ಮೈಸೂರು: ‘ಜಾಗತಿಕ ಯುದ್ಧಗಳಿಗೆ ಬುದ್ಧನ ಶಾಂತಿ ಮಾರ್ಗವೇ ಪರಿಹಾರ’ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಹೇಳಿದರು.

ಜನಸ್ಪಂದನ ಟ್ರಸ್ಟ್ ವತಿಯಿಂದ ನಗರದಲ್ಲಿ ‘ಯುದ್ಧ ನಿಲ್ಲಲಿ ಶಾಂತಿ ನೆಲೆಸಲಿ’ ಶೀರ್ಷಿಕೆಯಲ್ಲಿ ಈಚೆಗೆ ಆಯೋಜಿಸಿದ್ದ ಶಾಂತಿ ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಲಕ್ಷಾಂತರ ವರ್ಷಗಳಲ್ಲಿ ಬುದ್ಧಿ, ಶ್ರಮದಿಂದ ಮನುಷ್ಯ ವಿಕಾಸ ಹೊಂದಿದ್ದಾನೆ. ಯುದ್ಧದ ಮೂಲಕ ಮತ್ತೆ ಮನುಷ್ಯ ಸರ್ವನಾಶವಾಗುತ್ತಾನೆ. ಬೇಗನೆ ಯುದ್ಧ ಕೊನೆಗೊಳ್ಳಲಿ. ನಾಗರಿಕರ ಬದುಕಿಗೆ ಬೆಲೆ ಇಲ್ಲವೇ? ಮಾನವೀಯತೆಗಿಂತ ಬೇರೇನೂ ಇಲ್ಲ. ಯುದ್ಧ ನಿಲ್ಲಲಿ ಶಾಂತಿ ನೆಲೆಸಲಿ’ ಎಂದರು.

‘ಸಾವು, ನೋವು, ಸಂಕಟಗಳೇ ಯುದ್ಧದ ಪರಿಣಾಮ. ಇರಾನ್, ಇಸ್ರೇಲ್, ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧದ ದುಷ್ಪರಿಣಾಮ ಜಗತ್ತಿನ ಮೂಲೆ, ಮೂಲೆಗೂ ತಲುಪುತ್ತಿದೆ. ಶಾಂತಿಯು ಸಮಾಜದ ಕೀಲಿ ಕೈ ಇದ್ದಂತೆ. ಶಾಂತಿ ನೆಲೆಗೊಂಡರೆ ಮಾತ್ರ ಪ್ರತಿಯೊಂದು ದೇಶವೂ ಸಹೋದರತ್ವದಿಂದ ಇರಲು ಸಾಧ್ಯ’ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಪ್ರೊ.ಕಾಳಚನ್ನೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ಶ್ರೀಧರ್, ಮುಖಂಡರಾದ ಗೋಪಿನಾಥ್, ಟಿ.ಬಿ.ಚಿಕ್ಕಣ್ಣ, ಜೆ.ಗೋಪಿ, ಎಂ.ಸುನೀಲ್, ಅನಂತ್, ಆರ್.ಎಚ್. ಕುಮಾರ್, ಬಾಲಕೃಷ್ಣ, ರವಿ, ಕಲೀಂ ಷರೀಫ್, ಜೋಗಿ ಮಹೇಶ್, ಪಟಾಕಿ ಮಂಜುನಾಥ್, ಹೇಮಂತ್, ಪುಟ್ಟಣ್ಣ, ರಾಮ್, ಪುಟ್ಟಸ್ವಾಮಿ, ಜಗನ್ನಾಥ್ ಭೋವಿ, ಆನಂದ್, ಮೊಹಿಬ್ ಷರೀಫ್, ವಿನಯ್ ಜೆ. ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-39-688030765

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.