ಮೈಸೂರು: ‘ಟೆಂಡರ್ ಹೆಸರಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ಹಣವನ್ನು ಲೂಟಿ ಮಾಡಲಾಗುತ್ತಿದೆ. ಆದರೆ, ದಶಕಗಳ ಕಾಲ ಸೇವೆ ಸಲ್ಲಿಸಿ, ವಿಶ್ವವಿದ್ಯಾಲಯದ ಏಳಿಗೆಗೆ ದುಡಿದು ನಿವೃತ್ತಿಯಾದವರಿಗೆ ಪಿಂಚಣಿ ಕೊಡಲು ಹಣವಿಲ್ಲ’ ಎಂಬ ಆರೋಪ ನಿವೃತ್ತ ನೌಕರರಿಂದ ವ್ಯಕ್ತವಾಗಿದೆ.

‘ಏ.6ರಂದು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರ ಕಚೇರಿಯು ಟೆಂಡರ್ ಪ್ರಕಟಣೆಯನ್ನು ನೀಡಿದೆ. ಅದರಲ್ಲಿ ಒಎಂಆರ್ ಹಾಗೂ ಬಾರ್ ಕೋಡ್ ಇರುವ ಉತ್ತರ ಪತ್ರಿಕೆಗಳು ಬೇಕಿದ್ದು, ಏ.21ರಂದು ಟೆಂಡರ್ ಬಿಡ್ ಸಲ್ಲಿಸಲು ಹೇಳಿದೆ. ಟೆಂಡರ್ 23ರಂದು ನಡೆಯಲಿದೆಯೆಂದು ಹೇಳಲಾಗಿದೆ. ವಿಶ್ವವಿದ್ಯಾಲಯದಲ್ಲಿ ಮುದ್ರಣ ಘಟಕದ ಪ್ರಸಾರಾಂಗವೇ ಇರುವಾಗ ಟೆಂಡರ್ ಹೆಸರಿನಲ್ಲಿ ಕೋಟ್ಯಂತರ ಹಣ ಲೂಟಿ ಮಾಡಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಿಂಚಣಿದಾರರು ಮಾಹಿತಿ ನೀಡಿದ್ದಾರೆ.

‘ಮಾರ್ಚ್ ತಿಂಗಳ ಪಿಂಚಣಿಯು ಇದುವರೆಗೂ ಬಂದಿಲ್ಲ. ಸರ್ಕಾರದಿಂದ ಪಿಂಚಣಿ ಹಣ ಬಿಡುಗಡೆಯಾಗಿಲ್ಲವೆಂದು ಹೇಳುತ್ತಿದ್ದಾರೆ. ಆದರೆ, ಪರೀಕ್ಷಾ ಸಾಮಗ್ರಿಯನ್ನು ಬೇರೆಡೆಯಿಂದ ಖರೀದಿಸಿ ದುಂದುವೆಚ್ಚ ಮಾಡಲಾಗುತ್ತಿದೆ. ತಿಂಗಳ ಕೊನೆ ದಿನ ಪಿಂಚಣಿ ನೀಡದೇ 2 ಸಾವಿರಕ್ಕೂ ಹೆಚ್ಚು ಮಂದಿಯ ಹಣವನ್ನು ತಿಂಗಳುಗಟ್ಟಲೇ ಬಾಕಿ ಉಳಿಸಿಕೊಳ್ಳಲಾಗುತ್ತಿದೆ. ವೃದ್ಧಾಪ್ಯದಲ್ಲಿಯೂಕ್ರಾಫರ್ಡ್ ಭವನಕ್ಕೆ ಅಲೆಸುವ ಕಾರ್ಯದಲ್ಲಿ ವಿವಿ ಆಡಳಿತ ವ್ಯವಸ್ಥೆಯು ಮಗ್ನವಾಗಿದೆ. ಅವರೂ ನಿವೃತ್ತರಾದರೆ ನಮ್ಮ ಸಂಕಷ್ಟ ಗೊತ್ತಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೂಡಲೇ ಪಿಂಚಣಿ ನೀಡಬೇಕು. ಅನುದಾನವಿಲ್ಲವೆಂಬ ನೆಪ ಹೇಳದೇ, ಕಮಿಷನ್ ಆಸೆಗೆ ವಿಶ್ವವಿದ್ಯಾಲಯದ ಹಣವನ್ನು ಪೋಲು ಮಾಡಬಾರದು. ಇಲ್ಲದಿದ್ದರೆ ವಯಸ್ಸೆಂಬುದನ್ನು ಲೆಕ್ಕಿಸದೇ ಬಿರು ಬಿಸಿಲಿನಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ವಿಶ್ವವಿದ್ಯಾಲಯವು ಶಿಸ್ತಿಗೆ ಹೆಸರಾಗಿತ್ತು. ಈಗ ದುಂದುವೆಚ್ಚಕ್ಕೆ ಹೆಸರಾಗಿದೆ. ಪ್ರಯೋಜನಕ್ಕೆ ಬಾರದ ಕಟ್ಟಡಗಳಿಂದಲೇ ತುಂಬಿ ಹೋಗಿದೆ. ಟೆಂಡರ್ ಪ್ರಕಟಣೆಗಳೇ ಕಾಣುತ್ತಿವೆ’ ಎಂದು ದೂರಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಕುಲಸಚಿವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-39-1909400422

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.