ಮೈಸೂರು: ‘ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಮತದಾನದ ಹಕ್ಕು ಅರಿಯದಿದ್ದರೆ ಅಸ್ಪೃಶ್ಯತೆ ನಿವಾರಣೆ ಅಸಾಧ್ಯ’ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರು.

ನಗರದಲ್ಲಿ ಲಾಲ್ಬಹುದ್ದೂರ್ ಶಾಸ್ತ್ರಿ ನಗರದಲ್ಲಿ ‘ಡಾ.ಬಿ.ಆರ್.ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ’ವು ಆಯೋಜಿಸಿದ್ದ ಬಾಬಾಸಾಹೇಬರ ಜಯಂತಿಯಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿ ಅಸ್ಪೃಶ್ಯತೆ ನಿವಾವರಣೆಗಾಗಿ ಜೀವನದುದ್ದಕ್ಕೂ ಹೋರಾಟ ನಡೆಸುತ್ತಲೇ ಬಂದರು. ಅವರ ಹೋರಾಟ ಹಾಗೂ ಚಿಂತನೆ ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಸಂವಿಧಾನದ ಮೂಲಕ 18 ವರ್ಷ ತುಂಬಿದ ಎಲ್ಲರಿಗೂ ಮತದಾನದ ಹಕ್ಕನ್ನು ಅಂಬೇಡ್ಕರ್ ನೀಡಿದರು. ಶೋಷಿತರು ಒಳ್ಳೆಯ ಮನೆ ಕಟ್ಟಿಕೊಂಡು ಒಳ್ಳೆಯ ಬಟ್ಟೆ ಹಾಕಿಕೊಂಡು ಇಂಥ ಸಭೆ ಸಮಾರಂಭ ಮಾಡುತ್ತಿರುವುದಕ್ಕೆ ಅಂಬೇಡ್ಕರ್ ಕಾರಣವೇ ಹೊರತು ಯಾವುದೇ ದೇವರು ಕೊಟ್ಟ ವರವಲ್ಲ’ ಎಂದು ಅಭಿಪ್ರಾಯಪಟ್ಟರು.

‘ವಿಮೋಚನಾ ರಥವನ್ನು ಹಲವು ಅಡೆತಡೆಗಳ ನಡುವೆ ಇಲ್ಲಿವರೆಗೆ ಎಳೆದು ತಂದಿರುವೆ. ನಿಮಗೆ ಸಾಧ್ಯವಾದರೆ ಇಲ್ಲಿಗೆ ನಿಲ್ಲಿಸಿ, ಆದರೆ ಹಿಂದಕ್ಕೆ ಮಾತ್ರ ಎಳೆಯಬೇಡಿಯೆಂದು ಅಂಬೇಡ್ಕರ್ ಹೇಳಿದ್ದಾರೆ. ಅವರ ವಿಮೋಚನಾ ರಥದಲ್ಲಿನ ನಾಲ್ಕು ಚಕ್ರಗಳಿವೆ. ಅವುಗಳೆಂದರೆ ಸಾಮಾಜಿಕ ಚಕ್ರ, ಆರ್ಥಿಕ ಚಕ್ರ, ರಾಜಕೀಯ ಹಾಗೂ ಧಾರ್ಮಿಕ ಚಕ್ರ’ ಎಂದರು.

‘ಸಮಾಜದಲ್ಲಿ ಪ್ರತಿಯೊಬ್ಬರೂ ಮೇಲ್ವರ್ಗದವರಿಗೆ ಸಮಾನವಾಗಿ ಗೌರವವಾಗಿ ಬದುಕುವುದೇ ಸಾಮಾಜಿಕ ಚಕ್ರದ ಅರ್ಥ, ಆರ್ಥಿಕ ಚಕ್ರ ಎಂದರೆ ದೇಶದ ಸಂಪತ್ತಿನಲ್ಲಿ ಸಮಪಾಲು ಪಡೆಯುವುದೇ ಆಗಿದೆ. ಇದಕ್ಕಾಗಿ ಡಾ.ಅಬೇಡ್ಕರ್ ತಿಳಿಸಿದ ಮಾರ್ಗದಲ್ಲೆ ಹೋರಾಟ ನಡೆಸಬೇಕು’ ಎಂದು ಸಲಹೆ ನೀಡಿದರು.

‘ರಾಜಕೀಯ ಹಕ್ಕು ಜೀವನದ ಬದಲಾವಣೆಯ ಮಹತ್ವದ ವಿಷಯವಾಗಿದ್ದು, ಮತದಾನದ ಹಕ್ಕಿನ ಮಹತ್ವ ಅರಿಯಬೇಕು. ಸಂವಿಧಾನದಡಿ ಮೀಸಲಾತಿ ಇಲ್ಲದಿದ್ದರೆ ಯಾರೊಬ್ಬರೂ ಗ್ರಾಮ ಪಂಚಾಯಿತಿ ಸದಸ್ಯರಾಗಲೂ ಸಾಧ್ಯವಾಗುತ್ತಿರಲಿಲ್ಲ. ಧರ್ಮ ಚಕ್ರ ಪಾಲನೆಗೆ ತಾರತಮ್ಯದ ಧರ್ಮವನ್ನು ತಿರಸ್ಕರಿಸಿ ಬೌದ್ಧ ಧರ್ಮ ಅನುಸರಿಸಬೇಕು’ ಎಂದರು.

ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಸಂಘದ ಅಧ್ಯಕ್ಷ ಬಿ.ಸಿ.ಮಹದೇವಯ್ಯ, ಉಪಾಧ್ಯಕ್ಷ ಗಂಗಾಧರ್, ಮಹದೇವಸ್ವಾಮಿ, ಬಿ.ಪಿ.ನಾಗರಾಜು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-39-202500443

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.