ಮೈಸೂರು: ನೀರಿನ ಕರ ಏರಿಕೆ, ಒಳಚರಂಡಿ ಶುಲ್ಕಗಳ ಏರಿಕೆ ಮಾಡಿರುವ ಮಹಾನಗರಪಾಲಿಕೆಯ ತೀರ್ಮಾನವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ (ಎಸ್ಯುಸಿಐಸಿ) ಪಕ್ಷದ ಜಿಲ್ಲಾ ಸಮಿತಿ ಸದಸ್ಯರು ಪಾಲಿಕೆ ಮುಂಭಾಗದಲ್ಲಿ ಶನಿವಾರ ಪ್ರತಿಭಟಿಸಿದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಬಿ.ರವಿ ಮಾತನಾಡಿ, ‘ನೀರಿನ ಕರವನ್ನು ಕನಿಷ್ಠ ಶೇ 25ರಷ್ಟು ಹೆಚ್ಚಿಸಲಾಗಿದೆ. ನೀರಿನ ಕರದ ಶೇ 30ರಷ್ಟು ಇದ್ದ ಒಳಚರಂಡಿ ಶುಲ್ಕವನ್ನು ಶೇ 40ಕ್ಕೆ ನಿಗದಿಪಡಿಸಲಾಗಿದೆ. ಇದರಿಂದ ಒಳಚರಂಡಿ ಶುಲ್ಕವು ಸುಮಾರು ಶೇ 73 ರಷ್ಟು ಏರಿಕೆ ಮಾಡಿದಂತಾಗಿದೆ. ಪಾಲಿಕೆಯ ಈ ಕ್ರಮದಿಂದ ನೀರಿನ ಕನಿಷ್ಠ ಗೃಹಬಳಕೆಗೆ ಇದುವರೆಗೆ ಬರುತ್ತಿದ್ದ ₹ 163 ಬಿಲ್ ಇನ್ನು ಮುಂದೆ ₹ 228ಕ್ಕೆ ಏರಿಕೆ ಆಗಲಿದೆ’ ಎಂದರು

‘ವಾಣಿಜ್ಯ, ಕೈಗಾರಿಕಾ ಬಳಕೆಗಳ ದರವನ್ನೂ ಏರಿಕೆ ಮಾಡಲಾಗಿದೆ. ಈಗಾಗಲೇ ವಿದ್ಯುತ್, ಅಡುಗೆ ಅನಿಲ, ಬಸ್ ಮತ್ತು ರೈಲು ಪ್ರಯಾಣ, ಔಷಧಿ, ಆಸ್ತಿ ತೆರಿಗೆ, ಮನೆ ಬಾಡಿಗೆ ಇತ್ಯಾದಿ ಜೀವನಾವಶ್ಯಕ ಸರಕು ಮತ್ತು ಸೇವೆಗಳ ಬೆಲೆ ತೀವ್ರವಾಗಿ ಏರಿಕೆ ಆಗಿರುವಾಗ ನೀರಿನ ದರ ಹೆಚ್ಚಳವು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಬೆಲೆ ಏರಿಕೆಯ ಈ ವಿಷ ವರ್ತುಲದಿಂದ ಜನರನ್ನು ಪಾರು ಮಾಡಬೇಕಾದ ಸರ್ಕಾರಗಳೇ ಇದಕ್ಕೆ ಕಾರಣವಾಗಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಭಾವಿಗಳ ಕೋಟಿಗಟ್ಟಲೆ ತೆರಿಗೆ ಬಾಕಿ ವಸೂಲಿ ಮಾಡದೆ ಉಳಿಸಿಕೊಂಡಿರುವ, ಸೋರಿಕೆ, ದುಂದು ವೆಚ್ಚ, ಕಳಪೆ ಕಾಮಗಾರಿ, ಭ್ರಷ್ಟಾಚಾರಗಳಿಂದ ರೋಗಗ್ರಸ್ತವಾಗಿರುವ ಪಾಲಿಕೆಗೆ ಎಷ್ಟೇ ತೆರಿಗೆ ಪಾವತಿಸಿದರೂ ಸುಧಾರಿಸುವುದಿಲ್ಲ ಎಂಬುದನ್ನು ಜನರು ಅನುಭವದಿಂದ ಕಲಿತಿದ್ದಾರೆ. ಪಾಲಿಕೆ ಜನರ ಮೇಲೆ ಮತ್ತೆ ಹೊರೆ ಹಾಕುವ ಮೊದಲು ಈ ಲೋಪಗಳನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ನಗರಪಾಲಿಕೆಯ ಹೆಚ್ಚುವರಿ ಆಯುಕ್ತೆ ಬಿ.ಎನ್. ವೀಣಾ ಮನವಿ ಸ್ವೀಕರಿಸಿದರು.

ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯರಾದ ಎಂ. ಉಮಾದೇವಿ, ಚಂದ್ರಶೇಖರ ಮೇಟಿ, ಜಿ.ಎಸ್. ಸೀಮಾ, ಪಿ.ಎಸ್. ಸಂಧ್ಯಾ, ಯಶೋಧರ್, ಹರೀಶ್, ಸುನಿಲ್, ಸುಮಾ, ಬಸವರಾಜು, ಆಸಿಯಾ ಬೇಗಂ, ನೀತುಶ್ರೀ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-39-1719069929

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.