ಮೈಸೂರು: ‘ಜಿಲ್ಲೆಯಲ್ಲಿ ಎಸ್ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ)ಗೆ ಮುನ್ನ ‘ಮ್ಯಾಪಿಂಗ್ ಪ್ರಕ್ರಿಯೆ’ಯನ್ನು ಶೇ 100ರಷ್ಟು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಅರ್ಹ ಮತದಾರರ ಹೆಸರು ಪಟ್ಟಿಯಿಂದ ಬಿಟ್ಟು ಹೋಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಎಸ್ಐಆರ್ ಭಾಗವಾದ ‘ಮತದಾರರ ಮ್ಯಾಪಿಂಗ್’ ಕುರಿತು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 19ರವರೆಗೆ ಮ್ಯಾಪಿಂಗ್ ನಡೆಯಲಿದೆ. 20ರಿಂದ ಎಸ್ಐಆರ್ ಆರಂಭವಾಗಲಿದೆ. ಮನೆ ಮನೆಗೆ ತೆರಳಿ ಪರಿಶೀಲಿಸಿ ಮ್ಯಾಪಿಂಗ್ಗೆ ಸೇರ್ಪಡೆಗೊಳಿಸುವಂತೆ ಎಆರ್ಒಗಳಿಗೆ ಸೂಚಿಸಲಾಗುವುದು. ಎಆರ್ಒಗಳು ಕ್ಷೇತ್ರದ ವ್ಯಾಪ್ತಿಗೆ ಬರುವ ಬಿಎಲ್ಒಗಳ ಜೊತೆ ಸೇರಿ ಈ ಕೆಲಸವನ್ನು ಶೇ 100ರಷ್ಟು ಮಾಡುವರು’ ಎಂದು ತಿಳಿಸಿದರು.

ಪರಿಶೀಲಿಸಿ: ‘ಇನಿಷಿಯಲ್ ವ್ಯತ್ಯಾಸ, ಹೆಸರಿನಲ್ಲಿ ಒಂದು ಅಕ್ಷರ ಕಡಿಮೆ ಅಥವಾ ಹೆಚ್ಚು ಇದ್ದರೆ ಮ್ಯಾಪಿಂಗ್ ಸಮಸ್ಯೆ ಆಗುವುದಿಲ್ಲ. ಈಗ ಮ್ಯಾಪಿಂಗ್ ಕಾರ್ಯವು ಶೇ.88ರಷ್ಟು ಆಗಿದೆ. ಆ ಕೆಲಸ ಮುಗಿದ ಮೇಲೆ ಪ್ರತಿಯೊಬ್ಬರಿಗೂ ವೋಟರ್ ಎನ್ಯುಮರೇಷನ್ ಫಾರಂಗಳನ್ನು (ಅರ್ಜಿ ನಮೂನೆ) ಕೊಡಲಾಗುವುದು. ಆಗ ಮತ್ತೊಮ್ಮೆ ಪರಿಶೀಲಿಸಿ ಸೇರ್ಪಡೆ ಮಾಡಿಸಲು ಅವಕಾಶವಿದೆ’ ಎಂದು ಹೇಳಿದರು.

‘ಅರ್ಹರನ್ನು ಪಟ್ಟಿಯಿಂದ ಕೈಬಿಡದಂತೆ ಗಮನಹರಿಸಲು ಎಲ್ಲಾ ಎಆರ್ಒಗಳಿಗೆ ಸೂಚಿಸಲಾಗಿದೆ. ಆದಾಗ್ಯೂ, ಕೆಲವು ವ್ಯತ್ಯಾಸಗಳು ಕಂಡುಬಂದಲ್ಲಿ ನೇರವಾಗಿ ನನ್ನ ಗಮನಕ್ಕೆ ತಂದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

3,37,961 ಮಂದಿ ಮತದಾರರ ಹೆಸರು ಮ್ಯಾಪಿಂಗ್ಗೆ ಬಾಕಿ ಇರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು. ರಾಜಕೀಯ ಪಕ್ಷಗಳ ಮುಖಂಡರ ಅಭಿಪ್ರಾಯಗಳನ್ನು ದಾಖಲಿಸಿಕೊಳ್ಳಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್, ಕಾರ್ಯದರ್ಶಿ ಜಾನ್ಸನ್, ನಗರಪಾಲಿಕೆ ಹೆಚ್ಚುವರಿ ಆಯುಕ್ತ ಜಿ.ಎಸ್.ಸೋಮಶೇಖರ್, ಉಪ ವಿಭಾಗಾಧಿಕಾರಿ ಆಶಪ್ಪ, ತಹಶೀಲ್ದಾರ್ ಕೆ.ಎಂ.ಮಹೇಶ್ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-39-351047178

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.