ಮೈಸೂರು: ಪರಿಸರಕ್ಕಾಗಿ ನಾವು– ಪರಿಸರ ಕಾರ್ಯಕರ್ತರ ರಾಜ್ಯ ಸಂಘಟನೆಯಿಂದ ಮೇ 10ರಂದು ಮರಗಳ ಪರಿಶೀಲನೆ ಹಾಗೂ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ.

ನಗರದ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಹತ್ತಿರ ಮೇಲ್ಸೇತುವೆ ನಿರ್ಮಾಣಕ್ಕೆ 350 ಮರಗಳನ್ನು ಕಡಿಯುವ ಪ್ರಸ್ತಾವವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮಾಡಿದೆ. ಕಡಿಯಬೇಕಾದ ಮರಗಳ ಮೇಲೆ ಈಗಾಗಲೇ ಗುರುತು ಹಾಕಲಾಗಿದೆ. ಈ ಮರಗಳನ್ನು ಉಳಿಸುವ ಸಂಬಂಧ, 10ರಂದು (ಭಾನುವಾರ) ಬೆಳಿಗ್ಗೆ 7ರಿಂದ 10ರವರೆಗೆ ಪರಿಶೀಲನೆ ಹಾಗೂ ಬನ್ನಿಮಂಟಪ ರಸ್ತೆಯ ಮಿಲನ್ ಫಂಕ್ಷನ್ ಹಾಲ್ ಎದುರಿನ ಉದ್ಯಾನದಲ್ಲಿ ಸಭೆ ನಡೆಸಲಾಗುವುದು.

ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ಕೆರೆ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಭಾನು ಮೋಹನ್ ಸೇರಿದಂತೆ ಪರಿಸರ ತಜ್ಞರು ಹಾಗೂ ಹೋರಾಟಗಾರರು ಪಾಲ್ಗೊ ಳ್ಳುವರು ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-39-1901093535

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.