ಮೈಸೂರು: ‘ಕಾಯಂ ಅಧ್ಯಾಪಕರನೇಮಕಾತಿ ಇಲ್ಲದ ಕಾರಣದಿಂದ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಸರ್ಕಾರದ ಗಮನಸೆಳೆದಿದ್ದೇನೆ’ ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.

ಇಲ್ಲಿನ ಕ್ರಾಫರ್ಡ್ ಹಾಲ್ನಲ್ಲಿ ಸೋಮವಾರ ನಡೆದ ಶಿಕ್ಷಣ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರನ್ನು ಹಲವು ಬಾರಿ ಭೇಟಿಯಾಗಿ ಖುದ್ದಾಗಿ ಮನವಿ ಸಲ್ಲಿಸಿದ್ದೇನೆ’ ಎಂದರು.

ವಿಧಾನಪರಿಷತ್ ಸದಸ್ಯ ಕೆ.ವಿವೇಕಾನಂದ, ‘ವಿವಿಯ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಪಡೆಯಲು ಪ್ರಸ್ತಾವ ಸಲ್ಲಿಸಿದಲ್ಲಿ, ನನ್ನ ಕಡೆಯಿಂದಲೂ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಈಗಾಗಲೇ ಸಲ್ಲಿಸಲಾಗಿದೆ’ ಎಂದು ಕುಲಪತಿ ಪ್ರತಿಕ್ರಿಯಿಸಿದರು.

ವಿ.ವಿಯ ಕಲಾ, ವಿಜ್ಞಾನ ಮತ್ತು ತಂತ್ರಜ್ಞಾನ, ವಾಣಿಜ್ಯ, ಶಿಕ್ಷಣ, ಕಾನೂನು ಹಾಗೂ ಎಂಜಿನಿಯರಿಂಗ್ ನಿಕಾಯಗಳ ಸಭೆಯ ನಡಾವಳಿ ಮಂಡಿಸಿ ಅನುಮೋದನೆ ಪಡೆಯಲಾಯಿತು. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದಡಿ ವಿಶೇಷ ಕಾರ್ಯಕ್ರಮಗಳ ಪಠ್ಯಕ್ರಮಗಳ ಶಿಫಾರಸುಗಳನ್ನು ಅನುಮೋದಿಸಲಾಯಿತು.

ಸಿ.ಶಿವರುದ್ರಯ್ಯ ಮತ್ತು ಎಚ್.ವಿ. ಸಾವಿತ್ರಮ್ಮ, ಎಸ್. ಚನ್ನವೀರಯ್ಯ ಮತ್ತು ಪುಟ್ಟಮ್ಮ ನಗದು ಬಹುಮಾನಗಳು, ಪ್ರೊ.ಬಿ.ಎಸ್. ಪಂಡಿತ್ ಹಾಗೂ ವನಜಾ ಬಿ. ಪಂಡಿತ್, ಪ್ರೊ.ಡಿ.ಆನಂದ್ ಚಿನ್ನದ ಪದಕಗಳು, ಪ್ರೊ.ವಿ.ಕೆ. ನಟರಾಜ್ ದತ್ತಿ ಉಪನ್ಯಾಸ ಹಾಗೂ ಪ್ರೊ.ಸರ್ವೋತ್ತಮ್ ವೈ. ಅಂಬೇಡ್ಕರ್ ದತ್ತಿ ಉಪನ್ಯಾಸ ಮಾಲಿಕೆಗೆ ಅನುಮೋದನೆ ನೀಡಲಾಯಿತು.

2004–2005ನೇ ಶೈಕ್ಷಣಿಕ ಸಾಲಿನಿಂದ 2019–2020ರವರೆಗೆ ಪ್ರವೇಶ ಪಡೆದು ಪದವಿಯಲ್ಲಿ ಅನುತ್ತೀರ್ಣಗೊಂಡು ಪೂರ್ಣಗೊಳಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ‘ವಿಶೇಷಪ್ರಕರಣವೆಂದು’ ಪರಿಗಣಿಸಿ, ಅಂತಿಮಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಅನುಸಮರ್ಥನೆಗಾಗಿ ಮಂಡಿಸಿದ ವಿಷಯವನ್ನು ಸಭೆ ಅನುಮೋದಿಸಿತು. ಕುಲಸಚಿವೆ ಎಂ.ಕೆ. ಸವಿತಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-39-1563834707

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.