ಮೈಸೂರು: ‘ಮಹಾನಗರ ಪಾಲಿಕೆಯು ನೀರಿನ ಶುಲ್ಕ ಏರಿಕೆಗೂ ಮುನ್ನ, ನಗರದ ಎಲ್ಲಾ ವಾರ್ಡ್ಗಳಲ್ಲೂ ಕರವನ್ನು ಕಡ್ಡಾಯವಾಗಿ ಸಂಗ್ರಹಿಸಲಾಗುತ್ತಿದೆಯೇ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಬೇಕು’ ಎಂದು ಮಾಜಿ ಮೇಯರ್ ಶಿವಕುಮಾರ್ ಆಗ್ರಹಿಸಿದರು.

‘ಪಾಲಿಕೆಯು ಈಚೆಗೆ ನೀರಿನ ಸಂಪರ್ಕ ಶುಲ್ಕವನ್ನು ಶೇ 30 ಮತ್ತು ಒಳಚರಂಡಿ ಶುಲ್ಕವನ್ನು ಶೇ 10ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಆದರೆ ಇದರಿಂದ ನೀರಿನ ಕರ ಪಾವತಿಸುವವರಿಗೆ ಮಾತ್ರ ಹೊರೆಯಾಗುತ್ತದೆಯೇ ಹೊರತು, ಕಂದಾಯವನ್ನೇ ಕಟ್ಟದವರಿಗೆ ಯಾವುದೇ ಕ್ರಮ ಆಗುವುದಿಲ್ಲ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದರು.

‘ನಾನು ಮೇಯರ್ ಆಗಿದ್ದ ಅವಧಿಯಲ್ಲೂ ನೀರಿನ ಕರ ಹೆಚ್ಚಳ ವಿಷಯ ಪ್ರಸ್ತಾಪವಾಗಿತ್ತು. ಅಂದು ನಗರಪಾಲಿಕೆ ಆಯುಕ್ತರಾಗಿದ್ದ, ಜಿ. ಲಕ್ಷ್ಮೀಕಾಂತರೆಡ್ಡಿ ವಿಷಯ ಪ್ರಸ್ತಾಪಿಸಲು ಮುಂದಾಗಿದ್ದರು. ಆದರೆ, ಮೊದಲು ಎಲ್ಲ ವಾರ್ಡ್ಗಳಲ್ಲಿನ ಪ್ರತಿ ಮನೆಯಿಂದ ನೀರಿನ ಕರವನ್ನು ಕಡ್ಡಾಯವಾಗಿ ಸಂಗ್ರಹಿಸಿದ ಬಳಿಕ ಈ ವಿಷಯ ಮಂಡಿಸುವಂತೆ ಹೇಳಿದ್ದೆ. ಈಗ ಅಧಿಕಾರಿಗಳೇ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದ್ದಾರೆ’ ಎಂದು ದೂರಿದರು.

‘ಯುದ್ಧದ ಪರಿಸ್ಥಿತಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಲುಗಿರುವ ಸಾರ್ವಜನಿಕರಿಗೆ ಈ ಕರ ಏರಿಕೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಆಯುಕ್ತರು, ಹೆಚ್ಚುವರಿಯಾಗಿ ಸಂಗ್ರಹ ಆಗುವ ಮೊತ್ತವನ್ನು ಯಾವ ಯೋಜನೆಗಳಿಗೆ ಬಳಸುತ್ತೇವೆ ಎಂಬುದನ್ನು ಹೇಳಿಲ್ಲ. ವಾಸ್ತವದಲ್ಲಿ ನಗರದ ಅಭಿವೃದ್ಧಿ ಯೋಜನೆಗೆ ಸಂಬಂಧಪಟ್ಟ ಕಾರ್ಯ ಯೋಜನೆಗಳೇ ಇಲ್ಲ’ ಎಂದರು.

‘ಟೌನ್ಹಾಲ್ ಮುಂದೆ ಟಾಂಗಾ ನಿಲ್ದಾಣ ನಿರ್ಮಿಸಲು ಕಾರ್ಯಾದೇಶ ನೀಡಿ, ನಂತರ ವಾಪಸ್ ಪಡೆಯಲಾಯಿತು. ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳಿಗೆ ಹೊಸದಾಗಿ ತೆರಿಗೆ ಹಾಕಲು ಆದೇಶ ಮಾಡಿ, ನಿನ್ನೆ ವಾಪಸ್ ಪಡೆದುಕೊಂಡಿದ್ದಾರೆ. ಇದೆಲ್ಲವೂ ಆಡಳಿತಾತ್ಮಕ ಗೊಂದಲಗಳನ್ನು ಎತ್ತಿ ತೋರಿಸುತ್ತಿವೆ. ಆದ್ದರಿಂದ ನೀರಿನ ದರ ಏರಿಕೆಯ ಆದೇಶವನ್ನೂ ಕೂಡಲೇ ಮರು ಪರಿಶೀಲನೆ ಮಾಡಬೇಕು’ ಎಂದು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-39-1310632042

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.