ಮೈಸೂರು: ‘ಮೈಸೂರು ವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವಜ್ರ ಮಹೋತ್ಸವ ಅಂಗವಾಗಿ ಶುಕ್ರವಾರ ಮತ್ತು ಶನಿವಾರ ವಿವಿಯ ವಿಜ್ಞಾನ ಭವನದಲ್ಲಿ ಸುರಕ್ಷಿತ, ನೈತಿಕ ಮತ್ತು ಅಂತರ್ಗತ ಜ್ಞಾನ ಪರಿಸರ ವ್ಯವಸ್ಥೆಗಳ ನಿರ್ಮಾಣ ಕುರಿತ ರಾಷ್ಟ್ರೀಯ ಶೃಂಗಸಭೆ ಆಯೋಜಿಸಲಾಗಿದೆ’ ಎಂದು ವಿಭಾಗದ ಮುಖ್ಯಸ್ಥ ಪ್ರೊ.ಎನ್.ಎಸ್. ಹರಿನಾರಾಯಣ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವಿವಿ ಆವರಣದಲ್ಲಿ ಶುಕ್ರವಾರ ವಾಕಥಾನ್ ನಡೆಯಲಿದೆ, ಮಧ್ಯಾಹ್ನ 3.30ಕ್ಕೆ ಶೃಂಗಸಭೆಯನ್ನು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಉದ್ಘಾಟಿಸುವರು, ಲೇಖಕ ವಿಕ್ರಮ್ ಸಂಪತ್ ದಿಕ್ಸೂಚಿ ಭಾಷಣ ಮಾಡುವರು. ಶನಿವಾರ ಬೆಳಿಗ್ಗೆ 10.45ಕ್ಕೆ ತಾಂತ್ರಿಕ ಗೋಷ್ಠಿ ನಡೆಯಲಿದೆ, ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ, ಸಮಾರೋಪ ಸಮಾರಂಭದಲ್ಲಿ ಡಾ.ಎಂ.ವಿ. ಸುನಿಲ್ ಅವರ ಸಂಚಾಲಕತ್ವದಲ್ಲಿ ಶಿಕ್ಷಣ ಮತ್ತು ವೃತ್ತಿ ಬದುಕಿನ ಸಾಧಕ- ಬಾಧಕಗಳ ಕುರಿತು ಸಂವಾದ ನಡೆಯಲಿದೆ’ ಎಂದು ವಿವರಿಸಿದರು.

ಬಿ.ಪಿ.ಪ್ರಕಾಶ್, ಡಾ. ಜಯಕುಮಾರ್, ಡಾ.ಎಂ. ಸುನಿಲ್ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-39-1738271703

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.