ಮೈಸೂರು: ಬೇಸಿಗೆ ರಜೆ ಕಾರಣದಿಂದ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, ನೈರುತ್ಯ ರೈಲ್ವೆಯು ಮೈಸೂರು–ಜಲ್ಪೈಗುರಿ ಜಂಕ್ಷನ್ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಂಡಿದೆ.

ರೈಲು ಸಂಖ್ಯೆ 06251 ಮೈಸೂರು – ಜಲ್ಪೈಗುರಿ ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ಮೈಸೂರಿನಿಂದ ಶುಕ್ರವಾರದಂದು (ಏ.17 ಮತ್ತು 24) ಸಂಜೆ 4.40ಕ್ಕೆ ಹೊರಟು, ಭಾನುವಾರ ಬೆಳಿಗ್ಗೆ 5.30ಕ್ಕೆ ಜಲ್ಪೈಗುರಿ ಜಂಕ್ಷನ್ ತಲುಪಲಿದೆ.

ವಾಪಸಾಗುವಾಗ, ರೈಲು ಸಂಖ್ಯೆ 06252 ಜಲ್ಪೈಗುರಿ ಜಂಕ್ಷನ್ – ಮೈಸೂರು ವಿಶೇಷ ರೈಲು ಅಲ್ಲಿಂದ ಸೋಮವಾರದಂದು (ಏ.20 ಮತ್ತು 27) ಸಂಜೆ 4..45ಕ್ಕೆ ಹೊರಟು, ಬುಧವಾರ ಬೆಳಿಗ್ಗೆ 4ಕ್ಕೆ ಮೈಸೂರಿಗೆ ಆಗಮಿಸಲಿದೆ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.

ಈ ರೈಲು ಮಂಡ್ಯ, ಮದ್ದೂರು, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಬಂಗಾರಪೇಟೆ, ಜೋಲಾರಪೇಟೆ, ಕಟ್ಪಾಡಿ, ರೇಣಿಗುಂಟಾ, ಗುಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ಸಿಂಹಾಚಲಂ ಉತ್ತರ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರಸ್ತೆ, ಪಾಲಾಸಾ, ಬ್ರಹ್ಮಪುರ, ಬಾಲುಗಾಂ, ಖುರ್ಡಾ ರಸ್ತೆ, ಭುವನೇಶ್ವರ, ಕಟಕ್, ಜಾಜ್ಪುರ ಕೆ ರಸ್ತೆ, ಭದ್ರಕ್, ಬಾಲಸೋರ್, ಖರಗ್ಪುರ್, ಅಂಡುಲ್, ಡಾಂಕುಣಿ, ಬರ್ಧಮಾನ, ಬಾಲ್ಫೂರ್ ಎಸ್ ನಿಕ್ಟಿನ್, ರಾಮ್ಪುರ ಹಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಕಿಶನ್ಗಂಜ್ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆ ಹೊಂದಿದೆ.

ಈ ರೈಲು ಒಟ್ಟು 20 ಬೋಗಿಗಳನ್ನು ಹೊಂದಿದ್ದು, ಅವುಗಳಲ್ಲಿ 1 ಫಸ್ಟ್ ಎಸಿ ಟು ಟಯರ್, 2 ಎಸಿ ತ್ರಿ ಟಯರ್, 10 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ಕ್ಲಾಸ್, ಮತ್ತು 2 ಎಸ್ಎಲ್ಆರ್/ಡಿ ಒಳಗೊಂಡಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.