ಸಂತೇಮರಹಳ್ಳಿ: ಮೈಸೂರು ಹಾಗೂ ತಿ.ನರಸೀಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕಳೆದ ಒಂದೂವರೆ ವರ್ಷದಿಂದ ರಸ್ತೆ ಹದಗೆಟ್ಟಿದ್ದು, ದುರಸ್ತಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸಂತೇಮರಹಳ್ಳಿಯಿಂದ ಮೈಸೂರು ಹಾಗೂ ತಿ.ನರಸೀಪುರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಬಾಲಕಿಯರ ವಸತಿ ನಿಲಯದಿಂದ ಬಸವಟ್ಟಿ ಗೇಟ್ ತಲುಪುವ ಒಂದು ಕಿ.ಮೀ ವರೆಗೆ ಹದಗೆಟ್ಟಿದೆ. ರಸ್ತೆಯ ಉದ್ದಗಲಕ್ಕೂ ಹೊಂಡಗಳು ಬಿದ್ದಿವೆ. ಅಲ್ಲಲ್ಲಿ ಕೊರಕಲು ಉಂಟಾಗಿವೆ. ರಸ್ತೆಗೆ ಹಿಂದೆ ಹಾಕಿದ್ದ ಜಲ್ಲಿ ಕಲ್ಲುಗಳು ಮೇಲೆ ಬರುತ್ತಿವೆ. ಡಾಂಬರು ಸಂಪೂರ್ಣ ಹಾಳಾಗಿದೆ. ಈ ಭಾಗಕ್ಕೆ ವಾಹನಗಳು ಬಂದಾಗ ತುಂಬಾ ನಿಧಾನವಾಗಿ ಸಂಚರಿಸಬೇಕಾಗಿದೆ.

‘ರಸ್ತೆ ಅವ್ಯವಸ್ಥೆಯಿಂದ ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿ ಪ್ರಾಣಾಪಾಯಗಳಾಗಿವೆ. ಮಳೆಗಾಲ ಆಗಿರುವುದರಿಂದ ರಸ್ತೆಯಲ್ಲಿ ನೀರು ನಿಂತು ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ, ಶೀಘ್ರ ದುರಸ್ತಿಗೆ ಮನವಿ ಮಾಡಿದರೂ ಯಾರೂ ಗಮನ ಹರಿಸಿಲ್ಲ’ ಎಂದು ಮೂಗೂರು ಮಂಜುನಾಥ್ ಹಾಗೂ ರಾಜಶೇಖರ್ ಆರೋಪಿಸುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-37-807479485

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.