ಮೈಸೂರು: ‘ಆಧುನಿಕ ಯುಗದಲ್ಲಿ ಯುದ್ಧಗಳು ಹಿಂದಿಗಿಂತಲೂ ಹೆಚ್ಚು ವಿನಾಶಕಾರಿಯಾಗಿ ಪರಿಣಮಿಸಿವೆ’ ಎಂದು ಹೆಚ್ಚುವರಿ ಆಯುಕ್ತೆ ಬಿ.ಎನ್.ವೀಣಾ ಹೇಳಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮೈಸೂರು ಕನ್ನಡ ವೇದಿಕೆ ಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಸಾಧಕ ಮಹಿಳೆಯರಿಗೆ ‘ಮಹಿಳಾ ರತ್ನ ರಮಾಬಾಯಿ ಡಾ. ಬಿ.ಆರ್.ಅಂಬೇಡ್ಕರ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

‘ಮನುಷ್ಯ ಹೆಚ್ಚು ಬುದ್ಧಿವಂತನಾದಷ್ಟೇ ವಿಜ್ಞಾನದ ಬೆಳವಣಿಗೆಗಳನ್ನು ಕೆಟ್ಟ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದು, ತಂತ್ರಜ್ಞಾನದ ಪ್ರಗತಿಯೂ ಕಾರಣವಾಗಿದೆ’ ಎಂದರು.

‘ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲಾರ ಎಂಬ ಮಾತು ಸದಾ ಸೂಕ್ತ. ಇದನ್ನು ಎಂದಿಗೂ ಮರೆಯಬಾರದು’ ಎಂದು ಹೇಳಿದರು.

‘ಪ್ರತಿಯೊಬ್ಬ ಪುರುಷನ ಸಾಧನೆ ಹಿಂದೆ ಓರ್ವ ಮಹಿಳೆ ಇರುತ್ತಾಳೆ. ಅಂಬೇಡ್ಕರ್ ಪತ್ನಿ ರಮಾಬಾಯಿ ಹೆಚ್ಚು ಓದಿದವರಲ್ಲ. ಆದರೆ ಅವರ ಸಾಧನೆಗೆ ಕೊಡುಗೆಯೂ ಅಪಾರ. ಇಡೀ ಕುಟುಂಬ ನಿರ್ವಹಿಸುತ್ತ, ಅದರ ಹೊರೆ ಅಂಬೇಡ್ಕರ್ ಮೇಲೆ ಬೀಳದಂತೆ ನೋಡಿಕೊಂಡರು’ ಎಂದರು.

‘ರಮಾಬಾಯಿ ಅವರ ಸಹಕಾರದಿಂದ ಅಂಬೇಡ್ಕರ್ ಅತ್ಯುತ್ತಮ ಸಂವಿಧಾನ ರಚಿಸಲು ಸಾಧ್ಯವಾಯಿತು. ಅದರ ಪರಿಣಾಮವಾಗಿ ಇಂದು ಬಹಳಷ್ಟು ಮಹಿಳೆಯರು ಶೋಷಣೆಯಿಂದ ಹೊರ ಬಂದು, ಅದರ ವಿರುದ್ಧ ಹೋರಾಡುವಂತಾಗಿದೆ’ ಎಂದು ವಿವರಿಸಿದರು.

ಈ ವೇಳೆ ಸಾಧಕ ಮಹಿಳೆಯರಿಗೆ ‘ಮಹಿಳಾ ರತ್ನ ರಮಾಬಾಯಿ ಡಾ.ಬಿ.ಆರ್.ಅಂಬೇಡ್ಕರ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ.ಪುಷ್ಪವಲ್ಲಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿದರು. ಅರುಣ್ಕುಮಾರ್, ರಘುರಾಂ ವಾಜಪೇಯಿ, ಎಸ್.ಬಾಲಕೃಷ್ಣ, ಮನೋಹರ್, ನಾಲಾಬೀದಿ ರವಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-39-311588335

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.