ಮೈಸೂರು: ‘ರಾಜ್ಯ ಸಾರಿಗೆ ಸಂಸ್ಥೆ ನೌಕರರ ಮೂಲ ವೇತನದಲ್ಲಿ 2024ಕ್ಕೆ ಅನ್ವಯಿಸಿ ಶೇ 25ರಷ್ಟು ಹೆಚ್ಚಳ ಮಾಡುವಂತೆ ಒತ್ತಾಯಿಸಿದ್ದರೂ ಏಕಪಕ್ಷೀಯವಾಗಿ 2025ಕ್ಕೆ ಅನ್ವಯಿಸಿ ಶೇ 12.5ರಷ್ಟು ಏರಿಸಿರುವುದು ಸರಿಯಲ್ಲ. ಇದನ್ನು ಖಂಡಿಸಿ ಮೇ 20ರಿಂದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು’ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆ ಜಂಟಿ ಕ್ರಿಯಾ ಸಮಿತಿ ಸಂಚಾ ಲಕ ಬಿ.ಜಯದೇವರಾಜೇ ಅರಸು ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾಗೆಯೇ 38 ತಿಂಗಳ ಅರಿಯರ್ಸ್ನಲ್ಲೂ 12 ತಿಂಗಳ ಹಣವನ್ನು ಬಾಕಿ ಉಳಿಸಲಾಗಿದೆ. ಈ ಎಲ್ಲವನ್ನೂ ಒಂದೇ ಕಂತಿನಲ್ಲಿ ಬಿಡುಗಡೆ ಮಾಡಬೇಕು. ಸರ್ಕಾರವು ಇತರ ಇಲಾಖೆಯ ಸರ್ಕಾರಿ ನೌಕರರಿಗೆ 4 ವರ್ಷ ಮೊದಲೇ ಏಳನೇ ವೇತನ ಆಯೋಗ ನೇಮಿಸಿ ಶೇ 27.5ರಷ್ಟು ವೇತನ ಹೆಚ್ಚಿಸಿದ್ದರೂ ಸಾರಿಗೆ ನೌಕರರ ವಿಷಯದಲ್ಲಿ ತಾರತಮ್ಯ ತೋರಿದೆ’ ಎಂದು ದೂರಿದರು.

‘ಅಂದು ರಾಜ್ಯದ ವಿವಿಧ ಸಾರಿಗೆ ನಿಗಮಗಳಲ್ಲಿರುವ ಸುಮಾರು 1.15 ಲಕ್ಷ ನೌಕರರು ಮನೆಯಲ್ಲಿಯೇ ಕುಳಿತು ಮುಷ್ಕರದಲ್ಲಿ ಪಾಲ್ಗೊಳ್ಳುವರು. ಮೈಸೂರು ವಿಭಾಗದಲ್ಲಿನ ಸುಮಾರು 4 ಸಾವಿರ ಮಂದಿ ನೌಕರರು ಭಾಗಿಯಾಗಲಿದ್ದಾರೆ. ಇದಕ್ಕೂ ಮುನ್ನವೇ ಸರ್ಕಾರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸದಿದ್ದರೆ ಅಂದಿನಿಂದ ಸಾರಿಗೆ ಸಂಸ್ಥೆ ಬಸ್ಗಳು ರಸ್ತೆಗಿಳಿಯವುದಿಲ್ಲ’ ಎಂದು ಎಚ್ಚರಿಸಿದರು.

ಮುಖಂಡ ಡಿ.ಎ.ವಿಜಯಭಾಸ್ಕರ್, ಜ್ಯೋತಿ ಅನಂತಸುಬ್ಬರಾವ್, ಮಲ್ಲಯ್ಯ, ವಿಜಯಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-39-1405571991

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.