ಮೈಸೂರು: ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಮಹಿಳಾ ದಿನಾಚರಣೆ ಅಂಗವಾಗಿ ಕೃಷಿ ಕಾರ್ಮಿಕ ಮಹಿಳೆಯರನ್ನು ಸನ್ಮಾನಿಸಲಾಯಿತು.

ಇಲ್ಲಿನ ಜಲದರ್ಶಿನಿ ಅತಿಥಿಗೃಹದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ, ನಂಜನಗೂಡು ತಾಲ್ಲೂಕು ಅಳಗಂಜಿಯ ನಾಗಮ್ಮ, ಮೈಸೂರು ತಾಲ್ಲೂಕು ವಾಜಮಂಗಲದ ಭಾಗ್ಯಮ್ಮ ಹಾಗೂ ಎಚ್.ಡಿ. ಕೋಟೆ ತಾಲ್ಲೂಕು ಶಾಂತಿಪುರ ಗ್ರಾಮದ ರೂಪಾ ಅವರನ್ನು ಸನ್ಮಾನಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ‘ಬೇಸಾಯ ಕಾರ್ಯಕ್ಕೆ ಬೆನ್ನೆಲುಬಾಗಿ ಸದಾ ದುಡಿಯುವ ಮಹಿಳೆಯರನ್ನು ಸನ್ಮಾನಿಸುವುದು ರೈತ ಸಂಕುಲಕ್ಕೆ ಗೌರವ ತಂದುಕೊಡುತ್ತದೆ. ಕೃಷಿ ಕಾರ್ಮಿಕರು ರೈತರ ಕಣ್ಣುಗಳಿದ್ದಂತೆ. ಅದರಲ್ಲೂ ಕೃಷಿ ಕಾರ್ಮಿಕ ಮಹಿಳೆಯರು ನಮ್ಮ ಸಮಾಜದ ಶಕ್ತಿಯಾಗಿದ್ದಾರೆ. ಅವರ ಶ್ರಮದಿಂದಲೇ ಈ ಕ್ಷೇತ್ರ ಬೆಳೆಯುತ್ತಿದೆ’ ಎಂದರು.

‘ಅವರನ್ನು ಗೌರವದಿಂದ ಕಾಣುವುದು, ಅವರ ಜೀವನ ಮಟ್ಟ ಸುಧಾರಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಸರ್ಕಾರ ಕೃಷಿ ಕಾರ್ಮಿಕ ಮಹಿಳೆಯರಿಗೆ ಉಚಿತ ಆರೋಗ್ಯ ಸೇವೆ ಹಾಗೂ ಜೀವನ ಭದ್ರತೆಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕೃಷಿ ಕ್ಷೇತ್ರದಲ್ಲಿ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ದುಡಿಮೆಯಲ್ಲಿ ಮುಂದಿದ್ದಾರೆ’ ಎಂದರು.

‘ವಿಧಾನಮಂಡಲ ಅಧಿವೇಶನದಲ್ಲಿ ಜನರ ಧ್ವನಿ ಆಗಬೇಕಾಗಿದ್ದ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚಿಂತಿಸಬೇಕಾದ ಶಾಸಕರು ಹೈಟೆಕ್ ಭಿಕ್ಷುಕರಂತೆ ಐಪಿಎಲ್ ಕ್ರಿಕೆಟ್ ಟೂರ್ನಿಯ ಟಿಕೆಟ್ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಹೇಳಿದರು.

ಪತ್ರಕರ್ತ ಮಹಿ ಮಹೇಶ್, ‘ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ತೋರಿಸಿದ್ದಾರೆ. ಕೃಷಿ ಕ್ಷೇತ್ರದಲ್ಲೂ ಪುರುಷರಷ್ಟೇ ಸಮಾನವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರಗಳು ಎಲ್ಲ ರಂಗದಲ್ಲೂ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡಬೇಕು’ ಎಂದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಖಜಾಂಚಿ ಎಂ.ಬಿ. ಚೇತನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ವರಕೋಡು ನಾಗೇಶ್, ರಾಜೇಶ್, ದೇವನೂರು ವಿಜಯೇಂದ್ರ, ಕಿರಗಸೂರು ಪ್ರಸಾದ್ ನಾಯಕ, ಅಂಬಳೆ ಮಂಜುನಾಥ್, ಸಾತಗಳ್ಳಿ ಬಸವರಾಜ್, ಕಾಟೂರು ಮಹದೇವಸ್ವಾಮಿ, ದೇವನೂರು ಮಹಾದೇವಪ್ಪ, ಕೂರ್ಗಳ್ಳಿ ರವಿಕುಮಾರ್, ಕೆಂಡಗಣ್ಣಸ್ವಾಮಿ, ವಾಜಮಂಗಲ ಮಹಾದೇವು, ಪ್ರಭುಸ್ವಾಮಿ, ರಂಗರಾಜು, ಕಮಲಮ್ಮ, ರೂಪಾ ಮುದುಕನಪುರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.