ಮೈಸೂರು: ‘ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಹಗರಣಗಳ ತನಿಖೆ ನಡೆಸಿ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಸದಸ್ಯರು ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಈಚೆಗೆ ಪ್ರತಿಭಟಿಸಿದರು.

ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ, ‘ಮಹಾರಾಜ ಕಾಲೇಜಿನ 17 ಖಾತೆಗಳಿಂದ ₹ 2.45 ಕೋಟಿಯನ್ನು ಮೈಸೂರು ವಿವಿಯ ಆಡಳಿತ ಮಂಡಳಿ ಗಮನಕ್ಕೂ ತಾರದೇ ಕುಲಪತಿ ಹಾಗೂ ಕುಲಸಚಿವರು ಖರ್ಚು ಮಾಡಿದ್ದಾರೆ. ಟೆಂಡರ್ಗೆ ಪ್ರಾಂಶುಪಾಲರ ಸಹಿಯಿಲ್ಲದೆ, ಸಿಂಡಿಕೇಟ್ ಸದಸ್ಯರ ಗಮನಕ್ಕೂ ತಾರದೇ ಅಕ್ರಮ ಎಸಗಿದ್ದಾರೆ’ ಎಂದು ದೂರಿದರು.

‘ಮೌಲ್ಯಭವನದ ಪರಿಕರಗಳ ಸಾಮಗ್ರಿಗಳ ಟೆಂಡರ್ನಲ್ಲಿ ಕುಲಪತಿಗಳು ₹ 4.96 ಕೋಟಿ ಬಳಸಿರುವುದನ್ನು ಕುಲಸಚಿವರ ಗಮನಕ್ಕೂ ತಾರದೇ ನಡೆದಿರುವ ನಿಯಬಾಹಿರ ಕ್ರಮವಾಗಿದೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.

ಸಂಘಟನೆಯ ಗಾಯಿತ್ರಿ ವಿಜಯೇಂದ್ರ, ಜಿ.ಲೋಕೇಶ್ ಕುಮಾರ್, ಸುಜಾತ ಷಣ್ಮುಗಂ, ಹೇಮಂತ್ಗೌಡ, ಶಿವರಾಜ್, ವಿನಯ್, ದೇಬೂರು ವಿಜಯ, ಪುಷ್ಪಲತಾ, ಮಹೇಶ್, ಸ್ವಾಮಿ, ಅಸ್ಲಾಂ, ವಾಸ್ಸಿಂ, ಲೋಕೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-39-106352215

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.