ಮೈಸೂರು: ವರ್ಷದ ಹಿಂದೆ ಜೀರ್ಣೋದ್ಧಾರಗೊಂಡ ಹಿರೇಕೆರೆಯನ್ನು ನೋಡೋಣ ಎಂದು ಹೊರಡುವವರಿಗೆ ಕೊಳಚೆ ನೀರಿನ ವಾಸನೆ ಮೂಗಿಗೆ ಬಡಿ ಯುತ್ತಿದೆ. ದೇವಿಕೆರೆಯತ್ತ ಹೋಗೋಣ ಎಂದರೂ ರಸ್ತೆ ಬದಿ ಅದೇ ದುರ್ನಾತ ಮನಸ್ಸನ್ನು ಕಸಿವಿಸಿಗೊಳಿಸುತ್ತದೆ.

ನೆಮ್ಮದಿ ಅರಸಿ ಬರುವ ಭಕ್ತರಿಗೆ ದೇವಸ್ಥಾನದ ಆಸುಪಾಸಿನ ಸ್ಥಳಗಳ ಅವಸ್ಥೆ ಬೇಸರ ಮೂಡಿಸುತ್ತಿದೆ. ಕೊಳಚೆ ನೀರಿನ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಭಕ್ತರನ್ನು ಅಸಹನೀಯಗೊಳಿಸುವುದಲ್ಲದೇ ಸ್ಥಳೀಯರು ಮತ್ತು ವನ್ಯಜೀವಿಗಳಿಗೂ ಕಂಟಕವಾಗಿದೆ.

ಎಸ್ಟಿಪಿ ಟ್ಯಾಂಕ್ ಇಲ್ಲ: ಬೆಟ್ಟದ ಯಾವುದೇ ಭಾಗದಲ್ಲೂ ತ್ಯಾಜ್ಯ ನೀರು ಸಂಸ್ಕರಣಾ ಘಟಕವೇ (ಎಸ್.ಟಿ.ಪಿ) ಇಲ್ಲ. ದೇವಿಕೆರೆ ಸಂಪರ್ಕಿಸುವ ರಸ್ತೆ ಬದಿ ಅರಣ್ಯದ ಇಳಿಜಾರಿನಲ್ಲಿ ಹರಿಯುವ ವೀರ ಮದಕರಿ ನಾಯಕರ ಬೀದಿ ಮುಂತಾದ ವಸತಿ ಪ್ರದೇಶಗಳ ಕೊಳಚೆಯು ಒಳ ಚರಂಡಿ ವ್ಯವಸ್ಥೆಯ ಅಸರ್ಮಕ ನಿರ್ವಹಣೆಯನ್ನು ಸಾರಿ ಹೇಳುತ್ತಿದೆ. ಬೆಳೆಯುತ್ತಿರುವ ಜನವಸತಿಯು ಹಳೇ ಚರಂಡಿಗಳನ್ನು ನಿಷ್ಕ್ರಿಯಗೊಳಿಸಿದೆ.

ನಂದಿ ವಿಗ್ರಹದಿಂದ ಸ್ಥಳದಿಂದ ದೇವಸ್ಥಾನ ಸಂಪರ್ಕಿಸುವ ಮೆಟ್ಟಿಲುಗಳು ಬಲಭಾಗದಲ್ಲಿ ನಿರ್ಮಾಣಗೊಂಡಿರುವ ಮನೆಗಳು, ವಿವಿಧ ಉದ್ದೇಶದ ಕಟ್ಟಡಗಳು ಸೃಷ್ಟಿಸುತ್ತಿರುವ ಕೊಳಚೆ ನೀರಿಗೆ ಬೆಟ್ಟದ ಇಳಿಜಾರೇ ಹಾದಿಯಾಗಿದ್ದು ತಗ್ಗಿನಲ್ಲಿ ನಿಂತು ಕೊಳೆಯುತ್ತಿದೆ. ಹಿರೇಕೆರೆ ಬದಿಯಲ್ಲಿನ ಬದುವಿನಲ್ಲಿ ಹರಿದು ಸಾಗುತ್ತಿದೆ. ಬೇಸಿಗೆಯಲ್ಲಿ ಒಣಗಿ ಮಾಲಿನ್ಯ ಉಂಟು ಮಾಡುತ್ತಿದೆ. ಕೊನೇ ಭಾಗದಲ್ಲಿರುವ ಮನೆಗಳಿಗೆ ವಾಸನೆ ತಟ್ಟುತ್ತಿದೆ. ಅದರ ನಡುವೆಯೇ ಜನಜೀವನ ಸಾಗಬೇಕಿದೆ.

ದೇವಿಕೆರೆ ಸಂಪರ್ಕ ರಸ್ತೆ ಬದಿ ಬಂಡೆಗಳು ಇರುವ ಜಾಗದಲ್ಲಿ ಮಳೆ ನೀರು ಚರಂಡಿಯನ್ನೇ ಮಾಡಿಲ್ಲ. ಉಳಿದ ಜಾಗದಲ್ಲಿ ನಿರ್ಮಿಸಿ ಸಣ್ಣ ಸಣ್ಣ ತೊಟ್ಟಿಗಳನ್ನು ಮಾಡಿದ್ದಾರೆ. ಇದರಲ್ಲಿ ಕೊಳಚೆ ನೀರಿನ ಸರಾಗ ಹರಿವು ಅಸಾಧ್ಯ. ಕಸಗಳು ತುಂಬಿ ಮುಚ್ಚಿಹೋಗಿವೆ. ಅಲ್ಲದೆ ಇಲ್ಲಿ ಎಸ್ಟಿಪಿ ಟ್ಯಾಂಕ್ ಅನ್ನು ನಿರ್ಮಿಸಿದ್ದು, ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಗೆ ಮಾದರಿಯಾಗಿದೆ!

