ಮೈಸೂರು: ‘ಇಲ್ಲಿನ ಮಾನಸಗಂಗೋತ್ರಿಯಲ್ಲಿರುವ ಜಯಲಕ್ಷ್ಮಿವಿಲಾಸ ಅರಮನೆಯನ್ನು ಖಾಸಗಿಯವರಿಗೆ ಭೋಗ್ಯಕ್ಕೆ (ಲೀಸ್) ನೀಡುವ ಯಾವುದೇ ಒಡಂಬಡಿಕೆ ಆಗಿಲ್ಲ’ ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಮಂಗಳವಾರ ಪ್ರಕಟಣೆ ಹೊರಡಿಸಿದ್ದಾರೆ.

ಸದಸ್ಯರಾದ ಗೋಕುಲ್ ಗೋವರ್ಧನ್, ಮಹದೇಶು, ಸಿ.ನಾಗರಾಜು, ಎಸ್.ಎಂ.ಮುಸ್ತಾಫ, ಜೆ.ಶಿಲ್ಪಾ, ಎಚ್.ಎಸ್.ನಟರಾಜ್, ಎಂ.ಶಂಕರ ಅವರು ಸಹಿ ಹಾಕಿದ್ದಾರೆ.

‘ಒಡಂಬಡಿಕೆ ಮಾಡಿಕೊಳ್ಳುವ ಬಗ್ಗೆ ಮಾರ್ಚ್ 13ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಯಾವುದೇ ಕಾರ್ಯಸೂಚಿ ಹಾಗೂ ವಿಷಯ ಮಂಡನೆ ಆಗಿಲ್ಲ. ಆದರೆ, ಅನೌಪಚಾರಿಕವಾಗಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ‘ಖಾಸಗಿ ಸಂಸ್ಥೆಯವರು ಅದರ ನಿರ್ವಹಣೆಗೆ ಸಂಬಂಧ ಒಡಂಬಡಿಕೆ ಮಾಡಿಕೊಳ್ಳಲು ಸಂಪರ್ಕಿಸಿದ್ದಾರೆ. ಕಾನೂನು ಸಲಹೆ ಹಾಗೂ ಇತರೆ ವಿಚಾರ ಚರ್ಚಿಸಿ ವಿಷಯ ಮಂಡಿಸುವೆ’ ಎಂದಿದ್ದರು. ಅದಕ್ಕೆ ಸದಸ್ಯರೆಲ್ಲರು ಒಕ್ಕೊರಲಿನಿಂದ ವಿವಿಯ ಆಸ್ತಿ ರಕ್ಷಣೆ, ಸಂರಕ್ಷಣೆಯ ಹಿತಾಸಕ್ತಿ ಇದ್ದರೆ ಮಾತ್ರ ಚರ್ಚಿಸೋಣ. ಇಲ್ಲದಿದ್ದರೆ ಬೇಡವೆಂದಿದ್ದೆವು. ಅದಕ್ಕೆ ಕುಲಪತಿ ಹಾಗೂ ಕುಲಸಚಿವೆ ಸಮ್ಮತಿಸಿದ್ದರು’ ಎಂದು ಹೇಳಿದ್ದಾರೆ.

‘ಮಾರ್ಚ್ 27ರ ಸಭೆಯ ಕೊನೆಯಲ್ಲಿ ಅನೌಪಚಾರಿಕವಾಗಿ ಇದೇ ವಿಷಯದ ಬಗ್ಗೆ ನಾವು ಪ್ರಸ್ತಾಪಿಸಿದ್ದೆವು. ಅದಕ್ಕೆ ಕುಲಪತಿ ಅವರು ಕರಡು ಪ್ರತಿ ಸಿದ್ಧವಾಗುತ್ತಿದೆ ಎಂದಿದ್ದರು. ಆಗ ಕುಲಸಚಿವೆ ಎಂ.ಕೆ.ಸವಿತಾ, ‘ವಿಶ್ವವಿದ್ಯಾಲಯ ಕಾಯ್ದೆ ಹಾಗೂ ಸರ್ಕಾರದ ನಿಯಮಾವಳಿ ಅನ್ವಯ, ವಿ.ವಿಯ ದೀರ್ಘಕಾಲದ ಹಿತಾಸಕ್ತಿ ಕಾಪಾಡುವ ದೃಷ್ಟಿಯಲ್ಲಿ ಒಡಂಬಡಿಕೆ ಮಾಡಿಕೊಳ್ಳುವುದು ಸೂಕ್ತವೆಂದಿದ್ದೆವು. ಅದಕ್ಕೆ ಕುಲಪತಿ ಅವರು ಮುಂದಿನ ಸಭೆಯಲ್ಲಿ ಚರ್ಚಿಸೋಣವೆಂದಿದ್ದರು’ ಎಂದು ತಿಳಿಸಿದ್ದಾರೆ.

‘ಸಿಂಡಿಕೇಟ್ ಸದಸ್ಯರೊಬ್ಬರುಸತ್ಯವಲ್ಲದ ವಿಚಾರಗಳನ್ನು ಪ್ರಸ್ತಾಪಿಸಿ, ವಿವಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಿಂಡಿಕೇಟ್ ಸಭೆಗಳ ನಡಾವಳಿಗಳು ವಿಶ್ವವಿದ್ಯಾಲಯದ ವೆಬ್ಸೈಟ್ನಲ್ಲಿ ಲಭ್ಯವಿದ್ದು, ಅದನ್ನು ನಾಗರಿಕರು ನೋಡಬೇಕು’ ಎಂದು ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-39-1005662526

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.