ಮೈಸೂರು: ‘ತಂಬಾಕು ಬಳಕೆಯು ದೇಶದ ಅತ್ಯಂತ ಗಂಭೀರ ಸಾರ್ವಜನಿಕ ಆರೋಗ್ಯ ಸವಾಲು’ ಎಂದು ಹೆಲ್ತ್ ಕೇರ್ ಗ್ಲೋಬಲ್ ಸಂಸ್ಥೆ ಹಾಗೂ ಭಾರತ್ ಕ್ಯಾನ್ಸರ್ ಆಸ್ಪತ್ರೆ(ಬಿಎಚ್ಐಓ) ಸ್ಥಾಪಕ ಅಧ್ಯಕ್ಷ, ಕ್ಯಾನ್ಸರ್ ತಜ್ಞ ಡಾ.ಬಿ.ಎಸ್.ಅಜಯ್ ಕುಮಾರ್ ಹೇಳಿದರು.

ಆಸ್ಪತ್ರೆಯಲ್ಲಿ ಈಚೆಗೆ ಆಯೋಜಿಸಿದ್ದ ‘ಧೂಮಪಾನ ಮುಕ್ತ ಮೈಸೂರು, ಆರೋಗ್ಯವಂತ ಮೈಸೂರು’ ಎಂಬ ವಿಷಯದ ಗೋಷ್ಠಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸಾವಿರ ದಿನಗಳಲ್ಲಿ ತಂಬಾಕುಮುಕ್ತ ಮೈಸೂರು ನಿರ್ಮಾಣದ ಗುರಿ ಯಶಸ್ಸಿಗೆ ನಿಯಮಗಳ ಕಠಿಣ ಜಾರಿ, ಜನರ ಸಹಭಾಗಿತ್ವವೇ ಕೀಲಿಕೈ’ ಎಂದರು.

ಸಿಎಫ್ಟಿಆರ್ಐ ಮಾಜಿ ನಿರ್ದೇಶಕ ವಿ.ಪ್ರಕಾಶ್, ರೈತ ಮುಖಂಡರಾದ ರಾಮೇಗೌಡ, ಮಂಜು ಕಿರಣ್, ಕ್ಯಾನ್ಸರ್ನಿಂದ ಚೇತರಿಸಿಕೊಂಡ ಮಹದೇವ್, ನಾಗರಾಜ್, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಎಸ್.ಗೋಪಿನಾಥ್, ಮಾಜಿ ಉಪಮೇಯರ್ ಪುಷ್ಪವಲ್ಲಿ, ಪತ್ರಕರ್ತರಾದ ಲೈಕ್ ಎ.ಖಾನ್, ರಾಜೀವ ಸಿ.ಜೆ. ಅಭಿಪ್ರಾಯ ಹಂಚಿಕೊಂಡರು.

ಬಿಎಚ್ಐಒ ಸಿಒಒ ಗೌತಮ್ ಧಮೇರ್ಲಾ, ಅಂತರ್ಧ್ವನಿ ಸಂಸ್ಥೆಯ ರಾಹುಲ್ ನಂದನ್, ಸೀತಾಲಕ್ಷ್ಮಿ ಎಸ್., ಐಎಚ್ಡಿಯುಎ ಕಾರ್ಯಕ್ರಮ ಮುಖ್ಯಸ್ಥ ಎನ್. ಮಧು, ವಿಕಿರಣ ಕ್ಯಾನ್ಸರ್ ತಜ್ಞ ಡಾ.ವಿನಯ್ ಕುಮಾರ್ ಮುತ್ತಗಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-39-284602252

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.