ಬಳಕೆಯಾಗದ ವ್ಯವಸ್ಥೆ: ಚರಂಡಿ ನೀರನ್ನು ಸಂಸ್ಕರಿಸುತ್ತಿಲ್ಲ. ದೇವಿಕೆರೆ ರಸ್ತೆ ಬಳಿ ನಿರ್ಮಾಣಗೊಂಡಿರುವ ಸಂಸ್ಕರಣೆ ವ್ಯವಸ್ಥೆವು ಬಳಕೆಯಾಗದೇ ತ್ಯಾಜ್ಯ ರಾಶಿಯ ನಡುವೆ ಉಪಯೋಗಕ್ಕೆ ಬಾರದಾಗಿದೆ. ಅಕ್ಕಪಕ್ಕದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕಟ್ಟಡ ನಿರ್ಮಾಣ ಮತ್ತು ಉರುಳಿಸುವಿಕೆ ತ್ಯಾಜ್ಯಗಳ ಸುರಿಯಲಾಗಿದೆ.

ನಿರ್ಮಾಣದಲ್ಲೂ ಉತ್ತಮ ಗುಣಮಟ್ಟವಿಲ್ಲ. ಬಳಸಿರುವ ಕಬ್ಬಿಣದ ಮೆಶ್ಗಳು ತುಕ್ಕು ಹಿಡಿಯುತ್ತಿವೆ. ಇದರಲ್ಲಿ ಕೊಳಚೆ ನೀರು ಹರಿಯುತ್ತಿಲ್ಲ. ಸಂಸ್ಕರಣೆಯೂ ಆಗುತ್ತಿಲ್ಲ. ಯೋಜನೆಯ ಉದ್ದೇಶವೇ ಪ್ರಶ್ನಾರ್ಹವಾಗಿದೆ.

‘ನಮ್ಮ ಮನೆ ಎದುರು ಕೊಳಚೆ ನೀರು ಶೇಖರಣೆಗೊಳ್ಳದಂತೆ ನೋಡಿಕೊಳ್ಳುತ್ತೇವೆ. ಇಳಿಜಾರಿನಲ್ಲಿ ಹರಿದು ಹೋಗುವ ನೀರನ್ನು ನಾವು ಹೇಗೆ ತಡೆಯುವುದು? ಕೆಳ ಭಾಗದಲ್ಲಿ ಸೂಕ್ತ ವ್ಯವಸ್ಥೆ ಮಾಡಿ ಕಳುಹಿಸಬೇಕಾದ್ದು ಪಂಚಾಯಿತಿ ಕೆಲಸ. ರಸ್ತೆಯಲ್ಲಿ ನಡೆದು ಹೋಗುವ ನಮಗೂ ದುರ್ನಾತ ಬೀರುತ್ತದೆ. ಸೊಳ್ಳೆ ಕಾಟವೂ ಇದೆ. ಸಂಬಂಧಿಸಿದ ಅಧಿಕಾರಿಗಳು ಇದರ ನಿರ್ವಹಣೆಗೆ ಕ್ರಮವಹಿಸ ಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿಗಳಾದ ಮಂಜು ಮತ್ತು ಮಹದೇವ್.

‘ಕೊಳಚೆ ನೀರನ್ನು ಕೆಳಗೆ ತನ್ನಿ’

‘ಬೆಟ್ಟದಲ್ಲಿ ಮೂಲ ನಿವಾಸಿಗಳು ಯಾರು, ಹೊರಗಿನವರು ಯಾರು. ಮನೆ ಕಟ್ಟುವವರು ಯಾರು..? ಹೀಗೆ ಹಲವು ಪ್ರಶ್ನೆಗಳನ್ನು ಸ್ಥಳೀಯ ಆಡಳಿತ ಪರಿಹರಿಸಿಕೊಳ್ಳದಿದ್ದರೆ ಕೊಳಚೆ ನೀರಿನ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ. ಅದರ ನಿಯಂತ್ರಣವೇ ಅರ್ಧ ಸಮಸ್ಯೆಯನ್ನು ಪರಿಹರಿಸುತ್ತದೆ’ ಎಂದು ಮೈಸೂರು ಗ್ರಾಹಕರ ಪರಿಷತ್ ಸದಸ್ಯ ಎಸ್.ಶೈಲಜೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುಡಿಯುವ ನೀರನ್ನು ಬೆಟ್ಟಕ್ಕೆ ಪಂಪ್ ಮಾಡಿ ತೆಗೆಡುಕೊಂಡು ಹೋಗುವಂತೆಯೇ ಅಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಗುರುತ್ವಾಕರ್ಷಣಾ ಬಲದಿಂದ ಕೆಳಕ್ಕೆ ತಂದು ಸಂಸ್ಕರಿಸಿ, ಇತರ ಉದ್ದೇಶಕ್ಕೆ ಬಳಸುವುದು ಸೂಕ್ತ. ಬೆಟ್ಟದ ಮೇಲೆ ಎಸ್ಟಿಪಿ ಘಟಕಗಳನ್ನು ಮಾಡುವುದು, ಇಂಗು ಗುಂಡಿ ನಿರ್ಮಿಸುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸುತ್ತದೆ’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.