ಮೈಸೂರು: ‘ವಿವಿಧ ಯೋಜನೆಗಳಿಗೆ ‘ಅಭಿವೃದ್ಧಿ ಹಣಕಾಸು’ ಅಗತ್ಯವಿದ್ದು, ಖಾಸಗಿ ಸಂಸ್ಥೆಗಳು ಕೈಜೋಡಿಸಬೇಕಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಹೇಳಿದರು.

ವಿಶ್ವೇಶ್ವರ ನಗರದ ಎಂಬಿಸಿಟಿ ಸಭಾಂಗಣದಲ್ಲಿ ಮಂಗಳವಾರ ಮೈಸೂರು ಬಿಲ್ಡರ್ಸ್ಗಳ ಸಂಸ್ಥೆ, ಕ್ರೆಡಾಯ್ ಸಹಯೋಗದಲ್ಲಿ ಆಯೋಜಿಸಿದ್ದ ‘ವಿಷನ್ ಮೈಸೂರು-2050– ಸ್ವಚ್ಛ, ಹಸಿರು ಹಾಗೂ ಗ್ರೇಟರ್ ಮೈಸೂರು’ ಪಾಲುದಾರರೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು. ಪಾಲಿಕೆ ವ್ಯಾಪ್ತಿಯಲ್ಲಿನ ವಿವಿಧ ಯೋಜನೆಗಳಿಗೆ ಅಗತ್ಯವಿರುವ ನೆರವಿನ ಕುರಿತು ಅವರು ಬೆಳಕು ಚೆಲ್ಲಿದರು.

‘ಎಲ್ಲ ಯೋಜನೆಗಳಿಗೂ ಸರ್ಕಾರ ನೇರವಾಗಿ ಹಣ ಒದಗಿಸಲು ಆಗದು. ಖಾಸಗಿ ಸಂಸ್ಥೆಗಳೂ ಸಹಭಾಗಿತ್ವದ ಯೋಜನೆಗಳಿಗೆ ಹಣಕಾಸು ಒದಗಿಸಬಹುದಾಗಿದೆ. ನಗರದಲ್ಲಿ ಸದ್ಯ ಘನತ್ಯಾಜ್ಯ, ಜೈವಿಕ ಅನಿಲ ಉತ್ಪಾದನೆ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ಬಹು ಮಹಡಿ ವಾಹನ ಪಾರ್ಕಿಂಗ್ ವ್ಯವಸ್ಥೆಯಂತಹ ಯೋಜನೆಗಳಿಗೆ ಸಹಭಾಗಿ ತ್ವದ ಅಗತ್ಯವಿದೆ. ಎಲ್ಲ ಕಟ್ಟಡಗಳಿಗೆ ಸೌರವಿದ್ಯುತ್ ಘಟಕ ಅಳವಡಿಕೆ ಮೂಲಕ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಇಂತಹ ವಿನೂತನ ಯೋಜನೆಗಳಿಗೆ ಖಾಸಗಿ ಕಂಪನಿಗಳು ಕೈ ಜೋಡಿಸಬಹುದಾಗಿದೆ’ ಎಂದರು.

‘ಮೈಸೂರಿನಲ್ಲಿ 500 ಟನ್ಗೂ ಹೆಚ್ಚು ತ್ಯಾಜ್ಯ ಆಗುತ್ತಿದ್ದು, ಅದನ್ನು ವ್ಯವಸ್ಥಿತವಾಗಿ ರಸವನ್ನಾಗಿ ಪರಿವರ್ತಿಸುವ ಅಗತ್ಯವಿದೆ. ಸ್ವಚ್ಚತೆಗೆ ಇನ್ನಷ್ಟು ಹೂಡಿಕೆಯ ಅಗತ್ಯ ವಿದೆ. ಪಾಲಿಕೆ ಸಹ ಈಗಾಗಲೇ ಹಲವು ಯೋಜನೆ ಜಾರಿಗೊಳಿಸುತ್ತಿದೆ’ ಎಂದರು.

‘ಮೈಸೂರಿನ ಸ್ವಚ್ಛತೆಯನ್ನು ಇನ್ನಷ್ಟು ಉತ್ತಮಗೊಳಿಸಿ, ಪ್ರವಾಸಿಗರನ್ನು ಆಕರ್ಷಿಸಬಹುದು. ಖಾಸಗಿ ಕಂಪನಿಗಳು ಪ್ರಮುಖ ರಸ್ತೆ, ವೃತ್ತ, ಉದ್ಯಾನಗಳನ್ನು ದತ್ತು ಪಡೆದು ನಿರ್ವಹಣೆ ಇಲ್ಲವೇ ಅಭಿವೃದ್ದಿ ಮಾಡಬಹುದು. ತಮ್ಮ ಬ್ರ್ಯಾಡಿಂಗ್ ಚಟುವಟಿಕೆಗಳಿಗೂ ಬಳಸಲು ಅವಕಾಶವಿದೆ. ಈಗಾಗಲೇ ಹಲವು ಪ್ರಮುಖ ಕಂಪನಿಗಳು ಇದನ್ನು ಬಳಕೆ ಮಾಡಿಕೊಳ್ಳುತ್ತಿವೆ’ ಎಂದರು.

‘ನಗರದ ಸ್ಚಚ್ಛತೆಗೆ ಇನ್ನಷ್ಟು ಸಾರ್ವಜನಿಕ ಜಾಗೃತಿಯ ಅಗತ್ಯವಿದೆ. ನಾಗರಿಕ ಸೊಸೈಟಿಗಳ ಸ್ಥಾಪನೆಯ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿದೆ’ ಎಂದು ಸಲಹೆ ನೀಡಿದರು.

ಕ್ರೆಡಾಯ್ ಮೈಸೂರು ಘಟಕದ ಅಧ್ಯಕ್ಷ ಹರೀಶ್ ಶೆಣೈ ‘ಪ್ರಸ್ತುತ ಕಟ್ಟಡ ನಕ್ಷೆ ಮಂಜೂರಾತಿ ಅವಧಿಯು ಎರಡು ವರ್ಷಗಳಾಗಿದ್ದು, ಇದನ್ನು ಬೆಂಗಳೂರಿನಂತೆ 3 ರಿಂದ 5 ವರ್ಷಕ್ಕೆ ವಿಸ್ತರಿಸಬೇಕು’ ಎಂದು ಕೋರಿದರು.

ಬಿಲ್ಡರ್ಸ್ ಸಂಘ ಮೈಸೂರು ಘಟಕದ ಅಧ್ಯಕ್ಷ ಕೆ.ಆರ್. ಪ್ರಭಾಕರ್ ರಾವ್, ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು, ಜಿಎಸ್ಎಸ್ ಸಂಸ್ಥೆ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್, ಗೋಪಿನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-39-2040988295

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.