಂಸ್ಥಾಪಕ ಅಧ್ಯಕ್ಷ ಸೂಫಿ ಆರಿಫ್ ಹುಸೇನ್ ವಾರ್ಸಿ, ಕಾಂಗ್ರೆಸ್ ಮುಖಂಡ ಸೈಯದ್ ರೆಹಮತುಲ್ಲಾ, ಇಕ್ಬಾಲ್ ಪಾಷ, ಸೈಯದ್ ಹನೀಫ್, ಮೊಹಮ್ಮದ್ ಖಲೀಲ್-ಉರ್-ರೆಹಮಾನ್, ಮೊಹಮ್ಮದ್ ಅಯೂಬ್, ಮಜೀದ್ ತೌಫಿಕ್ ಖಾನ್, ಮೊಹಮ್ಮದ್ ಇನಾಯತ್-ಉರ್- ರೆಹವಾನ್ ರಜ್ಜಿ, ಶಾಹಿ ಇಮಾಮ್, ಮಹಮ್ಮದ್ ಸುಲ್ತಾನ ಖಾದ್ರಿ, ಮಜೀದ್ ಇಮಾಮ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-39-1152361422

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.