ಮೈಸೂರು: ‘ಸಂವಿಧಾನ ಅರಿತ ಯುವಜನರೇ ಅಂಬೇಡ್ಕರ್ ಆಶಯವನ್ನು ಈಡೇರಿಸುವ ಪ್ರಬಲ ಶಕ್ತಿ’ ಎಂದು ವಿಧಾನ ಪರಿಷತ್ ಸದಸ್ಯೆ, ನಟಿ ಉಮಾಶ್ರೀ ಹೇಳಿದರು.

ನಗರದ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಅರಿವು ಸಂಶೋಧನಾ ವಿದ್ಯಾರ್ಥಿ ವೇದಿಕೆಯಿಂದ ಬಿಎಂಶ್ರೀ ಸಭಾಂಗಣದಲ್ಲಿ ಮಂಗಳವಾರ ನಡೆದ ಅಂಬೇಡ್ಕರ್ ವಿಚಾರಗಳು: ಚಿಂತನ– ಮಂಥನ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

‘ಸಮಾಜದ ಎಲ್ಲರೂ ನೆಮ್ಮದಿಯಿಂದ ಬದುಕುವ ಆಶಯವನ್ನು ಸಂವಿಧಾನ ಸಾರಿದೆ. ಇದಕ್ಕೆ ವಿರುದ್ಧವಾಗಿ ಪೋಷಿಸಿರುವ ಕೋಮುವಾದವನ್ನು ಯುವಜನತೆಯು ಎದುರಿಸಬೇಕಿದ್ದು, ಸಂವಿಧಾನದ ಮೂಲಕವೇ ಬದುಕನ್ನು ಕಟ್ಟಿಕೊಂಡು, ನಾಡಿನ ಅಸ್ಮಿತೆಯನ್ನೂ ಉಳಿಸಬೇಕು’ ಎಂದರು.

‘ಜಾತಿ- ಧರ್ಮ ಎನ್ನುವುದು ಮನೆ ಬಾಗಿಲ ಒಳಗಿರಬೇಕು. ಇಲ್ಲಿ ಶಿಕ್ಷಣ ಕಲಿಯಲು ಬಂದವರೆಲ್ಲ ಸ್ನೇಹಿತರು, ಶಿಕ್ಷಣವೇ ದೇಶದ ಹಣೆಬರಹ ಬರೆಯುತ್ತದೆ ಎನ್ನುವ ಅಂಬೇಡ್ಕರ್ ಮಾತು ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

ಗಾಂಧಿ, ಅಂಬೇಡ್ಕರ್ ಭಿನ್ನರಲ್ಲ: ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ಚಿಂತನೆಗಳು ಸದಾ ದೇಶದ ಅಭಿವೃದ್ಧಿಯನ್ನೇ ಪ್ರತಿನಿಧಿಸಿದೆ. ಗಾಂಧೀಜಿಯ ಸಾಮಾಜಿಕ ಕಾರ್ಯ, ಅಂಬೇಡ್ಕರ್ ಅವರ ರಾಜಕೀಯ ಪ್ರಾತಿನಿಧ್ಯದ ಹೋರಾಟಗಳು ಭಿನ್ನವೇನಲ್ಲ. ಕೆಲ ವಿಷಯಗಳಲ್ಲಿ ಇಬ್ಬರದೂ ಪ್ರತ್ಯೇಕ ಹಾದಿ ಎನಿಸಿದರೂ ಅವರ ಗುರಿ ಸಮಾಜಪರವಾಗಿತ್ತು’ ಎಂದು ವಿಶ್ಲೇಷಿಸಿದರು.

‘ರಾಜಕೀಯ ಮೀಸಲಾತಿ ಎನ್ನುವುದು ತಳ ಸಮುದಾಯಗಳಿಗೆ ತಮ್ಮ ಶಕ್ತಿ ತೋರಿಸಲು ಇರುವ ಪ್ರಬಲ ಅಸ್ತ್ರ. ಇದರಿಂದ ಸಂಸತ್ತಿನಲ್ಲಿ, ವಿಧಾನಮಂಡಲದಲ್ಲಿ ತಳ ಸಮುದಾಯಗಳು ತಮ್ಮ ಹಕ್ಕಿನ ಪರ ಹೋರಾಡಲು, ಕಾನೂನು ರಚನೆಯಲ್ಲಿ ಭಾಗಿಯಾಗಲು ಅವಕಾಶ ದೊರೆತಿದೆ. ಅಂಬೇಡ್ಕರ್ ಅವರಿಂದ ಮಹಿಳೆಯರಿಗೂ ಶಾಸನ ಸಭೆಯಲ್ಲಿ ಅವಕಾಶ ದೊರೆತಿದೆ’ ಎಂದರು.

‘ಶೋಷಣೆ ಮತ್ತು ತುಳಿತಕ್ಕೆ ಒಳಗಾಗುವುದನ್ನು ನೇರವಾಗಿ ಅನುಭವಿಸಿದವರು ಬಾಬಾ ಸಾಹೇಬರು. ಅವರ ತತ್ವ, ಚಿಂತನೆಗು ಭಾರತ ಮಾತ್ರವಲ್ಲ. ಇಡೀ ಪ್ರಪಂಚದ ಶೋಷಿತ ಸಮುದಾಯಕ್ಕೆ ದೊಡ್ಡ ಕೊಡುಗೆ’ ಎಂದರು.

ಬೆಂಗಳೂರು ಅಪರಾಧ ತನಿಖಾ ವಿಭಾಗದ ಎಸ್ಪಿ ಬಿ.ಟಿ.ಕವಿತಾ ಅವರು, ‘ಅಂಬೇಡ್ಕರ್ ಚಿಂತನೆ– ಮಹಿಳಾ ಸುರಕ್ಷತೆ’ ಕುರಿತು ಮಾತನಾಡಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-39-112877020

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.